ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಗಿರಿಜಾ ದಿವಾನ್ ಬಿಸಿಲು ನಾಡು ಎಂದೇ ಪ್ರಸಿದ್ದಿ ಆಗಿರುವ ರಾಯಚೂರು ಜಿಲ್ಲೆಯ ಚಿನ್ನದ ನಾಡಾದ ಹಟ್ಟಿ ಚಿನ್ನದ ಗಣಿಯ ನಿವಾಸಿಯಾದ ಗಿರಿಜಾ ಇಂಜನೀಯರಿಂಗ್ ವಿದ್ಯಾರ್ಥಿನಿ. ಬಿಸಿಲ ಬೇಗೆಯಲಿ ನೊಂದ ಮನಸಿನ ಭಾವನೆಗಳನು ಬರಹ ರೂಪದಲ್ಲಿ ಹಾಳೆಗೆ ಇಳಿಸುವ ಪ್ರಯತ್ನವನ್ನಿಲ್ಲಿ ಗಿರಿಜಾ ಮಾಡಿದ್ದಾರೆ. ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಸಾಹಿತ್ಯದ ಜ್ಞಾನ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಂಜನೀಯರಿಂಗ್ ಓದುತ್ತಿದ್ದರೂ ಕೂಡ ಗಿರಿಜಾ ಅವರು ಬರೆಯುವ ಗೀಳಿಗೆ ಅಂಟಿಕೊಂಡಿದ್ದು ತುಂಬ ಸಂತಸ. ಕೊರೋನಾ ದಿಂದ ಮನುಕುಲಕ್ಕೆ ಆದ ಅರಿವನ್ನು ಅಕ್ಷರದ ರೂಪಕ್ಕಿಳಿಸುವ ಮೂಲಕ ಗಿರಿಜಾ ದಿವಾನ್ ಕರೋನಾ-ಹೈರಾಣ ಕವನವನ್ನು ಕಟ್ಟಿಕೊಟ್ಟಿದ್ದಾರೆ.

ಕರೋನ-ಹೈರಾಣ

ಕೊರೋನ ನೀ ಮಾಡುತ್ತಿರುವೆ ನಮ್ಮೆಲ್ಲರನ್ನು ಹೈರಾಣ

ಆದರೂ ನೀ ಮಾಡಿದೆ ಮಾಲಿನ್ಯ ತಡೆದು ಭೂ ತಾಯಿಗೊಂದು ಸನ್ಮಾನ

ಬಿತ್ತರಿಸುತ್ತಿರುವೆ ಸಂದೇಶವ ನಾನು

ಎಂದು ಮೆರೆಯದಿರು ಮನುಜ ನಿಸರ್ಗ ಮಾತೆಯನು

ತಾಯಿನಾಡು, ದೇಶ-ಭಾಷೆ ಮರೆತು

ರೆಕ್ಕೆ ಕಟ್ಟಿ ವಿದೇಶಕ್ಕೆ ಹಾರಿ ಹೋದ ಮನುಜನಿಗೆ ನೀ ತಿಳಿಸಿಕೊಟ್ಟೆ,

ನಿನ್ನ ತಾಯಿನಾಡೆ ನಿನಗೆ ಕೊನೆಗಾಸರೆ ಎಂದು

ಪಿಜ್ಜಾ –ಬರ್ಗರ್-ಕೆಎಫ್ಸಿ ಎಂದೂ ಆಗದು  

ನಿನ್ನ ತಾಯಿಯ ಕೈರುಚಿ ಗಿಂತಲೂ ಮುಂದು

ಆದರೂ ನಮ್ಮದೊಂದು ವಿನಂತಿ ನಿನ್ನಲ್ಲಿ

ವಿರಾಮ ಕೊಡು ನಿನ್ನ ಈ ಶಿಕ್ಷೆಯಲ್ಲಿ

ಬಲಿಯಾಗುತ್ತಿಹವು ಎಷ್ಟೋ ಮುಗ್ಧ ಜೀವಿಗಳು

ಹಸಿವೆಯಿಂದ ತಲ್ಲಣಿಸುತ್ತಿಹವು ಪ್ರಾಣಿಪಕ್ಷಿಗಳು

ಅರಿವಾಯಿತು ಮನುಕುಲಕೆ

ರೈತ ಬೆಳೆದ ಅಕ್ಕಿ, ಗೋಧಿ, ಧಾನ್ಯಗಳಿಗುಂಟು ಬೆಲೆ ಎಂದು

ನಾವು ಕೂಡಿಟ್ಟ ಕೋಟಿಗಲ್ಲವೆಂದು

ದುಡ್ಡೆ ದೊಡ್ಡಪ್ಪ ಎನ್ನುವ ದುರಾಸೆಯೊಂದು ದೂರವಾಯಿತು

ನಮ್ಮೂರೆ ನಮಗೆ ಸವಿಬೆಲ್ಲ ಎನ್ನುವುದು ಗೊತ್ತಾಯಿತು

ಗಿರಿಜಾ ದಿವಾನ್

Leave a Reply

Your email address will not be published. Required fields are marked *

You May Also Like

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಪಾಲಕ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ..

ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಜೂನ್ 18 ಕ್ಕೆ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದ ಮಹಾಮಾರಿ!

ಬೀದರ್: ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ನಿಟ್ಟಿನಲ್ಲಿ ಸಾವಿನ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.ಇಲ್ಲಿಯ…

ಮುಂಬಯಿನಲ್ಲಿ ಮನೆ ಮಾಡುತ್ತಿರುವ ಆತಂಕ!

ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ಮಿತಿ ಮೀರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ರಾಜ್ಯದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಕೆ.ಎಸ್ಆರ.ಟಿ.ಸಿ ನೌಕರರಿಗೆ ಸಂಬಳರಹಿತ ರಜೆ ಅಮಾನವೀಯ:ಸರ್ಕಾರ ದಿವಾಳಿಯಾಗಿದೆಯೇ?: ಸಿದ್ದರಾಮಯ್ಯ ಆಕ್ರೋಶ

ಕೆ.ಎಸ್.ಆರ.ಟಿ.ಸಿ ನೌಕರರಿಗೆ 1 ವರ್ಷ ಸಂಬಳರಹಿತ ರಜೆ ನೀಡಲು ಹೊರಟಿರುವುದು ಕಾರ್ಮಿಕ ವಿರೋಧಿ ನಡೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಸರ್ಕಾರದ ಯೋಚನೆ ಕಾರ್ಮಿಕ ವಿರೋಧಿ ಮತ್ತು ಅಮಾನವೀಯ