ಗದಗ: ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳು ಓ.ಎಂ.ಆರ್ ಅರ್ಜಿಗಾಗಿ ಕಾಯದೆ ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಈ ಕೆಳಗಿನಂತೆ ಶುಲ್ಕ ಭರಣಾ ಮಾಡಲು ತಿಳಿಸಲಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಕಡೆಯ ದಿನಾಂಕ 31-7-2020, ಕಾಲೆಜಿನವರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಸಂದಾಯ ಮಾಡಬೇಕಾದ ದಿನಾಂಕ: 03-08-2020, ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ ಸಹಿತ ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಿನಾಂಕ: 05-08-2020, ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಒಂದು ವಿಷಯಕ್ಕೆ-140 ರೂ, ಎರಡು ವಿಷಯಕ್ಕೆ 270 ರೂ, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ ನಿಗದಿ ಪಡಿಸಲಾಗಿದೆ.

ಎಸ್.ಸಿ, ಎಸ್.ಟಿ, ಪ್ರವರ್ಗ-1 ವಿದ್ಯಾರ್ಥಿಗಳು ಸೇರಿದಂತೆ ಅಂಕಪಟ್ಟಿ 50 ಶುಲ್ಕ ನಿಗದಿಪಡಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

1 comment
Leave a Reply

Your email address will not be published. Required fields are marked *

You May Also Like

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರಗಳ ಸಾಧನೆ ಮನೆ-ಮನೆಗೆ ತಲುಪಿಸಿ- ಲಿಂಗರಾಜ ಪಾಟೀಲ್

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.

ಕಣ್ಮನ ಸೆಳೆದ ಗೊಂಬೆಗಳ ಕುಣಿತ- ಗಣೇಶ ವಿಸರ್ಜನೆ ರಂಗು…!

ವರದಿ: ಗುಲಾಬಚಂದ ಜಾಧವ ಉತ್ತರಪ್ರಭ ಸುದ್ದಿಆಲಮಟ್ಟಿ: ಬ್ರಹತ್ತಾಕಾರದ ರಂಗು ರಂಗಿನ ಗೊಂಬೆಗಳ ನಲಿದಾಟ. ಹಲಿಗೆ ವಾದ್ಯ…