ಗದಗ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗದಗ ಜಿಲ್ಲೆ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಮದ್ಯೆ ಇಂದು ಗದಗ ಹೆರಿಗೆ ಆಸ್ಪತ್ರೆಗೂ ಕೊರೊನಾ ಭಯ ಶುರುವಾಗಿದ್ದು, ಆಸ್ಪತ್ರೆಯನ್ನು ಸ್ಯಾನಿಟೈಸರ್ ಮಾಡುವ ಸಾಧ್ಯತೆ ಇದೆ.

ಹೆರಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕಾರಣದಿಂದ ಗದಗ ನಗರದ ಕೆಸಿ ರಾಣಿ ರಸ್ತೆಯಲ್ಲಿರೋ ಹೆರಿಗೆ ಆಸ್ಪತ್ರೆಯನ್ನು ಶೀಲ್ ಡೌನ್ ಮಾಡುವ ಸಾಧ್ಯತೆ ಇದೆ.

ನಿನ್ನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗರ್ಭಿಣಿಗೆ ಸೋಂಕಿನ ಶಂಕೆ ವ್ಯಕ್ತವಾಗುತ್ತಿದ್ದಂತೆ ಇಂದು ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಯರು ಮನೆಗೆ ಮರಳಿದ್ದಾರೆ.

ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂಧಿಗಳಲ್ಲೂ ಆತಂಕ ಹೆಚ್ಚಾಗಿದೆ. ಇಡೀ ಆಸ್ಪತ್ರೆ ಸ್ಯಾನಿಟೈಸರ್ ಮಾಡಲು ಆರೋಗ್ಯ ಇಲಾಖೆ ತಯಾರಿ ನಡೆಸಿದ್ದು ಮಹಿಳೆಯ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

ಆಮರಣ ಉಪವಾಸ ಸತ್ಯಾಗ್ರಹ 3ನೇ ದಿನದತ್ತ : ಧರಣಿ ನಿರತರ ಆರೋಗ್ಯ ತಪಾಸಣೆ

ಉತ್ತರಪ್ರಭಆಲಮಟ್ಟಿ: ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿನ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು ಎಂದು…

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕನ್ನಡಿಗನ್ನು ರಕ್ಷಿಸಿದ ನಟ!

ಕೊರೊನಾ ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ನಟ ಸೋನು ಸೂದ್ ಮುಖ್ಯ ಪಾತ್ರ ವಹಿಸಿದ್ದರು.

ದಿನಾಂಕ 27-12-2021 ರಂದು ವೇತನ ಸಹಿತ ರಜೆಯನ್ನು ಘೋಷಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ

ಉತ್ತರಪ್ರಭ ಸುದ್ದಿ ಗದಗ: ರಾಜ್ಯದಲ್ಲಿ 58 ಸ್ಥಳಿಯ ಸಂಸ್ಥೆಗಳಿಗೆ ಹಾಗೂ ಅವಧಿ ಮುಕ್ತಾಯವಾದ ಮತ್ತು ಖಾಲಿ…