80 ವರ್ಷ ಮೇಲ್ಪಟ್ಟ ಮತದಾರರ ಮತದಾನ ಜಾಗ್ರತಿಯಲ್ಲಿ: ಅಭಯ ಪಾಟೀಲ ಅಭಿಮತ

ಉತ್ತರಪ್ರಭ ಸುದ್ದಿ ರೋಣ:

ರೋಣ ಮತಕ್ಷೇತ್ರ ಅಭಿವೃದ್ಧಿಯಿಂದ ತುಂಬಾ ಹಿಂದುಳಿದಿದ್ದು ಅಭಿವೃದ್ಧಿಗಾಗಿ ಈ ಬಾರಿ ಮತ್ತೆ ಜಿ ಎಸ್ ಪಾಟೀಲರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬರು ಶ್ರಮಿಸೋಣ ಎಂದು ಅಭಯ ಪಾಟೀಲ ಹೇಳಿದರು. ಅವರು ಸ್ಥಳೀಯ ಕಾಲೇಜು ರಸ್ತೆಯಲ್ಲಿರುವ ಶಿವನಗೌಡ ಪಾಟೀಲರ ಪೆಟ್ರೋಲ್ ಬಂಕ್ ನಲ್ಲಿ ೮೦ ವರ್ಷ ಮೇಲ್ಪಟ್ಟ ಮತದಾರರಿಗೆ ಮತದಾನ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೆಗಲ್ಲ ಪಟ್ಟಣದ ಹಾಗೂ ಮಜರೆ ಹಳ್ಳಿಯಲ್ಲಿ 300ಕ್ಕೂ ಹೆಚ್ಚು ೮೦ ವರ್ಷ ಮೇಲ್ಪಟ್ಟ ಮತದಾರರಿದ್ದು, ಅವರನ್ನು ಮನೊಲಿಸುವ ಮೂಲಕ ಮತದಾನದ ಕುರಿತು ಅರಿವು ಮೂಡಿಸುವುದರ ಜೊತೆಗೆ ಪಕ್ಷಕ್ಕೆ ಕೈಜೋಡಿಸುವಂತೆ ಹಾಗೂ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಕೈಗೊಂಡ ಅಭೀವೃದ್ದಿ ಕಾರ್ಯಗಳನ್ನು ತಿಳಿಸಿಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅವರು ಒಲವು ತೋರುವಂತೆ ಮಾಡೋಣ ಜಿ,ಎಸ್, ಪಾಟೀಲರು ಶಾಸಕರಿದ್ದಾಗ ಕ್ಷೇತ್ರದಲ್ಲಿ ಕೃಷಿಹೊಂಡ,ಪ್ರತಿ ವಾರ್ಡುಗಳಲ್ಲಿ ಸಿ,ಸಿ ರಸ್ತೆ,ಶುದ್ಧ ಕುಡಿಯುವ ನೀರು, ಹಾಗೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ.ಆದರೆ ಈಗ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ ಕ್ಷೇತ್ರದ ಅಭಿವೃದ್ಧಿಗೆ ನಾವು ನಿವೆಲ್ಲರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು

ಶಿವನಗೌಡ ಪಾಟೀಲ ಮಾತನಾಡಿ ಹಾಲಿ ಶಾಸಕರು ಜನರ ಮಧ್ಯ ಬರದೆ ಚುನಾವಣೆ ಬಂದಾಗ ಮಾತ್ರ ಜನರಲ್ಲಿ ಬರುತ್ತಾರೆ ಅದು ಮತಯಾಚನೆಗಾಗಿ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ, ಜನಸಾಮಾನ್ಯರ ಬದುಕು ದುಸ್ಥಿತಿಯಲ್ಲಿರುವಾಗ ಅವರಿಗೆ ಬೇಕಾದ ಮೂಲ ಸೌಲಭ್ಯಗಳಾದ ಮನೆ, ರಸ್ತೆ ದುರಸ್ತಿ ಮುಂತಾದವುಗಳಿಗೆ ಆದ್ಯತೆ ನೀಡುವುದರ ಬದಲಾಗಿ ಮೇಲ್ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷಯ್ ಪಾಟೀಲ ನಿಂಗನಗೌಡ ಲಕ್ಕನಗೌಡ್ರ, ಅಲ್ಲಾಭಕ್ಷಿ ನದಾಫ, ಖಾದಿರಸಾಬ ಹೂಲಗೇರಿ, ಸಂತೋಷ ಹನುಮಸಾಗರ, ಶೇಖಪ್ಪ ಜುಟ್ಲ, ಶರಣಪ್ಪ ಗಂಗರಗೊಂಡ, ಗುಡದಪ್ಪ ಗೋಡಿ, ಬೈಲಪ್ಪ ಕುರಿ, ನಾಗಪ್ಪ ಮಾರನಬಸರಿ, ಕಳಕನಗೌಡ ಪೊಲೀಸ್ಪಾಟೀಲ, ರಾಚಯ್ಯ ಮಾಲಗಿತ್ತಿಮಠ, ಮುತ್ತಪ್ಪ ನೂಲ್ಕಿ, ಮುತ್ತಪ್ಪ ಹಡಪದ, ಮಂಜುನಾಥ ಧರ್ಮಾಯತ, ಚಂದ್ರು ಬಿಷ್ಟಕ್ಕನವರ, ಅಶೊಕ ಬಾರಕೇರ, ಆಶೀಫ ಹೊಸಮನಿ, ಆನಂದ ನಡವಲಕೇರಿ ಇದ್ದರು.

Leave a Reply

Your email address will not be published. Required fields are marked *

You May Also Like

ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ ನಿಧನ

ಉತ್ತರಪ್ರಭಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ (87)ಇಂದು ವಯೋಸಹಜ…

ದಾಸರ ಕೀರ್ತನೆಗೆ ತಲೆಬಾಗಿದ ಶಿವರತ್ನ, ರಾಮನಿಂದ ಬಿಜೆಪಿಗೆ ಪಟ್ಟಾಭೀಷೆಕ: ‘ಕೈ’ ಗೆ ನಿರಾಶೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15…

ಕೊರ್ಲಹಳ್ಳಿ ಬಳಿ ಧರೆಗುರುಳಿದ ಮರ, ಮನೆಗಳು

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಲವೆಡೆ ಭಾರಿ ಪ್ರಮಾಣದ ಮಳೆ ಮಿಶ್ರಿತ ಗಾಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಹೆಂಡತಿಯನ್ನು ಅಮಾನುಷ್ಯವಾಗಿ ಮಚ್ಚಿನಿಂದ ಹಲ್ಲೇ ಮಾಡಿದ ಆರೋಪಿಯ ಬಂಧನ

ಉತ್ತರಪ್ರಭ ಗದಗ: ಮಾರ್ಚ 11ರಂದು ಗದಗ ನಗರದ ಲಾಯನ್ಸ್ ಸ್ಕೂಲ್ ಸಮೀಪದ ಆಟದ ಮೈದಾನ ಒಂದರಲ್ಲಿ…