ಆಕ್ರೋಶಗೊಂಡ ಗ್ರಾಮಸ್ಥರು: ಅರಣ್ಯಾಧಿಕಾರಿಗಳ ದಿಗ್ಬಂಧನ

ಉತ್ತರಪ್ರಭ
ಮುಂಡರಗಿ:
ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆ ದಿನ ಕೇಲೂರು ಗ್ರಾಮದಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಿ ಅವರ ಹೊಲವನ್ನು ಕಸಿದುಕೊಳ್ಳಲು ಯತ್ನಿಸಿದಾಗ ರೈತ ಮಹಿಳೆಯರು ಮತ್ತು ಅಲ್ಲಿದ್ದ ಎಲ್ಲರು ಪರಿ ಪರಿಯಾಗಿ ಬೇಡಿಕೊಂಡರು ಅದನ್ನು ಕ್ಯಾರೆ ಅನ್ನದ ಅರಣ್ಯ ಇಲಾಖೆ ಅವರ ಮೇಲೆ ದೌರ್ಜನ್ಯ ಮಾಡಿ ಅವರನ್ನು ಹೆದರಿಸಿ ಬೆದರಿಸಿದ ಘಟನೆಯು ಇದಾಗಿದೆ.

ಮೃತಪಟ್ಟ ಮಹಿಳೆ ನಿರ್ಮಲಾ ರಾಮನಗೌಡ ಪಾಟೀಲ (34)

ಇದರ ಬೆನ್ನಲ್ಲೇ ಮನನೋಂದು ಇಬ್ಬರು ಮಹಿಳೆಯರು ವಿಷಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಅವರನ್ನು ಆಸ್ಪತ್ರೆಗೆ ಸಾಗಿಸದೇ ಇರುವುದು ಅಧಿಕಾರಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಇಬ್ಬರು ಮಹಿಳೆಯರಾದ 1. ಸರೋಜವ್ವ ಶಾಂತಗೌಡ ಪಾಟೀಲ, 2. ನಿರ್ಮಲಾ ರಾಮನಗೌಡ ಪಾಟೀಲ, ಹೊಲವು ಹೋದ ಮೇಲೆ ಬದುಕಿ ಎನೂ ಪ್ರಯೋಜನ ಎಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆಲೂರು ಗ್ರಾಮದಲ್ಲಿ ನಡೆದಿದೆ.

ಸರೋಜವ್ವ ಶಾಂತಗೌಡ ಪಾಟೀಲ

ರೈತ ಮಹಿಳೆಯರು ಗಂಭೀರವಾಗಿದ್ದು ಅವರನ್ನ ಅಲ್ಲಿನ ಸಾರ್ವಜನಿಕರೇ ಮುಂಡರಗಿ ತಾಲೂಕಾಸ್ಪತ್ರೆಗೆ ಆಂಬುಲನ್ಸ್ ಮುಖಾಂತರ ಸಾಗಿಸಿದ್ದು, ಸ್ಥಿತಿ ಗಂಭೀರವಾದ ಕಾರಣ ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಾಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ನಿರ್ಮಲಾ ರಾಮನಗೌಡ ಪಾಟೀಲ ಎಂಬ ಮಹಿಳೇಯು ಸಾಯಂಕಾಲ ಗದಗ ಜಿಲ್ಲಾಸ್ಪತ್ರೆಯಲ್ಲಿ ಕೊನೇ ಉಸಿರನ್ನೆಳೆದಿದ್ದಾರೆಂದು ತಿಳಿದುಬಂದಿದೆ.
ರೈತ ಮಹಿಳೆ ಮೃತಪಟ್ಟಿದ್ದು, ಕೇಲೂರು ಗ್ರಾಮದಲ್ಲಿ ಆ ಮಹಿಳೆಯರ ಹೋಲದಲ್ಲಿ ಅರಣ್ಯಾಧಿಕಾರಿಗಳು ಜೆಸಿಬಿಯಿಂದ ಟ್ರೇಂಚ್ ತಗೇಸುತ್ತಿದ್ದರು ಅವರ ರಕ್ಣಣೆಗೆಂದು ಡಿಆರ್ ಪೊಲೀಸರನ್ನು ಕರೆದೊಯ್ಯಲಾಗಿತ್ತು, ಆಗತಾನೆ ಆ ಮಹಿಳೆಯು ಮೃತ ಪಟ್ಟ ಸುದ್ದಿಯನ್ನು ತಿಳಿದ ಗ್ರಾಮದ ಜನರು ಆಕ್ರೋಶಕ್ಕೋಳಗಾಗಿ ಅಲ್ಲಿದ್ದ ಅರಣ್ಯಾಧಿಕಾರಿಗಳ ವಾಹನವನ್ನು ದ್ವಂಸಮಾಡಿ ಕಲ್ಲುಗಳ ತುರಾಟದಿಂದ ಅಧಿಕಾರಿಗಳ ವಾಹನವನ್ನು ನಾಶಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೋನೆಯದಾಗಿ ಆಕ್ರೋಶಕ್ಕೊಳಗಾದ ಜನರು ಅರಣ್ಯಾಧಿಕಾರಿಗಳನ್ನ ದಿಗ್ಬಂಧಿಸಿ, ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಆಗಮಿಸಿ ನಮಗೆ ಕೋನೆಯದಾಗಿ ನ್ಯಾಯ ದೋರಕಿಸಲಿ ಎಂದು ಅಲ್ಲಿನ ಜನರು ಪಟ್ಟು ಹಿಡಿದು ಅಹೋರಾತ್ರಿ ಧರಣಿಗೆ ಕುತಿರುವದು ತಿಳಿದುಬಂದಿದೆ.

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿಗಳ ಭೇಟಿ (ಮೃತರ ಕುಟುಂಬಕ್ಕೆ ಸಾಂತ್ವಾನ)

ನಾನು ಈ ಘಟನೆ ನಡೆದಾಗಿನಿಂದ ಅದರ ಮೇಲೆನೆ ವಿಚಾರಣೆ ಮಾಡುತ್ತಿದ್ದು ಇಂದು ಮುಂಜಾನೆಯಿoದ ಆ ಮಹಿಳೆಯರು ವೀಷ ಸೆವಿಸಿದ್ದಾಗಿನಿಂದ ಅಲ್ಲಿನ ರಿಪೋರ್ಟನ್ನು ವಿಚಾರಿಸುತ್ತಾ ಬಂದಿದ್ದೆನೆ, ತಕ್ಷಣವೆ ತಹಶಿಲ್ದಾರರಿಗೆ ಕರೆಮಾಡಿ ಮೊದಲು ಆ ಮಹಿಳೆಯರ ಆರೋಗ್ಯ ಸರಿಪಡಿಸಲು ವ್ಯವಸ್ಥೆ ಮಾಡಲು ಸುಚಿಸಿದ್ದೆ, ಮುಂಡರಗಿಯಲ್ಲಿ ಸರಿಯಾದ ಚಿಕಿತ್ಸೆಯು ಸಿಗದಿರಬಹುದೆಂದು ಅಲ್ಲಿನ ವೈಧ್ಯರಿಗೆ ತಿಳಿಸಿ ಗದಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲು ತಿಳಿಸಿದ್ದೆ, ಆದರೆ ದುರಾದೃಷ್ಟ ಈ ಮುಂಚೆ ಮಹಿಳೆಯರ ಸ್ಥಿತಿಯು ಸರಳವಾಗಿದ್ದು ಅದರಲ್ಲಿ ನಿರ್ಮಲಾ ಪಾಟೀಲ ಎಂಬ ಮಹಿಳೆಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿದ ಕೂಡಲೆ ನಾನು ಜಿಲ್ಲಾಸ್ಪತ್ರೆಗೆ ಹೋಗಿ ವಿಚಾರಣೆ ಮಾಡಿ ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು ಎಂದು ತಿಳಿಸಿದರು.

ಈ ಸಮಸ್ಯೆಯು ಅರಣ್ಯ ಇಲಾಖೆಯದಾಗಿದ್ದು ಇದರ ಸಂಪೂರ್ಣ ಹಕ್ಕು ಅರಣ್ಯ ಮೆಲ್ ಅಧಿಕಾರಿಗಳದ್ದಾಗಿರುತ್ತದೆ, ಅದಲ್ಲದೆ ಈ ಕೂರಿತು ನಾನುಇಲ್ಲಿನ ಹೀರಿಯ ಅರಣ್ಯಾಧಿಕಾರಿಗಳ ಜೋತೆ ಚರ್ಚಿಸಿದ್ದೆನೆ ಹಾಗೂ ಅಲ್ಲಿನ ಜನರಿಗೆ ಯಾವುದೆ ರೀತಿಯ ತೋಂದರೆಯಾಗದoತೆ ಕ್ರಮ ಕೈಗೊಳ್ಳಲು ತಿಳಿಸಿದ್ದೆನೆ. ಅದಲ್ಲದೆ ಅಲ್ಲಿನ ಜನರಿಗೆ ಯಾವುದೆ ರೀತಿಯ ತೋಂದರೆಗೆ ಜಿಲ್ಲಾಡಳಿತದಿಂದ ನನ್ನ ಸಹಾಯ ಇರುತ್ತದೆ.

-ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು

Leave a Reply

Your email address will not be published. Required fields are marked *

You May Also Like

ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಜನ್ಮದಿನಾಚರಣೆ ಮಾಡಿದ ಸರ್ಕಾರಿ ಅಧಿಕಾರಿ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಸರಕಾರಿ ಆದೇಶ ಪ್ರಕಾರ ಜನ ಸಾಮಾನ್ಯರಾಗಲಿ ಹಾಗೂ…

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ…

ಆಲಮಟ್ಟಿ: 15 ರಂದು ಹಳಕಟ್ಟಿ ಶಾಲೆಯ 64 ನೇ ವಾಷಿ೯ಕ ಸ್ನೇಹ ಸಮ್ಮೇಳನ

ಗುಲಾಬಚಂದ ಆರ್. ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ರಾವಬಹದ್ದೂರ ಡಾ. ಫ.ಗು.(ಆರ್.ಬಿ.ಪಿ.ಜಿ) ಹಳಕಟ್ಟಿ ಪ್ರೌಢಶಾಲೆಯ 2021-22…

ಕ್ವಾರಂಟೈನ್ ಗೆ ಒಳಪಡಿಸಲು ಸೋಂಕಿತ ಮಹಿಳೆ ಸಂಪರ್ಕಕ್ಕೆ ಸಿಗುತ್ತಿಲ್ಲ: ಡಿಸಿ ಸುಂದರೇಶ್ ಬಾಬು

ಮಹಿಳೆ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಏಕಾಏಕಿ ಹೇಳಬಾರದು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲೆಂದೇ ಸಂಪರ್ಕಿಸಿದಾಗ ಆ ವಿಳಾಸದಲ್ಲಿ ಅವರಿಲ್ಲ. ಸ್ವಲ್ಪ ಕಾಯುವ ತಾಳ್ಮೆ ಇರಲಿ.