ಕೇಳ್ರಪ್ಪೋ ಕೇಳ್ರಿ………

ಇದು ಕೊಡಿಯಾಲ ಗ್ರಾಮ ಪಂಚಾಯತಿ ಪ್ರಕಟಣೆ..

ದಯವಿಟ್ಟು ಗಮನವಿಟ್ಟು ಕೇಳ್ರಿ

ಕೋಡಿಯಾಲ ಹೊಸಪೇಟಿಯಿಂದ ಹರಿಹರಕ್ಕಾಗಲಿ… ದಾವಣಗೇರಿಗಾಗಲಿ..

ಯಾರ ಆಚೆ ಹೋಗ ಕೂಡದು.

ಮತ್ತು ದಾವಣಗೆರೆ ಯಿಂದ ಹರಿಹರದಿಂದ ಯಾರಾದ್ರು ನೆಂಟರದರಾ ಅಂತ ಹೇಳಿ ಬಂದ್ರ

ಅವ್ರಿಗೆ ಮೆಡಿಕಲ್ ಚೆಕಪ್ ಮಾಡಿಸಿಕೊಂಡು

ಆಶಾ ಕಾರ್ಯಕರ್ತೆಯರಿಗಾಗಲಿ, ಇಲ್ಲ ಪಂಚಾಯತಿಯವರಿಗಾಗಲಿ, ಇಲ್ಲ ಮಲೇರಿಯಾ ಡಾಕ್ಟರ್ ಮಾಹಿತಿ ತಿಳಿಸ್ರಿ

ಅವ್ರು 14 ದಿವಸ ಒಳಾಗ ಇರಾಕ ಹೇಳ್ತಾರಾ

ಇನ್ನೊಂದು ವಿಷಯಾ ಏನಪಾ ಅಂದ್ರ

ದಯವಿಟ್ಟು ದಾವಣಗೇರಿ ಹರಿಹರಿದ್ದ ಹಣ್ಣು ತರಕಾರಿ ಮಾರೋರ ಬಂದ್ರ

ಅವ್ರ ಹತ್ರಾ ಏನೂ ತಗಣಾಕ ಹೋಗಬ್ಯಾಡ್ರಿ ಹೆಣ್ಣು ಮಕ್ಳು ಕಲ್ಲ ತಗಂಡ ಬೆನ್ನತ್ತಿ ಓಡಿಸ್ರಿ.

ಕೇಳ್ರಪ್ಪೋ ಕೇಳ್ರಿ ಆ ಊರಿಂದ ಯಾರಾದ್ರು ಬಂದ್ರ ಕಲ್ಲು ತಗೊಂಡು ಓಡಸ್ರಿ… ಹೀಗೊಂದು ಡಂಗುರ ಸಾರಿದ್ದು ಹಾವೇರಿ ಜಿಲ್ಲೆಯಲ್ಲಿ.

ಹಿಂಗೊಂದು ಡಂಗೂರ ಸಾರಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟ ಗ್ರಾಮ ಪಂಚಾಯತ ಯಿಂದ. ಈಗಾಗಲೇ ಕೆಲ ದಿನಗಳಿಂದ ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಗರದಿಂದ ಸಮೀಪ ಇರುವ ಕೊಡಿಯಾಲ ಹೊಸಪೇಟ ಗ್ರಾಮದಲ್ಲಿ ಈ ರೀತಿಯಾಗಿ ಡಂಗುರದ ಮೂಲಕ ಜಾಗೃತಿ ಮೂಡಿಸಲಾಯಿತು.  

ದಾವಣಗೆರೆ, ಹರಿಹರ ನಗರದಿಂದ ಗ್ರಾಮಕ್ಕೆ ಯಾರು ಬರದಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ  ಗ್ರಾಮದಿಂದಲೂ ಸಹ ಯಾರೂ ಈ ನಗರಗಳಿಗೆ ತೆರಳಬಾರದು ಎಂದು ಹೇಳಲಾಗಿದ್ದು, ಒಂದು ವೇಳೆ ಹಾಗೇನಾದ್ರೂ ಯಾರಾದ್ರೂ ಬಂದಿದ್ರೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಇನ್ನು ಈ ನಗರಗಳಿಂದ ಗ್ರಾಮಕ್ಕೆ ಯಾರಾದರೂ ಹಣ್ಣು, ತರಕಾರಿ ಮಾರಾಟಕ್ಕೆ ಬಂದರೆ ಅಂಥವರ ಬಳಿ ಏನನ್ನು ಕೊಂಡುಕೊಳ್ಳಬಾರದು ಅವರಿಗೆ ಮಹಿಳೆಯರು ಕಲ್ಲು ತಗೊಂಡು ಓಡಿಸುವಂತೆ ಡಂಗೂರ ಸಾರಲಾಗಿದೆ.

Leave a Reply

Your email address will not be published. Required fields are marked *

You May Also Like

ಗುಜರಾತ್ ಬಿಜೆಪಿಗೆ ಶಾಕ್: ಕೈ ಶಾಸಕರು ರೆಸಾರ್ಟ್ ಗೆ ಶಿಫ್ಟ್..!

ಜೈಪುರ: ಗುಜರಾತ್ ಕಾಂಗ್ರೆಸ್ ನ ಕೆಲವು ಶಾಸಕರನ್ನು ಕಾಂಗ್ರೆಸ್ ರಾಜಸ್ಥಾನದ ಸಿರೋಹಿಯಲ್ಲಿರುವ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.…

ಎಟಿಎಂ ಕಳೆದ್ರೆ ಚಿಂತಿಸದಿರಿ, ನೀವು ಮಾಡಬೇಕಾಗಿದ್ದು ಏನು ಗೊತ್ತಾ?

ಅದೆಷ್ಟೋ ಜನ ಎಟಿಎಂ ಕಾರ್ಡ್ಗಳನ್ನು ಕಳೆದುಕೊಂಡು ಪರಿತಪಿಸಿದ್ದುಂಟು. ಮಾನಸಿಕ ನೆಮ್ಮದಿ ಕಳೆದುಕೊಂಡು ಇನ್ನಿಲ್ಲದೇ ಚಿಂತಿಸಿದ್ದುಂಟು. ಆದ್ರೆ ಇದೀಗ ಎಟಿಎಂ ಕಾರ್ಡ್ ಕಳೆದೊಯ್ತು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಚಿಂತೆಗೊಂದು ಪರಿಹಾರ ಇಲ್ಲಿದೆ.

ಅಡುಗೆ ಸಹಾಯಕಿಯಿಂದ ಮಕ್ಕಳ ಅನ್ನಕ್ಕೆ ಕನ್ನ…?

ಕೊಪ್ಪಳ: ಮಕ್ಕಳ 8 ತಿಂಗಳ ಪೌಷ್ಠಿಕ ಆಹಾರ ಧಾನ್ಯಕ್ಕೆ ಅಡುಗೆ ಸಹಾಯಕಿ ಕನ್ನ ಹಾಕಿದ ಘಟನೆ…

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.