ಕೊರೋನಾ ಕಾವ್ಯ-5ನೇ ಸರಣಿಯಲ್ಲಿಂದು ಗದಗಿನ ಸಾಹಿತಿ ನಿರಂತರ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎ.ಎಸ್.ಮಕಾನದಾರ್ ಅವರು ರಚಿಸಿದ ಕವನ. ಪ್ರಸ್ತುತ ಸಂದರ್ಭದಲ್ಲಿ ಮಕಾನದಾರ್ ಅವರ ಕಾವ್ಯ ಆ ಕಾಲಕ್ಕೆ ಕಾಯುವೆ ಶಿರ್ಷಿಕೆಯೇ ಸೂಚಿಸುತ್ತದೆ ಅವರ ಕಾವ್ಯದಲ್ಲಿನ ಕನಸು ಹಾಗೂ ಹಂಬಲ. ಇಂದಿನ ದಿನಮಾನದಲ್ಲಿ ವಾಸ್ತವಕ್ಕೆ ಹತ್ತಿರವಾಗುವಂತಹ ಮನಸು ಕಟ್ಟುವ ಕಾವ್ಯವವನ್ನಿಲ್ಲಿ ಕಟ್ಟಿಕೊಟ್ಟಿದ್ದಾರೆ. .

ಆ ಕಾಲಕ್ಕೆ ಕಾಯುವೆ

ಮಸೀದೆಯ ಅಜಾನ್
ಚರ್ಚ್ ನಲ್ಲಿ ಕೇಳಬೇಕು

ಚರ್ಚ್ ನಲ್ಲಿಯ ಪ್ರಾರ್ಥನೆ
ಮಂದಿರ ದಲ್ಲಿ ಜರುಗಬೇಕು

ಮಂದಿರ ದಲ್ಲಿ ಸೇರಿದ ಜನ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು

ನನ್ನ ಕಾಯ
ಕರ್ಪುರ ವಾಗಬೇಕು

ಮಂದಿರ ಮಸೀದೆ
ಚರ್ಚ್ ನಲ್ಲಿ ಬೆಳಗಬೇಕು

ನರನಾಡಿಗಳು
ನೀಲಾಂಜನಕೆ ಬತ್ತಿ ಯಾಗಬೇಕು

ರಕುತ ಎಣ್ಣಿಯಾಗಬೇಕು
ಮನಸು ಬೆಣ್ಣಿಯಂತೆ ಕರಗಬೇಕು

ಆ ಕಾಲಕ್ಕಾಗಿ ನನ್ನ
ಕಣ್ಣುಗಳು ಕಾಯಬೇಕು

ಎ.ಎಸ್. ಮಕಾನದಾರ ಗದಗ

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10,560 ಕ್ಕೆ ಏರಿಕೆಯಾದಂತಾಗಿದೆ.

ಕಸಾಪ ಜಿಲ್ಲಾಧ್ಯಕ್ಷ ಶರಣು ಹೇಳಿಕೆ: ಸಾಹಿತ್ಯ ಭವನಗಳ ಕಾಮಗಾರಿ ಪೂರ್ಣಗೊಳಿಸಿದ ಹೆಮ್ಮೆ ಇದೆ

ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ ಕಳೆದ 24 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೋಣ ತಾಲೂಕ ಕನ್ನಡ ಸಾಹಿತ್ಯ ಭವನಗಳು ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.