ಆತ್ಮಿಯರೇ
ಉತ್ತರ ಪ್ರಭ ನ್ಯೂಸ್ ಪೋರ್ಟಲ್ ನಲ್ಲಿ ಸಾಹಿತ್ಯ ವಿಭಾಗದ ಮಾರ್ಗದರ್ಶಕರಾಗಿ ಹಿರಿಯ ಸಾಹಿತಿ ಎ.ಎಸ್.ಮಕಾನದಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಕಥೆ ಹಾಗೂ ಕಾವ್ಯ ರಚನೆಯ ಮೂಲಕ ಮನೆಮಾತಾಗಿರುವ ಮಕಾನದಾರ ಅವರ ಕಾವ್ಯ ಪಠ್ಯ ಪುಸ್ತದಲ್ಲಿ ಪ್ರಕಟಗೊಂಡಿದೆ. ಹಲವು ಮಹತ್ವದ ಸಾಹಿತ್ಯ ಕೃತಿಗಳನ್ನು ಕೂಡ ಹೊರತಂದಿದ್ದಾರೆ. ಇವರ ಇತ್ತಿಚೆಗೆ ಪ್ರಕಟಗೊಂಡ ಅಕ್ಕಡಿ ಸಾಲು ಕೃತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿದೆ. ಉತ್ತರ ಪ್ರಭ ಪೋರ್ಟಲ್ ಮೂಲಕ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.
ಈ ನಿಮ್ಮ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಸುದ್ದಿ ಜೊತೆಗೆ ಸಾಹಿತ್ಯಕ್ಕೂ ಆದ್ಯತೆ ನೀಡಿದೆ. ಹೀಗಾಗಿ ಕೊರೊನಾ ಕಾವ್ಯ ಎನ್ನುವ ಹೆಸರಲ್ಲಿ ಕೊರೋನಾ ಕುರಿತಾದ ಕಾವ್ಯಗಳನ್ನು ಪ್ರಕಟಿಸಲಿದೆ. ಆಸಕ್ತರು ನೀವು ಬರೆದ ಕವನಗಳನ್ನು ನಮಗೆ ಕಳುಹಿಸಿಕೊಡಬಹುದಾಗಿದೆ. ನಿಮ್ಮ ಕವನದ ಜೊತೆಗೆ ನಿಮ್ಮ ಕಿರು ಪರಿಚಯ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಿ ಕೊಡಲು ಮನವಿ.

ಕವನ ಕಳಿಸಬೇಕಾದ ವಾಟ್ಸಅಪ್ ಸಂಖ್ಯೆ: 8151955826

Leave a Reply

Your email address will not be published. Required fields are marked *

You May Also Like

ಜೀವ, ಜೀವನ ಮತ್ತು ಆರ್ಥಿಕತೆ ಮೇಲೆ ಕರೋನಾ ಪರಿಣಾಮ

ಕರೋನಾ ಮಾನವನ ಮೇಲೆ ಬೀರುವ ಪ್ರಭಾವವನ್ನು ವಿಶ್ವ ಕಣ್ಣಾರೆ ಕಂಡಿದೆ. ಇನ್ನು ರೂಪಾಂತರಿ ಕೊರೋನಾ ವೈರಸ್ ಕೊಡುತ್ತಿರುವ ಕಾಟವೂ ಅಷ್ಟಿಷ್ಟಲ್ಲ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಸರಕಾರಕ್ಕೆ ಆತಂಕ ಸೃಷ್ಟಿಸಿದೆ.ಮತ್ತೊಂದೆಡೆ ಕೊರೋನಾ ವೈರಸ್ ಮನುಷ್ಯನ ದೇಹದ ಮೇಲೆ ಅದರಲ್ಲಿಯೂ ಮಕ್ಕಳು, ಯುವಕರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮತ್ತೊಂದಿಷ್ಟು ಅಧ್ಯಯನಗಳು ನಡೆದಿವೆ.

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…

ಅಮ್ಮನ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ತೆಲಂಗಾಣ: ವಿಧಿ ಎಂಥ ಕ್ರೂರಿ ಅಲ್ಲವೇ..? ಯಾರ ಬಾಳಲ್ಲಿ ಹೇಗೆಲ್ಲಾ ಆಟ ಆಡುತ್ತೋ ಗೊತ್ತೇ ಆಗುವುದಿಲ್ಲ. ಅದರಲ್ಲೂ ಕೊರೊನಾದ ಈ ದಿನಗಳಲ್ಲಿ ಇಂದು ಮಾತಾಡಿದವರು ನಾಳೆ ಇಲ್ಲವಾಗುತ್ತಿದ್ದಾರೆ. ಈಗ ಮಾತಾಡಿದವರು ಆ ಕ್ಷಣಕ್ಕೆ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಕನೋರ್ವ ತಾಯಿಯ ಮೃತದೇಹದ ದುರಿಗೆ ದಾಂಪತ್ಯಕ್ಕೆ ಕಾಲಿಟ್ಟು ಸಪ್ತಪದಿ ತುಳಿದ ಘಟನೆ ನಡೆದಿದೆ. ಈ ಮನಕಲಕುವ ಘಟನೆ ಕಂಡ ಗ್ರಾಮಸ್ಥರು ದೂರದಿಂದಲೇ ಕಣ್ಣೀರಿಟ್ಟಿದ್ದಾರೆ.

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..!

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..! ಗದಗ: ಪಕ್ಕದ ಬಾಗಲಕೋಟೆ ಜಿಲ್ಲೆಯಿಂದ ಗದಗ ಜಿಲ್ಲೆಯ…