ಹಕ್ಕು ಪತ್ರಕ್ಕಾಗಿ ನೆರೆ ಸಂತ್ರಸ್ತರ ಸತ್ಯಾಗ್ರಹ

ರೋಣ: ಆಸರೆ ಮನೆಗಳ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ವೇಳೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.

ತಾಲೂಕಿನ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರ ಆಶ್ರಯ ಮನೆಗಳ ಹಕ್ಕು ಪತ್ರಕ್ಕಾಗಿ ಸುಮಾರು ದಿನಗಳಿಂದ ಮನವಿ ನಿಡಿದ್ದರು. ಅದಕ್ಕೆ ಅಧಿಕಾರಿಗಳು ಸ್ಪಂದಿಸದಿರದ ಕಾರಣ ಮಂಗಳವಾರ ಗ್ರಾಮಸ್ಥರು ತಹಸೀಲ್ದಾರ್ ಕಛೇರಿ ಮುಂದೆ ಧರಣಿ ಆರಂಭಿಸಿದ್ದರು.

ಐವರು ಆಸ್ಪತ್ರೆಗೆ ದಾಖಲು

ಹೆಜ್ಜೆನು ದಾಳಿಗೊಳಗಾದ ಹನಮಂತ ಛಲವಾದಿ ಹಾಗೂ ಪ್ರವೀಣ್ ಬಡಿಗೇರ್, ಶೇಕಪ್ಪಗಾಣಿಗೇರ, ಶಿವಪ್ಪ ಶಂಕ್ರಪ್ಪಅಗಡಿ, ಮೆಬೂಬಸಾಬ ಯ. ನದಾಫ್, ಮಾರುತಿ ಕುರುಬರ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಈ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ದಾಳಿಗೊಳಗಾದ ವಿಶೇಷಚೇತನನಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇಷ್ಟೆಲ್ಲ ಘಟನೆ ನಡೆದಾಗಲೂ ಈ ಬಗ್ಗೆ ತಹಶೀಲ್ದಾರರು ಮಾತ್ರ ಸ್ಪಂದಿಸಲಿಲ್ಲ ಎನ್ನುವುದು ಪ್ರತಿಭಟನಾಕಾರರ ಅಸಮಾಧಾನ. ತಮ್ಮಕಾರ್ಯಾಲಯದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಹೆಜ್ಜೆನು ದಾಳಿ ನಡೆಸಿದಾಗಲೂ ತಹಶೀಲ್ದಾರರು ಮಾತ್ರ ತಮ್ಮ ಕೆಲಸದಲ್ಲಿ ತಲ್ಲೀನವಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟುಆಕ್ರೋಶ ಹೆಚ್ಚಿಸಿತು.

ಸತ್ರ ಗುಟಕ್ಕ ಬಡಿಯಾಕ್‌ ಜಾಗಾ ಇಲ್ಲಾ

ಸಾಹೇಬ್ರೆ ನಾವು ಹನ್ನೆರಡು ವರ್ಷಗಳಿಂದ ಹೋರಾಟ ಮಾಡ್ತಾ ಬಂದೀವಿ. ನಮಗೆ ನೀವು ಬರೀ ಆಶ್ವಾಸನೆ ಕೊಡ್ತಾನಾ ಬಂದೀರಿ. ನಿಮ್ಮಂತ ಅಧಿಕಾರಿಗಳು ಎಷ್ಟೋ ಜನ ಬಂದು ಹೋದರು. ಆದ್ರ ನಮಗೆ ಒಬ್ರೂ ಸರಿಯಾದ ನ್ಯಾಯ ನೀಡಲಿಲ್ಲ. ಅದಕ್‌ ನಾವು ಇವತ್ತಿನಿಂದ ಅಮರಣ ಉಪವಾಸ ಇದ್ದು ನಮ್ಮ ಹಕ್ಕು ಪತ್ರ ಪಡದ್ ಮ್ಯಾಲ ಇಲ್ಲಿಂದ ಹೋಗ್ತಿವಿ ಅಂತ ಪ್ರತಿಭಟನಾಕಾರರು ತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವಾಗ ವೃದ್ಧೆಯೊಬ್ಬರನ್ನು ಸಮಾಧಾನ ಪಡಿಸಲು ಮುಂದಾದ ತಹಶೀಲ್ದಾರ್, ಅಜ್ಜಿ.., ಅಜ್ಜಿ.. ಸ್ವಲ್ಪ ಸುಮ್ಮನಿರಿ ಎಂದು ಹೆಳ್ಳುತ್ತಿರುವಾಗ ಸಿಟ್ಟಿನಿಂದ ವೃದ್ಧೆಯೊಬ್ಬಳು ಏ ಎಪ್ಪಾ ಅಜ್ಜಿತಗೊಂಡು ಏನ್ ದಾಳಿ ಹೊಡಿತಿ. ನಾ ಸತ್ರ ಗೋಟಕ್ ಬಡಿಯಾಕ ಸ್ವಲ್ಪ ಜಾಗ ಇಲ್ಲಾ. ನಮ್ಮ ಹಕ್ಕು ಪತ್ರ ನಮಗ ಕೊಡ್ರಿ ಇಲ್ಲಂದ್ರ ನಮ್ಮನ್ನು ಇಲ್ಲೇ ಸಾಯಕ ಬಿಡ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಜ್ಜಿ ಮಾತಿಗೆ ಮೌನ ತಾಳಿ ತಹಶೀಲ್ದಾರ ಕಾರ್ಯಾಲಯಕ್ಕೆ ಮರಳಿದರು.

ದಶಕದಿಂದಲೂ ಆಶ್ರಯ ಮನೆಗಳ ಹಕ್ಕು ಪತ್ರ ಪಡೆಯಲು ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಸಂತ್ರಸ್ತರಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಹಕ್ಕು ಪತ್ರ ನೀಡಬೇಕು ಎಂದು ಈ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.

ಹಕ್ಕು ಪತ್ರ ನೀಡುವವರೆಗೂ ಹೋರಾಟ ನಿಲ್ಲುವದಿಲ್ಲ

ರೋಣ:ತಾಲೂಕಿನ ಗಾಡಗೋಳಿ ಗ್ರಾಮಕ್ಕೆ ನೆರೆ ಬಂದು 12 ವರ್ಷಗಳು ಗತಿಸಿದರು ಪರಿಹಾರವೆಂದು ನೀಡಿದ ಆಶ್ರಯ ಮನೆಗಳಿಗೆ ಇನ್ನೂ ತನಕ ಹಕ್ಕು ಪತ್ರ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದು ನಮಲ್ಲಿ ಸುಮಾರು 500 ಮನೆಗಳು ಅವಶ್ಯವಿದ್ದು ಇದುವರೆಗೂ ಹಕ್ಕು ಪತ್ರ ನೀಡುತ್ತಿಲ್ಲ 2009 ರಿಂದ ಇಲ್ಲಿಯ ವರೆಗೆ ಹೋರಾಟ ನಿಂತಿಲ್ಲ ನಮ್ಮ ಹಕ್ಕು ನಮಗೆ ನೀಡಿ ಇಲ್ಲಾಂದ್ರೆ ಹೋರಾಟ ನಿಲ್ಲಿಸುವದಿಲ್ಲ.

-ಲಲಿತಾ ಪಂಚಾಳ, ಗ್ರಾಮಸ್ಥೆ

ಎಸ್.ವೈ.ಗಾಣಿಗೇರ, ಸಿದ್ದು ಬೊಮ್ಮಣ್ಣಗೌಡ, ಮಹಾಂತೇಶ್ ಪೂಜಾರ, ವೀರಣ್ಣ ತಳವಾರ, ಶರಣಪ್ಪಜಂಗಣ್ಣವರ, ಪ್ರಭಾಕರ್ ಪಂಚಾಳ, ಯಲ್ಲಪ್ಪ ತಳವಾರ, ಮುತ್ತಣ್ಣ ಹಾಲನ್ನವರ, ಶಶಿಧರ್ ಪಂಚಾಳ, ಅಲ್ಲಯ್ಯ ಪಟ್ಟದಕಲ್ಲು, ಶಿವಾನಂದ್ ಬೀಳಗಿ, ಶಾರವ್ವ ದೇಸಾಯಿ, ಲಲಿತಾ ಪಂಚಾಳ, ಶಿವಕ್ಕ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ರೈತ ವಿರೋಧಿ ಕಾಯ್ದೆಗಳು ತಕ್ಷಣವೇ ರದ್ದು ಮಾಡಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರೈಲ್ ರೋಕೋ ಚಳುವಳಿಯನ್ನು ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ದಂಪತಿಯ ಬರ್ಬರ ಹತ್ಯೆ

ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.

ನಿವೃತ್ತ ಪ್ರಾಚಾರ್ಯ ಡಿ.ಡಿ. ಕಡೇಮನಿ ನಿಧನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್…

ಪಶುವೈದ್ಯಕೀಯ ಕಾಲೇಜಿಗೆ ನೀರು ಕೊಡಿ

ಪಶುವೈದ್ಯಕೀಯ ಕಾಲೇಜಿಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.