ಮೈಸೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹರಡುತ್ತಿದ್ದು, ಇದೀಗ ಕೆಲವರು ಅದನ್ನೆ ಬಂಡವಾಳವಾಗಿಟ್ಟುಕೊಂಡು ಸೋಂಕಿತರಿಗೆ ನೀಡುವ ರೆಮ್ ಡಿಸಿವರ್ ಚುಚ್ಚುಮದ್ದನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೆಎಸ್‍ಎಸ್ ಆಸ್ಪತ್ರೆಯ ಸ್ಟಾಫ್‍ನರ್ಸ್ ಆಗಿದ್ದ ಗಿರೀಶ್ (34) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರದ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೂ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಪ್ರಶಾಂತ್, ಮಂಜುನಾಥ್, ಸುಜಯ್‍ನನ್ನು ಬಂಧಿಸಿದ್ದು, ಪೊಲೀಸರು ಇದೀಗ ಗಿರೀಶ್‍ನನ್ನು ಬಲೆಗೆ ಬೀಳಿಸಿಕೊಂಡು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರದಲ್ಲಿ ಕರ್ಫ್ಯೂ ಭಾಗಶಃ ಯಶಸ್ವಿ; ದಂಡಾಧಿಕಾರಿಗಳಿಂದ ರೂಲ್ಸ್ ಬ್ರೇಕ ಮಾಡಿದವರಿಗೆ ದಂಡ.

ಲಕ್ಷ್ಮೇಶ್ವರ: ಬಿಕೋ ಎನ್ನುತ್ತಿರುವ ಪ್ರಮುಖ ಹೆದ್ದಾರಿ, ಬಸ್ ನಿಲ್ದಾಣಗಳು… ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ನೈಟ್ –…

ದೇವಾಂಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ

ರಾಜ್ಯದಲ್ಲಿ ದೇವಾಂಗ ಸಮಾಜ ಅತ್ಯಂತ ಆರ್ಥಿಕವಾಗಿ ರಾಜಕೀಯ ಹಾಗು ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ದೇವಾಂಗ ಅಭಿವೃದ್ಧಿ ಮಂಡಳಿ ಅಥವಾ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ

ಕೊರೋನಾ ಪಾಸಿಟಿವ್ ಹಿನ್ನೆಲೆ ಸವಣೂರು ಸಂಪೂರ್ಣ ಲಾಕ್ ಡೌನ್

ಸವಣೂರು ಪಟ್ಟಣವನ್ನಿಂದು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಎಲ್ಲ ಗಡಿಗಳನ್ನ ಬಂದ್ ಮಾಡಿ ಯಾರೂ ಹೊರ ಹೊಗದಂತೆ ಮತ್ತು ಒಳ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೀಲ್ ಡೌನ್ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಹುಲ್ಲೂರಿನಲ್ಲಿ ಮಳೆಯ ಆರ್ಭಟ: ಧರೆಗುರುಳುತ್ತಿವೆ ಮನೆ-ಮರಗಳು

ಕಳೆದ ಎರ್ಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಹಾಗೂ ಮರಗಳು ಧರೆಗುರುಳುತ್ತಿವೆ. ಇದರಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.