ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತವೆ ಎಂದು ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಜಾರಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೆಲವು ವಿನಾಯಿತಿಗಳು ಇವೆ ಎಂದು ಅವರು ಹೇಳಿದರು.
ಡಿ.ವಿ.ಸದಾನಂದಗೌಡ ಅವರು ವಿಮಾನಯಾನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ದಿಗ್ಬಂಧನ ವಿಧಿಸುವುದಿಲ್ಲವೇ? ಎಂಬ ಪ್ರಶ್ನೆ ಎದುರಾಗಿತ್ತು. ವಿಪಕ್ಷಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದವು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಮತ್ತು ಫಾರ್ಮಾಸ್ಯುಟಿಕಲ್ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಔಷಧಿ ಮತ್ತು ಇತರೆ ವಸ್ತುಗಳ ಕೊರತೆ ಎದುರಾದಲ್ಲಿ ಆಗ ವೈದ್ಯರು ಏನು ಮಾಡುತ್ತಾರೆ? ಆಗ ಅದು ಸರ್ಕಾರದ ವೈಫಲ್ಯವೇ? ದೇಶಕ್ಕೆ ಅಗತ್ಯವಾಗಿರುವ ಔಷಧಿಗಳನ್ನು ಸರಬರಾಜು ಮಾಡುವುದು ನನ್ನ ಜವಾಬ್ದಾರಿ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You May Also Like

ವಾಲಿಬಾಲ್ ಪಂದ್ಯಾಟ : ಹಳಕಟ್ಟಿ ಶಾಲೆ ಬಾಲಕಿಯರ ತಂಡ ಸಾಧನೆ

ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ  2022-23…

ರೈಲು ಹಳಿಗೆ ತಲೆ ಕೊಟ್ಟು ಗದಗ ಜಿಲ್ಲೆ ಯುವಕ ಯಲವಿಗಿಯಲ್ಲಿ ಆತ್ಮಹತ್ಯೆ

ಹುಬ್ಬಳ್ಳಿ: ರೈಲ್ವೆ ಹಳಿಗೆ ತೆಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು ತಾಲೂಕಿನ ಯಲವಿಗಿಯಲ್ಲಿ ನಡೆದಿದೆ.…

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷ ಜನವರಿ 9 ರಿಂದ…

ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ…