ಬೆಂಗಳೂರು: ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಕು ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೋಂಡಿದ್ದ ವೇಳೆ ಅವರಿಗೆ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಲ್ಪಿಟೇಷನ್ಸ್ (ಅನಾರೋಗ್ಯದ ಕಾರಣ ಹೃದಯ ಬಡಿತದಲ್ಲಿ ಆಗುವ ಏರುಪೇರು) ಕಾರಣದಿಂದ ಸಂಜೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಬೆಳಕು  ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಾಘವೇಂದ್ರ ರಾಜ್‌ಕುಮಾರ್ ಸಂಜೆ 4 ಗಂಟೆಯವರೆಗೂ ಚಿತ್ರೀಕರಣದ ಸ್ಥಳದಲ್ಲೇ ಇದ್ದರು.

ಸೋಮವಾರದಿಂದ ಬೆಳಕು ಚಿತ್ರದ ಚಿತ್ರೀಕರಣ ಆರಂಭವಾಗಿದೆ, ಸಂಜೆ 4.15ಕ್ಕೆ ಸಾಮಾನ್ಯ ಆರೋಗ್ಯ ತಪಾಸಣೆ ಇದೆ ಎಂದು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದರು.  ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲೂ ಅವರು ಭಾಗವಹಿಸಿದ್ದರು ಎಂದು ಚಿತ್ರದ ನಿರ್ದೇಶಕ ಮಂಜುನಾಥ್ ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 239 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5452…

24 ಗಂಟೆಗಳಲ್ಲಿ ರಾಜ್ಯದಲ್ಲಿ 37 ಕೋವಿಡ್ ಪಾಸಿಟಿವ್

ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ.

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ…

ಶಾಶ್ವತ ಚಿರನಿದ್ರೆಗೆ ಜಾರಿದ ಚಿರು..!

ತಮಿಳುನಾಡು ಅಂದ ತಕ್ಷಣವೇ ಕಾವೇರಿ ನದಿ ವಹಿವಾಟೆ ನಮ್ಮ ಕಣ್ಣೆದುರು ಬರುತ್ತದೆ. ಕಾವೇರಿ ಸಮಸ್ಯೆ ತೀವ್ರ ಇದ್ದ 1980ರ ದಶಕದಲ್ಲಿ ಈ ಹುಡುಗ ಹುಟ್ಟುತ್ತಾನೆ. ಬೆಂಗಳೂರಿನಲ್ಲೆ ಬೆಳೆಯುವ ಈ ಹುಡುಗನ ಸಿನಿಮಾ ಹುಚ್ಚಿಗೆ ಅವರ ಮಾವ ನೀರು ಎರೆಯುತ್ತಾರೆ.