ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಮಕ್ಕಳನ್ನು ಪರಿಪೂರ್ಣ ಶಿಲೆಗಳನ್ನಾಗಿ ರೂಪಿಸುವಲ್ಲಿ ಗುರುಗಳ ಹಾಗು ಗುರುಮಾತೆಯರ ಪಾತ್ರ ಬಹುಮುಖ್ಯ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಳ್ಳಿ ಹೇಳಿದರು. ಶುಕ್ರವಾರ ಇಲ್ಲಿನ ಎಂ.ಎಚ್.ಎಂ.ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಸಂಸತ್ತು, ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗು ನಿವೃತ್ತ ದ್ವೀತಿಯ ದಜೆ೯ ಸಹಾಯಕ ಎಫ್.ಎನ್.ತಡಸಿ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ ಎಂಬುದು ಜೀವಂತ ದೇವಾಲಯ. ದೇವಸ್ಥಾನದಲ್ಲಿ ಶಿಲ್ಪಿ ಕೆತ್ತಿರುವಂಥ ಮೂತಿ೯ಗಳನ್ನಿರಿಸಿ ಪೂಜೆ ಮಾಡುತ್ತೆವೆ.ಆ ಮೂತಿ೯ಗಳು ಮಾತನಾಡುವುದಿಲ್ಲ.ಆದರೆ ಶಾಲೆ ಎಂಬ ದೇಗುಲದಲ್ಲಿ ಮಕ್ಕಳೇ ಜೀವಂತ ಭಕ್ತರು.ಗುರುಗಳೇ ಜೀವಂತ ದೇವರು.ಇವರ ಕಲಿಕಾ ಹಾಗು ಕಲಿಸುವಿಕೆಯ ಸಮಾಗಮದಿಂದ ಸಾಕ್ಷಾತ್ಕಾರ ನೆಲೆಗೊಳ್ಳುತ್ತದೆ.ಜೀವಂತಿಕೆಯ ಕಲ್ಪನೆ,ಗುರಿ ಇರಿಸಿಕೊಂಡು ಭವ್ಯ ಭವಿಷ್ಯ ಈಡೇರಿಸುವುದು ಶಾಲೆ, ಕಾಲೇಜುಗಳು ಮಾತ್ರ.ಇದನ್ನು ಯಾರು ಮರೆಯಬಾರದು ಎಂದರು.

ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳ ಜೊತೆ ಸಕ್ರಿಯ ನಂಟು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.ಪ್ರತಿ ಮಕ್ಕಳಲ್ಲೂ ಭಿನ್ನ ಪ್ರತಿಭೆ ಹುದುಗಿರುತ್ತವೆ. ಹೊರತರಲು ಪಾಲಕರು,ಗುರುಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು. ಭಾವನೆಗಳನ್ನು ಅರಳಿಸಿ ಕಲಾ ಕೌಶಲ್ಯ ಸಮಾಜಕ್ಕೆ ಸಮಪಿ೯ಸಬೇಕು ಎಂದರು. ಯಾವರಂಗವೂ ಕನಿಷ್ಠವಲ್ಲ.ಸಾಧನೆ ಗೈದಿರುವ ಸಾಧಕರ ಇತಿಹಾಸ ಮೆಲುಕು ಹಾಕಬೇಕು. ಭಾಗಶಃ ಎಲ್ಲ ಸಾಧಕರ ಚರಿತ್ರೆ ಅವಲೋಕಸಿದಾಗ ಸಣ್ಣ ಮನೆತನದಲ್ಲಿ ಜನ್ಮ ತಳದವರೇ ಹೆಚ್ಚು.ಅವರೆಲ್ಲ ಸಣ್ಣ ಪುಟ್ಟ ಶಾಲೆ ಅದರಲ್ಲೂ ಸಕಾ೯ರಿ ಶಾಲೆಯಲ್ಲಿ ಅಭ್ಯಸಿಸಿದವರೇ ಅಧಿಕ ಎಂಬುದು ಗಮನಿಸಬೇಕು. ಅಣು ವಿಜ್ಞಾನಿ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿ ಹೋಗಿದ್ದಾರೆ. ಇಡೀ ತಮ್ಮ ಜೀವನ ದೇಶಕ್ಕಾಗಿ,ಸಮಾಜಕ್ಕಾಗಿ ಸಮಪಿ೯ಸಿದ್ದಾರೆ.ಅವರಂತೆ ಯುವಜನತೆಯಲ್ಲಿ ಅರ್ಪಣೆ ಭಾವ ಮೂಡಿ ಬರಲಿ ಎಂದರು.

ಸುವರ್ಣಯುಗದಲ್ಲಿ ನಮ್ಮ ದೇಶ ಇಂದು ಮಿಂದೇಳುತ್ತಿದೆ.ಹಿಂದುಸ್ತಾನದ ಬಲಾಢ್ಯ ತಾಕತ್ತು ಹೊರ ಜಗತ್ತಿಗೆ ಫಸರಿಸಿದೆ ಎಂದರು. ನ್ಯೂಸ್ ಪೇಪರ ನಿತ್ಯ ಓದಿ! ಮುಖ್ಯ ಅತಿಥಿ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಎಚ್.ಸುರೇಶ, ಜಗತ್ತಿನಲ್ಲಿ ನಡೆಯುವ ದೈನಂದಿನ ವಿಚಾರಗಳನ್ನು ಪತ್ರಿಕೆ ಹಾಗು ಟಿ.ವಿ.ಮಾಧ್ಯಮ ಮೂಲಕ ಮಕ್ಕಳು ತಿಳಿದುಕೊಳ್ಳಬೇಕು. ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬರೀ ಶಿಕ್ಷಣದ ಪಠ್ಯ ಪುಸ್ತಕಗಳಿಗೆ ಸೀಮಿತವಾಗಬಾರದು. ಜಗತ್ತು ವಿಶಾಲವಾಗಿದೆ. ಇಂದು ಬಲು ವೇಗದಿಂದ ಸಾಗುತ್ತಿದೆ. ಎಲ್ಲ ವಿದ್ಯಮಾನಗಳನ್ನು ಅರಿತು ಪರಿಪಕ್ವವಾಗಿ ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಸಮಯ ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಂಡು ಸುಂದರ ಭವಿಷ್ಯ ಸ್ವಯಂ ನಿಮಾಣ ಮಾಡಿಕೊಳ್ಳಬೇಕು. ಕಡಿಮೆ ಮಾತು ಹೆಚ್ಚು ಕೆಲಸ ಸಾಗುತ್ತಿರಲಿ.ಬದುಕು ಹಸನವಾಗಲು ಶಿಕ್ಷಣ ಮತ್ತು ಸಂಸ್ಕಾರ ಇವೆರಡು ಅಮೂಲ್ಯ ಪಾತ್ರ ವಹಿಸುತ್ತವೆ ಎಂದರು.

ದೇಶದ ನೆಲ ಪವಿತ್ರವಾಗಿದೆ.ಸಂಪನ್ನತೆಯ ಭೂವೊಡಲು ಇಲ್ಲಿದೆ. ಒಳ್ಳೆಯ ಕಾಯಕದ ಕೆಲಸ ಮಾಡಿ ಸಮಾಜದ ಅಭಿವೃದ್ಧಿ, ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದರು. ಅಧೀಕ್ಷಕ ಅಭಿಯಂತರ ಡಿ.ಬಸವರಾಜ, ಅನನ್ಯ ಬೆಟ್ಟ, ನದಿ,ಹಳ್ಳ ಕೊಳ್ಳ, ಸಮುದ್ರ, ಹಿಮಾಲಯದಂಥ ಮೇರು ಪರ್ವತ ಇವೆಲ್ಲವೂ ದೇಶ ಹೊಂದಿದ್ದು ಕೊರತೆಗಳ ಕೊರಗು ಅಷ್ಟೇನೂ ಇಲ್ಲ ಎಂದರು. ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಮಕ್ಕಳಿಗೆ ಉತ್ತಮ ಸನ್ನಡತೆ,ಸಂಸ್ಕಾರ,ವಿದ್ಯೆ ನೀಡಿ ಸುಸಂಸ್ಕೃತರನ್ನಾಗಿ ಸಮಾಜದಲ್ಲಿ ಬಾಳಿ ಬದುಕುವಂತೆ ಗುರು ಬಳಗ ದೀಕ್ಷಾಭ್ಯಾಸ ಕೊಡಿ. ಪರಿಶ್ರಮ ಜೀವಿಗಳಾಗಿ ಸಮಾಜಮುಖಿ ಕಾರ್ಯಗಳು ಯುವಜನತೆ ಮಾಡಬೇಕು. ಒಳ್ಳೆಯ ಸಂಸ್ಕಾರದಿಂದಲೇ ಬದುಕು ಪಾವನ,ಸಾರ್ಥಕ ಎಂದರು.

ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ,ಎಸ್.ವಿ.ವಿ.ಸಂಸ್ಥೆಯ ಅಡಿಯಲ್ಲಿನ ಶಾಲಾ,ಕಚೇರಿಗಳ ಸೇವೆ ಅಚ್ಚುಕಟ್ಟಾಗಿ ನಿರ್ವಹಿಸಿ ನಿವೃತ್ತಿ ಯಾಗಿರುವ ಶಾಂತೂ ತಡಸಿ ಕರ್ತವ್ಯ ನಿಷ್ಠೆ,ಪ್ರಾಮಾಣಿಕತೆಯ ವೃತ್ತಿಲೋಕಾನುಭದಿಂದ ಜನಮನ್ನಣೆಗೆ ಪ್ರೀತಿ ಪಾತ್ರರಾಗಿ ಆದರ್ಶ ಪ್ರಾಯರಾಗಿದ್ದಾರೆ. ಅವರ ಭಾವಿ ಜೀವನ ಉಜ್ವಲ,ಪ್ರಜ್ವಲವಾಗಲಿ ಎಂದು ಶುಭ ಹಾರೈಸಿದರು. ಎಸ್.ಆಯ್.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಅಶೋಕ ಉಪ್ಪಾರ, ಪ್ರಿ.ಪಿ.ಎ.ಹೇಮಗಿರಿಮಠ ಅತಿಥಿಗಳಾಗಿದ್ದರು. ಸೇವಾ ನಿವೃತ್ತಿ ಹೊಂದಿದ ಕರಣಿಕ ಶಾಂತೂ ತಡಸಿ ಅವರನ್ನು ಶಾಲೆಯ ಪರವಾಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಶಾಲು ಹೊದಿಸಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

You May Also Like

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ಕು ಜನರ ಸಾಮೂಹಿಕ ಅಂತ್ಯಸಂಸ್ಕಾರ ಸಂಸ್ಕಾರ ಮಾಡಿದ ಬಿನ್ನಾಳ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒಂದೇ…

ಹಾವೇರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಸವಣೂರಿಗೆ ಬಂದಿದ್ದ ಮೂವರು ಮೂವರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಧೃಡವಾದಂತಾಗಿದೆ. ಇನ್ನೊಂದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಸಂವಿಧಾನಕ್ಕೆ ತೆಲೆ ಬಾಗಿ ನಡೆದರೆ ಬದುಕು ಪಾವನ ಮಕ್ಕಳು ಶೈಕ್ಷಣಿಕ ಪ್ರಭಲತೆ ಸಾಧಿಸಬೇಕು – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ…