ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಬಾಗಲಕೋಟೆ : ಬಾದಾಮಿ ಮೂಲದ ಕೊರೊನಾ ಸೋಂಕಿತ 23 ವರ್ಷದ ಗರ್ಭಿಣಿಯಿಂದ ನೂರಾರು ಜನರಲ್ಲಿ ಆತಂಕ ಮನೆ ಮಾಡಿದೆ.

ಗರ್ಭಿಣಿಯೊಬ್ಬರಲ್ಲಿ ಭಾನುವಾರ ಸೋಂಕು ಇರುವುದು ಖಚಿತವಾಗಿತ್ತು. 5 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಸೋಂಕಿತ ಮಹಿಳೆ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಅಲ್ಲಿಂದ ಗದಗ ಜಿಲ್ಲೆಯ ಕೃಷ್ಣಾಪುರ ಗ್ರಾಮದಲ್ಲಿರುವ ತನ್ನ ಪೋಷಕರ ಮನೆಗೂ ತೆರಳಿದ್ದರು. ಎರಡು ವಾರಗಳ ಬಳಿಕ ಮತ್ತೆ ಬಾಗಲಕೋಟೆಯ ಅತ್ತೆ ಮನೆಗೆ ತೆರಳಿದ್ದರು.

ಆನಂತರ ಉಸಿರಾಟದ ತೊಂದರೆಯಿಂದಾಗಿ 3 ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಅದು ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ನಾಲ್ವರು ವೈದ್ಯರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಅಲ್ಲದೇ, ಮಹಿಳೆಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಜಗತ್ತಿನಾದ್ಯಂತ ಮುಂದುವರೆದ ಮರಣ ಮೃದಂಗ!

ಕೊರೊನಾ ಹಾವಳಿ ದಿನದಿಂದ ದಿನಕ್ಕೆಹೆಚ್ಚಾಗುತ್ತಿದ್ದು, ಇಲ್ಲಿಯವರೆಗೂ ಜಗತ್ತಿನಲ್ಲಿ 2.48 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ- ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ.