ಕೊರೋನಾ ಕಾವ್ಯ-5

ಕೊರೋನಾ ಕಾವ್ಯ-5ನೇ ಸರಣಿಯಲ್ಲಿಂದು ಗದಗಿನ ಸಾಹಿತಿ ನಿರಂತರ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎ.ಎಸ್.ಮಕಾನದಾರ್ ಅವರು ರಚಿಸಿದ ಕವನ. ಪ್ರಸ್ತುತ ಸಂದರ್ಭದಲ್ಲಿ ಮಕಾನದಾರ್ ಅವರ ಕಾವ್ಯ ಆ ಕಾಲಕ್ಕೆ ಕಾಯುವೆ ಶಿರ್ಷಿಕೆಯೇ ಸೂಚಿಸುತ್ತದೆ ಅವರ ಕಾವ್ಯದಲ್ಲಿನ ಕನಸು ಹಾಗೂ ಹಂಬಲ. ಇಂದಿನ ದಿನಮಾನದಲ್ಲಿ ವಾಸ್ತವಕ್ಕೆ ಹತ್ತಿರವಾಗುವಂತಹ ಮನಸು ಕಟ್ಟುವ ಕಾವ್ಯವವನ್ನಿಲ್ಲಿ ಕಟ್ಟಿಕೊಟ್ಟಿದ್ದಾರೆ. .

ಆ ಕಾಲಕ್ಕೆ ಕಾಯುವೆ

ಮಸೀದೆಯ ಅಜಾನ್
ಚರ್ಚ್ ನಲ್ಲಿ ಕೇಳಬೇಕು

ಚರ್ಚ್ ನಲ್ಲಿಯ ಪ್ರಾರ್ಥನೆ
ಮಂದಿರ ದಲ್ಲಿ ಜರುಗಬೇಕು

ಮಂದಿರ ದಲ್ಲಿ ಸೇರಿದ ಜನ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು

ನನ್ನ ಕಾಯ
ಕರ್ಪುರ ವಾಗಬೇಕು

ಮಂದಿರ ಮಸೀದೆ
ಚರ್ಚ್ ನಲ್ಲಿ ಬೆಳಗಬೇಕು

ನರನಾಡಿಗಳು
ನೀಲಾಂಜನಕೆ ಬತ್ತಿ ಯಾಗಬೇಕು

ರಕುತ ಎಣ್ಣಿಯಾಗಬೇಕು
ಮನಸು ಬೆಣ್ಣಿಯಂತೆ ಕರಗಬೇಕು

ಆ ಕಾಲಕ್ಕಾಗಿ ನನ್ನ
ಕಣ್ಣುಗಳು ಕಾಯಬೇಕು

ಎ.ಎಸ್. ಮಕಾನದಾರ ಗದಗ

Exit mobile version