ಉತ್ತರಪ್ರಭ, ಗದಗ :
ಇಂದು ಬುಧವಾರ ಬೆಳ್ಳಂಬೆಳಿಗ್ಗೆ ರಾಜ್ಯಾದ  ಗದಗ, ಬಳ್ಳಾರಿ, ಬೀದರ, ಬೆಂಗಳೂರು, ರಾಯಚೂರು, ಬೆಳಗಾವಿ, ತುಮಕೂರು, ಚಿಕ್ಕಮಗಳೂರು, ಈ ಎಂಟು ಜಿಲ್ಲೆಗಳಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ, ಕಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ಕಛೆರಿ, ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಲಾಗಿದೆ.


ಗದಗ : ಹುಚ್ಚೇಶ್ ಬಂಡಿವಡ್ಡರ್ (ಎಇಇ ನಗರಸಭೆ)
ಗದಗ-ಬೆಟಗೇರಿ ನಗರಸಭೆ ಕಾರ್ಯನಿರ್ವಾಹಕ ಇಂಜಿನಿಯರ್  ಗೆ ಸೇರಿದ ಗದಗ, ಗಜೇಂದ್ರಗಡ, ಬಾಗಲಕೋಟೆ ಈ ಮೂರುಕಡೆ ಲೋಕಾಯುಕ್ತ ಎಸ್ ಪಿ ಹನಮಂತರಾಯ್, ಡಿವೈಎಸ್ ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಇನ್ಸಪೆಕ್ಟರ್ ಪರಮೇಶ್ ಕವಟಗಿ, ಪಿಎಸ್ ಐ ಎಸ್ ಎಸ್ ತೇಲಿ ಸೇರಿದಂತೆ ಧಾರವಾಡ ಲೋಕಾ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

ಬಳ್ಳಾರಿ : ಆರ್ ಹೆಚ್ ಲೋಕೇಶ್
ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣ ಅಧಿಕಾರಿ ಆರ್ ಹೆಚ್ ಲೋಕೇಶ್ ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ಬೆಳಗಾವಿ: ಖಾನಾಪುರ ತಹಶಿಲ್ದಾರ ಗಾಯಕವಾಡ
ಬೆಳಗಾವಿ ಜಿಲ್ಲೆಯ ಖಾನಾಪುರ ತಹಶಿಲ್ದಾರ ಪ್ರಕಾಶ್ ಶ್ರೀಧರ್ ಗಾಯಕವಾಡ ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ಬೆಂಗಳೂರು: ಜಂಟಿ ನಿರ್ದೇಶಕಿ ಶೋಭಾ (ಸಾರಿಗೆ ಇಲಾಖೆ)
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ, ಕಛೇರಿ ಸೇರಿ ಹಲವೆಡೆ ದಾಳಿ ನಡೆಸಲಾಗಿದೆ.

ಬೀದರ್: ಇಂಜಿನಿಯರ್ ರವೀಂದ್ರ
ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರವೀಂದ್ರ ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ತುಮಕೂರು: ಎಸ್.ರಾಜು (ನಿವೃತ್ತ ಆರ್.ಟಿ.ಓ)
ತುಮಕೂರು ಜಿಲ್ಲೆಯ ನಿವೃತ್ತ ಅರ್ ಟಿ ಓ ಅಧಿಕಾರಿ ಎಸ್.ರಾಜು ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ಚಿಕ್ಕಮಗಳೂರು: ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ರಾಯಚೂರು: ಹುಲಿರಾಜ್ (ಬೆಸ್ಕಾಂ ಜೆಇ)
ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಮನೆ, ಕಛೆರಿ ಹಾಗೂ ಇವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿದೆ.

ಈ ಎಂಟು ಜಿಲ್ಲೆಯ ಅಧಿಕಾರಿಗಳ ಮನೆ, ಕಛೇರಿ ಹಾಗೂ ಮಾಹಿತಿ ಮೇರೆಗೆ ಇವರ ಆಪ್ತರು, ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಲಾಗಿದೆ. ದಾಳಿಯ ಬಳಿಕ ಎಲ್ಲ ದಾಖಲೆಗಳ ಪರಿಶೀಲನೆ ಮಾಡಿ ನಂತರ ಈ ಅಧಿಕಾರಿಳ ಅಕ್ರಮ ಆಸ್ತಿಗಳ ಮಾಹಿತಿಯನ್ನು ತಿಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿವೃತ್ತ ಕರಣಿಕ ಶಾಂತೂ ತಡಸಿಗೆ ಹೃದಯಸ್ಪರ್ಶಿ ಸನ್ಮಾನ ಗುರುಗಳೇ ದೇವರು ಶಿಷ್ಯರೇ ಭಕ್ತರು-ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ

ಉತ್ತರಪ್ರಭ ಸುದ್ದಿಆಲಮಟ್ಟಿ: ಮಕ್ಕಳನ್ನು ಪರಿಪೂರ್ಣ ಶಿಲೆಗಳನ್ನಾಗಿ ರೂಪಿಸುವಲ್ಲಿ ಗುರುಗಳ ಹಾಗು ಗುರುಮಾತೆಯರ ಪಾತ್ರ ಬಹುಮುಖ್ಯ ಎಂದು…

ಅರಣ್ಯ ಇಲಾಖೆಯ ದೌರ್ಜನ್ಯ : ರೈತ ಮಹಿಳೆ ಬಲಿ

ಆಕ್ರೋಶಗೊಂಡ ಗ್ರಾಮಸ್ಥರು: ಅರಣ್ಯಾಧಿಕಾರಿಗಳ ದಿಗ್ಬಂಧನ ಉತ್ತರಪ್ರಭಮುಂಡರಗಿ: ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು…

ವಿಧಾನ ಪರಿಷತ ಚುಣಾವಣೆ ಕಾಂಗ್ರೇಸಿನ ಸಲಿಮ್ ಅಹ್ಮದ್ ಗೆಲುವು

ಉತ್ತರಪ್ರಭ ಸುದ್ದಿ ಧಾರವಾಡ: ಇಂದು ನಡೆದ ವಿಧಾನ ಪರಿಷತ ಚುಣಾವಣೆ ಮತ ಎಣಿಕೆಯಲ್ಲಿ  ಧಾರವಾಡ ಮತ…

ನಕಲಿ ರೆಮ್ಡಿಸಿವರ್ ಮಾರಾಟ : ಓರ್ವ ಸಿಸಿಬಿ ಬಲೆಗೆ

ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹರಡುತ್ತಿದ್ದು, ಇದೀಗ ಕೆಲವರು ಅದನ್ನೆ ಬಂಡವಾಳವಾಗಿಟ್ಟುಕೊಂಡು ಸೋಂಕಿತರಿಗೆ ನೀಡುವ ರೆಮ್ ಡಿಸಿವರ್ ಚುಚ್ಚುಮದ್ದನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.