ನವದೆಹಲಿ : ಲಾಕ್ ಡೌನ್ ಇದ್ದರೂ ದೇಶದಲ್ಲಿ ಕೊರೊನಾ ಹತೋಟಿಗೆ ಬರುತ್ತಿಲ್ಲ. ಲಾಕ್ ಡೌನ್ ತೆರವಿಗೆ 3 ದಿನಗಳು ಬಾಕಿ ಇರುವಾಗಲೇ ಶುಕ್ರವಾರ ದಾಖಲೆ ಪ್ರಮಾಣದ ಏರಿಕೆ ಕಂಡಿದೆ.
ಮಹಾಮಾರಿ ಸೋಂಕಿಗೆ ಬಲಿಯಾದವರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 24 ಗಂಟೆಗಳಲ್ಲಿ 1,993 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 35,043ಕ್ಕೆ ಏರಿಕೆ ಕಂಡಿದೆ. ಒಂದೇ ದಿನದಲ್ಲಿ 73 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಈ ಮೂಲಕ 1,147ಕ್ಕೆ ಏರಿಕೆಯಾಗಿದೆ.
ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 10,478 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಗುಜರಾತ್ 4,082, ದೆಹಲಿ 3,515, ಮಧ್ಯಪ್ರದೇಶ 2,660, ರಾಜಸ್ತಾನ 2,438, ಉತ್ತರಪ್ರದೇಶ 2,203, ತಮಿಳುನಾಡು 2,162, ಆಂಧ್ರಪ್ರದೇಶದಲ್ಲಿ 403 ಜನರಲ್ಲಿ ಸೋಂಕು ಪತ್ತೆಯಾಗಿದೆ.

Leave a Reply

Your email address will not be published. Required fields are marked *

You May Also Like

ಮುಶಿಗೇರಿ: ನಾಗನಗೌಡ ಗೌಡರ ರಾಜ್ಯಕ್ಕೆ 2ನೇ ರ್ಯಾಂ ಕ್ ಪಡೆದು ಸೈಂಟಿಫಿಕ್ ಆಪೀಸರ್ ಹುದ್ದೆಗೆ ಆಯ್ಕೆ

ಗದಗ: ಪೊಲೀಸ್ ಇಲಾಖೆ ವತಿಯಿಂದ ಕಳೆದ ವರ್ಷ 28.05.2021 ರಂದು  ವಿಧಿವಿಜ್ಞಾನ  ಪ್ರಯೋಗಾಲಯ ವಿಭಾಗದಲ್ಲಿ  84…

ಗುತ್ತಿಗೆ ದಾರನಿಂದ ಕಳಪೆ ಕಾಮಗಾರಿ-ಗ್ರಾಮಸ್ಥರ ಆಕ್ರೋಶ

ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು…

ಮೊಟ್ಟೆ ಭಾಗ್ಯ ವಿಸ್ತರಿಸಿ ಬಜೆಟ್ ನಲ್ಲಿ ಘೋಷಿಸಿ- ಸರಕಾರಕ್ಕೆ ಆಗ್ರಹ

ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ…

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…