ಗದಗ: ಕೋವಿಡ್ -19 ಹರಡದಂತೆ  ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ   ರಾತ್ರಿ  7 ಗಂಟೆಯಿಂದ ಮುಂಜಾನೆ  7 ಗಂಟೆಯವರೆಗೆ   ಅನಿವಾರ್ಯ ಕಾರಣ   ಹೊರತುಪಡಿಸಿ ಎಲ್ಲ ವ್ಯಕ್ತಿಗಳ ಸಂಚಾರ ನಿಷೇಧಿಸಿದೆ. ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣ ಹೊರತುಪಡಿಸಿ  65 ವರ್ಷದ  ಮೇಲ್ಪಟ್ಟವರು , 10 ವರ್ಷದೊಳಗಿನ ಮಕ್ಕಳು,  ರೋಗಗ್ರಸ್ಥ ವ್ಯಕ್ತಿಗಳನ್ನು ಹಾಗೂ ಗರ್ಭಿಣಿಯರನ್ನು  ಕಡ್ಡಾಯವಾಗಿ ಅವರು  ಮನೆಯಲ್ಲಿಯೇ ಇರತಕ್ಕದ್ದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.  ಆದೇಶ ಉಲ್ಲಂಘಿಸಿದವರ ವಿರುದ್ಧ  ಸಾಂಕ್ರಾಮಿಕ ರೋಗಗಳ ಕಾಯಿದೆ 1897, ವಿಪತ್ತು ನಿರ್ವಹಣಾ ಕಾಯದೆ 2005, ಭಾರತೀಯ  ದಂಡ   ಕ್ರಮ ಜರುಗಿಸಲಾಗುವುದು.
        ಜಿಲ್ಲೆಯಾದ್ಯಂತ ಮುಂದುವರೆದ ಪ್ರತಿಬಂಧಕಾಜ್ಞೆ ಪರಿಣಾಮಕಾರಿ ಜಾರಿ  ಕುರಿತು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳೂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರರು ಹಾಗೂ ಸಂಬಂಧಿತ ಇಲಾಖಾ ಅಧಿಕಾರಿಗಳು ಕ್ರಮ  ಜರುಗಿಸುವಂತೆ  ಜಿಲ್ಲಾಧಿಕಾರಿಗಳ  ಆದೇಶದಲ್ಲಿ ತಿಳಿಸಲಾಗಿದೆ.  

Leave a Reply

Your email address will not be published. Required fields are marked *

You May Also Like

ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಅಭಿನಂದನೆಗಳು-ಸಿದ್ದಲಿಂಗಯ್ಯ ಹೊಂಬಾಳಿ ಮಠ

ಶಿರಹಟ್ಟಿ: ಹಿಂದೂ ಮುಸ್ಲಿಮ್ ಭಾವೈಕ್ಯತೆಗೆ ಹಾಗೂ ಕೋಮು ಸೌಹಾರ್ದತೆಗೆ ಹೆಸರಾಗಿರುವ ಶಿರಹಟ್ಟಿ ಪಕೀರೇಶ್ವರ ಸಂಸ್ಥಾನ ಮಠಕ್ಕೆ…

ಅನರ್ಹ ಮತ್ತು ನಕಲಿ ಪಡಿತರ ಚೀಟಿ ರದ್ದುಪಡಿಸಲು ಕ್ರಮ: ಮುಖ್ಯಮಂತ್ರಿ ಸೂಚನೆ

ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ಟ್ರಾಕ್ಟರ್, ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರಹಟ್ಟಿ ಕಟ್ಟಿಗೆ ಅಡ್ಡೆಗಳ ವಿಚಾರದಲ್ಲಿ ಪತ್ರಗಳ ತಾಪತ್ರೆಯ ತಪ್ಪೋದು ಯಾವಾಗ?

ಒಂದು ಮಾದ್ಯಮವಾಗಿ ಉತ್ತರಪ್ರಭ ಜನಪರವಾಗಿ ಕಾರ್ಯ ಮಾಡುತ್ತಿರುವಾಗ ಆಡಳಿತ ಯಂತ್ರಕ್ಕೆ ಮಾತ್ರ ಈ ವಿಚಾರದ ಗಂಭೀರತೆಯ ಅರ್ಥವಾಗುತ್ತಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಈಗಾಗಲೇ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳ ವಿಚಾರವಾಗಿ ಸೂಕ್ತ ಕ್ರಮಕ್ಕಾಗಿ ಶಿರಹಟ್ಟಿ ತಹಶೀಲ್ದಾರ್ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಆದೇಶಿಸಿದ್ದರು.

ಅವ್ವನ ಮಾತು ಎಚ್ಚರಿಕೆ ಗಂಟೆಯಿದ್ದಂತೆ

ಬದುಕಿನುದ್ದಕ್ಕೂ ಸದಾ ಅವ್ವ ನೆನಪಾಗುತ್ತಲೇ ಇರುತ್ತಾಳೆ. ಅವಳ ಮಾತು ಅಂದರೆ ವೇದ ವಾಕ್ಯವಿದ್ದಂತೆ. ಅದು ಸತ್ಯ ಅಂದರೆ ಸತ್ಯ ಅಷ್ಟೆ. ಏಕೆಂದರೆ ಸತ್ಯ ಯಾವತ್ತೂ ಸತ್ಯ! ಅದಕ್ಕೆ ಇನ್ನೊಂದು ಪರ್ಯಾಯವೇನೂ ಇರುವುದಿಲ್ಲ.