Browsing Tag
education
39 posts
ಅಗಸ್ಟ್ ಮೊದಲ ವಾರ ಎಸ್ಎಸ್ಎಲ್ಸಿ ಫಲಿತಾಂಶ
ಅಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನ ವಿವಿಧ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯಾದ್ಯಂತ 220 ಕೇಂದ್ರಗಳಲ್ಲಿ ವಿವಿಧ ವಿಷಯಗಳ ಮೌಲ್ಯಮಾಪನ ನಡೆಯುತ್ತಿದ್ದು, ಈಗಾಗಲೇ 120 ಕೇಂದ್ರಗಳಲ್ಲಿ ಮೌಲ್ಯಮಾಪನ ಮುಗಿದಿದೆ ಎಂದರು.
ಬೆಳಿಗ್ಗೆ ಅಪ್ಪನ ಸಾವಿನ ದುರಂತ: ಗದಗನಲ್ಲಿ ಎಸ್.ಎಸ್.ಎಲ್.ಸಿ ಅಗ್ನಿ ಪರಿಕ್ಷೆ ಎದುರಿಸಿದ ಅನುಷಾ!
ಗದಗ: ಮುಂಜಾನೆ ಮರಳಿ ಬಾರದ ಲೋಕಕ್ಕೆ ಅಪ್ಪ ಹೋಗಿದ್ದಾನೆ. ಮನೆ ತುಂಬ ದು:ಖದ ವಾತಾವರಣ. ನೆರೆಹೊರೆಯವರು, ಸಂಬಂಧಿಕರು ಜಮಾಯಿಸುತ್ತಿದ್ದಾರೆ. ಈ ದುಗೂಡದಲ್ಲಿಯೂ ಗದಗಿನ ಈಶ್ವರ ನಗರದ ನಿವಾಸಿ, ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿನಿ 16ರ ಬಾಲಕಿ ಪಾಲಿಗೆ ಇವತ್ತಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇವಲ ಪರೀಕ್ಷೆ ಆಗಿರಲಿಲ್ಲ. ಇದು ಅಗ್ನಿ ಪರೀಕ್ಷೆ, ಧರ್ಮ ಪರೀಕ್ಷೆ.