ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ನಗರ ಪ್ರದೇಶದಲ್ಲಿ ಹೆಚ್ಚಿನ ಸಮಖ್ಯೆಯಲ್ಲಿ ಪತ್ತೆಯಾಗಿದ್ದ ಪ್ರಕರಣಗಳು ಈಗ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿವೆ. ಇದರಿಂದ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೊರೊನಾ ಕಾಟ ಶುರುವಾಗಿದೆ.
ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷ ಪಿ-9407 ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಾಗಿ 4 ಜನಕ್ಕೆ ಸೋಂಕು ದೃಢ ಪಟ್ಟಿದೆ.
ಮುಂಡರಗಿ ಪಟ್ಟಣದ ಹುಡ್ಕೊ ಕಾಲೋನಿಯ 13 ವರ್ಷದ ಹುಡುಗ ಪಿ-10601, 25 ವರ್ಷದ ಪುರುಷ ಪಿ-10600, ಡಂಬಳ ಗ್ರಾಮದ ಇರ್ವರಿಗೆ 26 ವರ್ಷದ ಪುರುಷ ಪಿ-10608 ಹಾಗೂ 27 ವರ್ಷದ ಪುರುಷ ಪಿ-10609 ಇವರಿಗೆ ಸೋಂಕು ದೃಢವಾಗಿದೆ.
ಶಿರಹಟ್ಟಿ ತಾಲ್ಲೂಕಿನ ಮಜ್ಜೂರುತಾಂಡ ನಿವಾಸಿ 29 ವರ್ಷದ ಮಹಿಳೆ ಪಿ-8723 ಸೋಂಕಿತರ ಸಂಪರ್ಕದಿಂದಾಗಿ ಇಬ್ಬರಿಗೆ ಸೋಂಕು ದೃಢ ಪಟ್ಟಿದ್ದು, ಶಿರಹಟ್ಟಿ ಪಟ್ಟಣದ 23 ವರ್ಷದ ಮಹಿಳೆ ಪಿ-10603 ಮತ್ತು 25 ವರ್ಷದ ಮಹಿಳೆ ಪಿ-10605 ಸೋಂಕು ದೃಢವಾಗಿದೆ.
ಗದಗಿನ ಸೆಟಲ್‍ಮೆಂಟ್ ಪ್ರದೇಶ ನಿವಾಸಿಗಳಾದ ಪಿ-7387 ಮತ್ತು ಪಿ-7388 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 26 ವರ್ಷದ ಮಹಿಳೆ ಪಿ-10602, ಹರ್ತಿ ಗ್ರಾಮದ 40 ವರ್ಷದ ಪುರುಷ ಪಿ-7832 ಸಂಪರ್ಕದಿಂದಾಗಿ ಗದಗ ತಾಲ್ಲೂಕಿನ ಯಲಿಶಿರುಂದ ಗ್ರಾಮದ 80 ವರ್ಷದ ಮಹಿಳೆ ಪಿ-10606 ಸೋಂಕು ದೃಢವಾಗಿದೆ.
ಶಿರಹಟ್ಟಿ ಪಟ್ಟಣದ 30 ವರ್ಷದ ಪುರುಷ ಪಿ-8724 ಸಂಪರ್ಕದಿಂದಾಗಿ ಶಿರಹಟ್ಟಿ ಪಟ್ಟಣದ ಮ್ಯಾಗೇರಿ ಓಣಿಯ 26 ವರ್ಷದ ಪುರುಷ ಪಿ-10607 ಗದಗಿನ ಸಿದ್ಧರಾಮೇಶ್ವರ ನಗರದ 30 ವರ್ಷದ ಪುರುಷ ಪಿ-10148 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 35 ವರ್ಷದ ಪುರುಷ ಪಿ-10610 ಇವರಿಗೆ ಸೋಂಕು ದೃಢವಾಗಿದೆ.
ಗುಜರಾತ್ ರಾಜ್ಯದ ಅಹಮದಾಬಾದ್‍ದಿಂದ ಆಗಮಿಸಿದ ಶಿರಹಟ್ಟಿ ಪಟ್ಟಣದ 22 ವರ್ಷದ ಮಹಿಳೆ ಪಿ-10604 ಹಾಗೂ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದ 19 ವರ್ಷದ ಯುವಕ ಪಿ-10611 ಇವರಿಗೆ ಇನ್‍ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ಇರುವುದು ದೃಢವಾಗಿದೆ.
ಇವರೆಲ್ಲರಿಗೂ ಗದಗ ನಿಗದಿತ ಜಿಮ್ಸ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.