ಉತ್ತರಪ್ರಭ
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುಂದಿನ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ದಿನಾಂಕ 15-11-2022ರ ವರೆಗೆ ಸಮಯಾವಕಾಶ ನೀಡಲಾಗಿತ್ತು.
ಆದರೆ, ನಿರೀಕ್ಷೆಗೂ ಮೀರಿದ ಆಕಾಂಕ್ಷಿಗಳಿದ್ದು, ವಿಪರೀತ ಒತ್ತಡ ಇರುವುದರಿಂದ ಈ ಕಾಲಾವಧಿಯನ್ನು ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ಕೊನೆಯ ದಿನಾಂಕವನ್ನು 21.11.2022ರ ಸೋಮವಾರ ಸಂಜೆ 06.00 ಗಂಟೆಯ ವರೆಗೆ ವಿಸ್ತರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

ಈ ದಿನಾಂಕವನ್ನು ಮುಂದುಡಲು ಕಾಂಗ್ರೆಸ್ ಪಕ್ಷದ ಹಲವು ಹಾಲಿ ಶಾಸಕರಾಗಲಿ ಹಾಗೂ ಮಾಜಿ ಶಾಸಕರಾಗಲಿ ಈ ಬಾರಿ ನಿಗದಿತ ದಿನಾಂಕದಲ್ಲಿ ಅರ್ಜಿ ಸಲ್ಲಿಸದ ಕಾರಣ ಮುಂದುಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.