ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಗಿರಿಜಾ ದಿವಾನ್ ಬಿಸಿಲು ನಾಡು ಎಂದೇ ಪ್ರಸಿದ್ದಿ ಆಗಿರುವ ರಾಯಚೂರು ಜಿಲ್ಲೆಯ ಚಿನ್ನದ ನಾಡಾದ ಹಟ್ಟಿ ಚಿನ್ನದ ಗಣಿಯ ನಿವಾಸಿಯಾದ ಗಿರಿಜಾ ಇಂಜನೀಯರಿಂಗ್ ವಿದ್ಯಾರ್ಥಿನಿ. ಬಿಸಿಲ ಬೇಗೆಯಲಿ ನೊಂದ ಮನಸಿನ ಭಾವನೆಗಳನು ಬರಹ ರೂಪದಲ್ಲಿ ಹಾಳೆಗೆ ಇಳಿಸುವ ಪ್ರಯತ್ನವನ್ನಿಲ್ಲಿ ಗಿರಿಜಾ ಮಾಡಿದ್ದಾರೆ. ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಸಾಹಿತ್ಯದ ಜ್ಞಾನ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಂಜನೀಯರಿಂಗ್ ಓದುತ್ತಿದ್ದರೂ ಕೂಡ ಗಿರಿಜಾ ಅವರು ಬರೆಯುವ ಗೀಳಿಗೆ ಅಂಟಿಕೊಂಡಿದ್ದು ತುಂಬ ಸಂತಸ. ಕೊರೋನಾ ದಿಂದ ಮನುಕುಲಕ್ಕೆ ಆದ ಅರಿವನ್ನು ಅಕ್ಷರದ ರೂಪಕ್ಕಿಳಿಸುವ ಮೂಲಕ ಗಿರಿಜಾ ದಿವಾನ್ ಕರೋನಾ-ಹೈರಾಣ ಕವನವನ್ನು ಕಟ್ಟಿಕೊಟ್ಟಿದ್ದಾರೆ.

ಕರೋನ-ಹೈರಾಣ

ಕೊರೋನ ನೀ ಮಾಡುತ್ತಿರುವೆ ನಮ್ಮೆಲ್ಲರನ್ನು ಹೈರಾಣ

ಆದರೂ ನೀ ಮಾಡಿದೆ ಮಾಲಿನ್ಯ ತಡೆದು ಭೂ ತಾಯಿಗೊಂದು ಸನ್ಮಾನ

ಬಿತ್ತರಿಸುತ್ತಿರುವೆ ಸಂದೇಶವ ನಾನು

ಎಂದು ಮೆರೆಯದಿರು ಮನುಜ ನಿಸರ್ಗ ಮಾತೆಯನು

ತಾಯಿನಾಡು, ದೇಶ-ಭಾಷೆ ಮರೆತು

ರೆಕ್ಕೆ ಕಟ್ಟಿ ವಿದೇಶಕ್ಕೆ ಹಾರಿ ಹೋದ ಮನುಜನಿಗೆ ನೀ ತಿಳಿಸಿಕೊಟ್ಟೆ,

ನಿನ್ನ ತಾಯಿನಾಡೆ ನಿನಗೆ ಕೊನೆಗಾಸರೆ ಎಂದು

ಪಿಜ್ಜಾ –ಬರ್ಗರ್-ಕೆಎಫ್ಸಿ ಎಂದೂ ಆಗದು  

ನಿನ್ನ ತಾಯಿಯ ಕೈರುಚಿ ಗಿಂತಲೂ ಮುಂದು

ಆದರೂ ನಮ್ಮದೊಂದು ವಿನಂತಿ ನಿನ್ನಲ್ಲಿ

ವಿರಾಮ ಕೊಡು ನಿನ್ನ ಈ ಶಿಕ್ಷೆಯಲ್ಲಿ

ಬಲಿಯಾಗುತ್ತಿಹವು ಎಷ್ಟೋ ಮುಗ್ಧ ಜೀವಿಗಳು

ಹಸಿವೆಯಿಂದ ತಲ್ಲಣಿಸುತ್ತಿಹವು ಪ್ರಾಣಿಪಕ್ಷಿಗಳು

ಅರಿವಾಯಿತು ಮನುಕುಲಕೆ

ರೈತ ಬೆಳೆದ ಅಕ್ಕಿ, ಗೋಧಿ, ಧಾನ್ಯಗಳಿಗುಂಟು ಬೆಲೆ ಎಂದು

ನಾವು ಕೂಡಿಟ್ಟ ಕೋಟಿಗಲ್ಲವೆಂದು

ದುಡ್ಡೆ ದೊಡ್ಡಪ್ಪ ಎನ್ನುವ ದುರಾಸೆಯೊಂದು ದೂರವಾಯಿತು

ನಮ್ಮೂರೆ ನಮಗೆ ಸವಿಬೆಲ್ಲ ಎನ್ನುವುದು ಗೊತ್ತಾಯಿತು

ಗಿರಿಜಾ ದಿವಾನ್

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1694 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1694 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ರಾಜ್ಯದಲ್ಲಿಂದು 2496 ಪಾಸಿಟಿವ್, ಸಾವಿನ ಸಂಖ್ಯೆಯಲ್ಲೂ ಏರಿಕೆ: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 2496 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44077 ಕ್ಕೆ ಏರಿಕೆಯಾದಂತಾಗಿದೆ.

ಡ್ರೋನ್ ಪ್ರತಾಪ್: ಟಿವಿ ಸಂದರ್ಶನದಲ್ಲಿ ತೋರಿಸಿದ ಫೋಟೊದ ಅಸಲಿಯತ್ತು ಬಯಲು!

ಸ್ವಯಂಘೋಷಿತ 600 ಡ್ರೋನ್ ಸರದಾರ ಎನ್.ಎಂ.ಪ್ರತಾಪನ ಸುಳ್ಳುಗಳು ಒಂದೊಂದಾಗಿ ಹೊರಬರುತ್ತಿವೆ. ಬಿಟಿವಿಯಲ್ಲಿ ಸುದೀರ್ಘ ಸಂದರ್ಶನದಲ್ಲಿ ಈ ಹುಡುಗ ಮೊಬೈಲ್ ನಲ್ಲಿ ತೋರಿಸಿದ ಫೋಟೊಗಳ ಅಸಲಿಯತ್ತು ಬಯಲಾಗಿದೆ.

ಹೀಗೆ ಮುಂದುವರೆದರೆ ಸೋಂಕಿತರ ಸಂಖ್ಯೆ ಆಗಷ್ಟ್ ನಲ್ಲಿ ಎಷ್ಟಾಗಲಿದೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.