ಬೆಂಗಳೂರು: ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಲಾಗಿದ್ದು, ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಎಣ್ಣೆ ಹೈಕ್ಳು ಮಾತ್ರ ಬೆಳಿಗ್ಗೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.

ಬಾರ್ ಓಪನ್ ಮಾಡುತ್ತಿರುವುದಕ್ಕೆ ಮದ್ಯ ಸಿಗ್ತಿರೋದಕ್ಕೆ ಎಣ್ಣೆ ಪ್ರಿಯರು ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಒಂದೊಂದು ಬಾರ್ ಮುಂದೆ ಕ್ಯೂ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಬೆಳಿಗ್ಗೆ 4 ರಿಂದಲೇ ಎಣ್ಣೆ ಪ್ರಿಯರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಿಯಮಗಳನ್ನು ಪಾಲಿಸಿಯೇ ಎಣ್ಣೆ ಖರೀದಿಸುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಒಬ್ಬರಿಗೆ ಎರಡೇ ಲೀಟರ್ ಮದ್ಯ ಸಿಗಲಿದ್ದು, ಬೆಳಿಗ್ಗೆ 9 ರಿಂದ ಸಂಜೆ 7ರ ತನಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬಾರ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್ ನಿರ್ಮಿಸಲಾಗಿದೆ. ಅಲ್ಲದೇ, ಸರತಿಯಲ್ಲಿ ನಿಲ್ಲಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಾಕ್ಸ್ ಗಳನ್ನು ಕೂಡ ಹಾಕಲಾಗಿದೆ.

Leave a Reply

Your email address will not be published. Required fields are marked *

You May Also Like

ಅಕ್ರಮ ಅಕ್ಕಿ ದಂಧೆಗೆ ಲಾಕ್ಡೌನ್ ನಲ್ಲಿ ಹೆಚ್ಚು ಅಕ್ಕಿ ಕೊಟ್ಟಿದ್ದೆ ಅಕ್ರಮಕ್ಕೆ ಕಾರಣವಂತೆ!

ಲಾಕ್ ಡೌನ್ ಸಮಯದಲ್ಲಿ 5 ಕೆಜಿ ಬದಲಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಿದ್ದೆ ಅಕ್ರಮ ಅಕ್ಕಿದಂಧೆಗೆ ಕಾರಣ ದು ಆಹಾರ ಇಲಾಖೆ ಅಧಿಕಾರಿ ವಿಠಲ್ ರಾವ್ ಹೇಳಿದರು.

ನರೇಗಲ್ಲ್: ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರೋಣ ಶಿಕ್ಷಣ ಇಲಾಖೆ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ, ನರೆಗಲ್ ನ ಕು.ರಕ್ಷಿತಾ ಪಾಟೀಲ ಹಾಗೂ ಕುಮಾರಿ ನಿವೇದಿತಾ ಕಿಟಗೇರಿ, ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೇ. 17ರ ನಂತರ ಲಾಕ್ ಡೌನ್ ಸ್ಥಿತಿ ಹೇಗಿರಲಿದೆ?

ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ…