ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ನಂರುಶಿ ಕುಂಬಾರ ಅವರು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದವರು. ಸದ್ಯ ಬೆಂಗಳುರಿನ ಮೆಟ್ರೋ ಉದ್ಯೋಗಿಯಾಗಿರುವ ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.

ಗಜಲ್

ವುಹಾನ್ ನಿಂದ ಹುಟ್ಟಿದ ಅಗೋಚರ ಶಕ್ತಿ ಪಡೆದ ಕೊರೋನಾ ನಾನು

ಅಸುರರ ವರಪುತ್ರನಾಗಿ ಜನಿಸಿ ನಿಮ್ಮಲಿ ಮೆರೆದ ಕೊರೋನಾ ನಾನು

ಊರು ತಿರುಗುವವರನು ಕೈ-ಕಾಲು ಮುರಿದು ಮನೆಯಲಿ ಬಂಧಿ ಮಾಡಿರುವೆ

ಹೊರ ಬಂದವರ ಒಳಹೊಕ್ಕು ನಿಧಾನದಿ ಬರೆ ಎಳೆದ ಕೊರೋನಾ ನಾನು

ಅಹಂಕಾರದಿ ಮೆರೆಯುವವರೆಲ್ಲ ಮುದುಡಿ ಮೂಲೆಯಲಿ ಕುಳಿತಿದ್ದಾರೆ

ಮನದ ಕರೆಗಂಟೆ ನಿಲ್ಲಸಲು ಜವರಾಯನ ಕರೆದ ಕೊರೋನಾ ನಾನು

ಪಟ್ಟಕಟ್ಟಿ ಆಳುವ ರಾಜರ ತಲೆಗಳು ನನ್ನಯ ಕಾಲ ಅಡಿ ಬಿದ್ದಿವೆ

ಅಳಿಯದೇ ದ್ವಿಗುಣಿಯಾಗಿ ನಿಮ್ಮ ಜೀವದಲಿ ನಲಿದ ಕೊರೋನಾ ನಾನು

ನೀವು ಬಂದು ಕರೆಯದೆ ಬರುವವನಲ್ಲ, ಬಂದರೆ ಬೇಗ ಬಿಡುವುದಿಲ್ಲ

ಮನುಜರೆಲ್ಲರು ಮಾಡಿದ ಪ್ರಕೃತಿ ನಾಶಕೆ ಸಿಡಿದ ಕೊರೋನಾ ನಾನು

ಗಂಗೆಯ ಒಡಲು ಓಝೋನ್ ಪದರವ ನನ್ನ ಮರಣದ ನಂತರ ನೋಡಿ

ವಿಶ್ವ ಸಮರದಂತೆ ಸಹಸ್ರ ನರರ ಜೀವ ತೆಗೆದ ಕೊರೋನಾ ನಾನು

ಬಡತನ ಹಸಿವು ಪರಿಚಯಿಸಿರುವೆ ಅದಕೆ ಶಹಬ್ಬಾಸ್ ನೀಡಿರಿ ನನಗೆ

ಕುಟುಂಬದ ಪ್ರೀತಿ ವಾತ್ಸಲ್ಯವ ಜನರಲಿ ಸೆಳೆದ ಕೊರೋನಾ ನಾನು

ಈಗಾದರೂ ಇಟ್ಟಿರುವುದ ಕೊಟ್ಟು ಕೊಟ್ಟಿರುವುದ ಮರೆತು ಜೀವಿಸಿರಿ

ಜೀವಕ್ಕಿಂತ ಹಣ ಹಿರಿದಲ್ಲವೆಂದು ಕಥೆ ಬರೆದ ಕೊರೋನಾ ನಾನು

ಮುಂದೆಯಾದರೂ ಅರಿತು ಬೆರೆತು ಬಾಳಿದರೆ ನಾ ಬಂದಿದ್ದು ಸಾರ್ಥಕ

 ನಂರುಶಿ ಬರೆಯುವ ಗಜಲ್ ಗಳಿಗೆ ತಲೆಬಾಗಿ ಮಣಿದ ಕೊರೋನಾ ನಾನು.

ನಂರುಶಿ ಕಡೂರು.

Leave a Reply

Your email address will not be published. Required fields are marked *

You May Also Like

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.

ರೋಣದಲ್ಲಿ ಸ್ವಚ್ಛತಾ ದಿನಾಚರಣೆ ಹಾಗು ಮಾಸ್ಕ್ ವಿತರಣೆ

ರೋಣ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ದಿನಾಚರಣೆ ಹಾಗೂ ಮಾಸ್ಕ ವಿತರಣೆ ಕುರಿತು ಕಾನೂನು ಶಿಬಿರ ಕಾರ್ಯಕ್ರಮ ಜರುಗಿತು.

ಮೂಲಭೂತ ಸೌಲಭ್ಯ ವಂಚಿತ ಪ್ರವಾಸಿ ಮಂದಿರ

ಅತಿಥಿ ಸತ್ಕಾರಕ್ಕಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಪ್ರವಾಸಿ ಮಂದಿರದ ಸಂರಕ್ಷಣೆಗೆ ನಿರ್ಲಕ್ಷ್ಯದಿಂದ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿಶ್ರಾಂತಿಗಾಗಿ ಬಂದೀರಿ ಜೊಕೆ ಪ್ರವಾಸಿಗರೆ ಎನ್ನುವಂತಿದೆ ಗದಗ ಜಿಲ್ಲೆ ಲಕ್ಷ್ಮೆಶ್ವರ ಪಟ್ಟಣದಲ್ಲಿ ಪ್ರವಾಸಿ ಮಂದಿರ.
ಹೂವಿನ ಹಡಗಲಿ: ಬಳ್ಳಾರಿ ಜಿಲ್ಲೆಯ ಹೂನಿನ ಹಡಗಲಿ ತಾಲೂಕಿನಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಒಟ್ಟು 9…