ಉತ್ತರಪ್ರಭ
ಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ ಕಾಂಗ್ರೇಸ್ ಮತ್ತು ಇಬ್ಬರು ಪಕ್ಷೇತರರು ಗೆದ್ದು ಬಿಗಿದ್ದಾರೆ. ನಗರ ಸಭೆ ಚುನಾವಣೆ ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಬಿಜೆಪಿಗೆ ಆಡಳಿತ ನೀಡಿದ ಜನಾದೇಶ. ಗದಗ ವಿಧಾನ ಸಭಾ ಬಿಜೆಪಿಯ ಪರಾಜೀತ ಅಭ್ಯರ್ಥಿ ಅನೀಲ ಮೆಣಸಿನಕಾಯಿಯವರ ಮತ ಬೀಕ್ಷೆಗೆ ಬಾಗಿದ ಜನ, ಶ್ರೀರಾಮುಲು, ಸಿ ಸಿ ಪಾಟೀಲ ಮತ್ತು ಎಸ್ ವಿ ಸಂಕನೂರ ಸೇರಿದಂತೆ ಬಿಜೆಪಿಯ ಎಲ್ಲ ಮುಖಂಡರು ವಾರ್ಡ ಮತ್ತು ಮನೆ ಮನೆ ಪ್ರಚಾರ ಇಂದು ಫಲಕೊಟ್ಟಿತು. ಗದಗ ಬೆಟಗೇರಿ ನಗರಸಭೆ ದಶಕದಿಂದ ಕೈ ವಶವಾಗಿತ್ತು. ಬಿಜೆಪಿಯ ದಶಕದ ಕನಸನ್ನು ಮತದಾರರು ನನಸು ಮಾಡಿದ್ದಾರೆ.

ಕಾಂಗ್ರೇಸ್ ಹಿರಿಯ ಮುಖಂಡ ಎಚ್ ಕೆ ಪಾಟೀಲ ಮತ್ತು ಕಾಂಗ್ರೇಸ್‌ನ ಅನೇಕ ಮುಖಂಡರು ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮತ್ತೋಮ್ಮೇ ಆಡಳಿತಕ್ಕೆ ತರಲೇ ಬೇಕು ಎನ್ನುವ ಅಭಿಲಾಷೇಯಿಂದ ಮತದಾರರನ್ನು ಒಲಿಸಿಕೊಳ್ಳಲು ಬೇಕಾದ ತಂತ್ರಗಾರಿಕೆಯನ್ನು ಮಾಡಿದರು,ಯಾಕೋ ಮತದಾರರು ಕಾಂಗ್ರೇಸ್ ಗೆ ಆಡಳಿತ ಚುಕ್ಕಾಣಿ ನೀಡಲು ಹಿಂದೇಟು ಹಾಕಿದ್ದಾರೆ. ಶಾಸಕ ಎಚ್ ಕೆ ಪಾಟೀಲರು ಕೈಗೋಂಡ ವಾರ್ಡವಾರು ಪ್ರಚಾರ ಕಾಂಗ್ರೇಸ್ 15 ವಾರ್ಡಗಳನ್ನು ಗೆಲ್ಲಲು ಶ್ರೀರಕ್ಷೆಯಾಯಿತು. ಡಿ ಆರ್ ಪಾಟೀಲರ ಪುತ್ರ ಪಕ್ಷೇತರರಿಗೆ ಬೆಂಬಲ ನೀಡಿದ್ದರಿಂದ ಮತದಾರರಲ್ಲಿ ಗೊಂದಲ ಉಂಟಾಯಿತು ಮತ್ತು ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಟಿಕೇಟ್ ನೀಡುವಲ್ಲಿ ವಿಫಲವಾಯಿತೇ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಗದಗ ಬೆಟಗೇರಿ ನಗರ ಸಭೆಯ ಆಡಳಿತ ಚುಕ್ಕಾಣಿ ಹಿಡಿಯಲು 35ನೇ ವಾರ್ಡ ಕೊನೆಗಳಿಗೆಯಲ್ಲಿ ನಿರ್ಣಾಯಕವಾಗಿತ್ತು.ಎಲ್ಲರ ಚಿತ್ತ 35ನೇ ವಾರ್ಡನತ್ತ ಇತ್ತು. ಬಿಜೆಪಿ ಮತ್ತು ಕಾಂಗ್ರೇಸ್ ಎರಡು ಪಕ್ಷಗಳಿಗೆ ತುಂಬಾ ಕುತೂಹಲ ಕೆರಳಿಸಿತ್ತು. ಈ ವಾರ್ಡಿನಲ್ಲಿ ಕಾಂಗ್ರೇಸ್‌ನಿoದ ಉದ್ಯಮಿ ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಪತ್ನಿ ನಾಗರತ್ನ ಮುಳಗುಂದ ಇವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಉಷಾ ದಾಸರ 1876 ಮತಗಳನ್ನು ಪಡೆದು ಜಯಗಳಿಸಿದರು. ನಾಗರತ್ನ ಮುಳಗುಂದ 1664 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಇವರ ಸೋಲಿಗೆ ಕಾಂಗ್ರೇಸ್ಸಿನ ಭದ್ರಕೋಟೆಯಾದ ರಾಮನಗರದ ಮತದಾರರು ಈ ಬಾರಿ ಬಿಜೆಪಿಯತ್ತ ಒಲವು ತೋರಿದ್ದಲ್ಲದೆ ಈ ಚುನಾವಣೆಯಲ್ಲಿ ಸುಡುಗಾಡ ಸಿದ್ಧ ಸಮಾಜದಿಂದ ಪ್ರಬಲ ಆಕಾಂಕ್ಷಿಗಳಿಗೆ ಟಿಕೇಟ್ ನೀಡದಿರುವುದು, ಸಮಾಜದ ಯುವಕರು ಬದಲಾವಣೆ ಬಯಸಿರುವುದರಿಂದ 35ನೇ ವಾರ್ಡ ಬಿಜೆಪಿಗೆ ವರವಾಯಿತು, ಅದರ ಗೆಲುವಿನಿಂದ ಉಷಾ ದಾಸರ ನಗರಸಭೆಯ ಅಧ್ಯಕ್ಷರಾಗೋ ಅವಕಾಶ ಗರಿಗೆದರಿದೆ.
ಕುದುರೆ ವ್ಯಾಪಾರ ನಡೆದರೇ ಪ್ರಜಾಪ್ರಭುತ್ವಕ್ಕೆ ಮಾರಕ: ಈ ಬಾರಿ ನಗರ ಸಭೆಯಲ್ಲಿ ಇಬ್ಬರೂ ಪಕ್ಷೇತರರು ಗೆಲುವು ಸಾಧಿಸಿದ್ದು, ತಿವ್ರ ಚರ್ಚೆಗೆ ಇಡುಮಾಡಿದೆ. ಬಿಜೆಪಿ ಮ್ಯಾಜಿಕ ನಂಬರ್ ತಲುಪಿದರು, ಕುದುರೆ ವ್ಯಾಪಾರ ನಡೆದರೇ ಯಾರೂ ಬೇಕಾದರು ಆಡಳಿತ ಗದ್ದುಗೆ ಎರಬಹುದು.


ಗದಗ ಬೆಟಗೇರಿ ನಗರಸಭೆಯ 35 ವಾರ್ಡುಗಳಿಗೆ ಜರುಗಿದ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಗುರುಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಜರುಗಿದ್ದು ವಾರ್ಡವಾರು ವಿಜೇತರ ಅಭ್ಯರ್ಥಿಗಳ ವಿವರ ಇಂತಿದೆ:
ವಾರ್ಡವಾರು ವಿಜೇತ ಅಭ್ಯರ್ಥಿಗಳ ವಿವರ
ವಾರ್ಡ ಸಂಖ್ಯೆ 1 : ಲಕ್ಷ್ಮೀ ಅನಿಲಕುಮಾರ ಸಿದ್ಧಮ್ಮನಹಳ್ಳಿ ಪಡೆದ ಮತ -2712 (ಐ.ಎನ್.ಸಿ.),
ವಾರ್ಡ ಸಂಖ್ಯೆ 2: ಸುರೇಶ ಚಂದಪ್ಪ ಕಟ್ಟಿಮನಿ-893 ( ಐ.ಎನ್.ಸಿ),
ವಾರ್ಡ ಸಂಖ್ಯೆ 3: ಮಾಧೋಸಾ ತೇಜೋಸಾ ಮೆರವಾಡೆ -1557 ( ಬಿಜೆಪಿ), ವಾರ್ಡ ಸಂಖ್ಯೆ 4: ಅಕ್ಕಿ ಶಕುಂತಲಾ ಹೊಳಬಸಪ್ಪ-1952 (ಐ.ಎನ್.ಸಿ.),
ವಾರ್ಡ ನಂ.5: ಲಕ್ಷ್ಮೀ ಶಂಕರ ಕಾಕಿ-1519 (ಬಿಜೆಪಿ),
ವಾರ್ಡ ನಂ. 6: ಭಜಂತ್ರಿ ಲಕ್ಷಮವ್ವ ಮಾರುತಪ್ಪ – 1568 (ಐ.ಎನ್.ಸಿ),
ವಾರ್ಡ ನಂ.7: ರಾಘವೇಂದ್ರ ಬಸವರಾಜ ಯಳವತ್ತಿ -2225 (ಬಿಜೆಪಿ),
ವಾರ್ಡ ನಂ.8: ಭರದ್ವಾಡ್ ಪೂರ್ಣೀಮಾ ರಾಹುಲ- 1064 (ಐ.ಎನ್.ಸಿ.),
ವಾರ್ಡ ನಂ.9: ಚಂದ್ರಶೇಖರಗೌಡ ಪರ್ವತಗೌಡ ಕರಿಸೋಮನಗೌಡ್ರ – 1127 (ಐ.ಎನ್.ಸಿ.),
ವಾರ್ಡ ನಂ 10: ಶಿರಹಟ್ಟಿ ಇಮ್ತಿಯಾಜ್- 1224 ( ಐ.ಎನ್.ಸಿ),
ವಾರ್ಡ ನಂ.11: ಶ್ವೇತಾ ದಂಡಿನ -853 ( ಬಿಜೆಪಿ),
ವಾರ್ಡ ನಂ.12: ದಿಂಡೂರ ವಿಜಯಲಕ್ಷ್ಮೀ ಶಶಿಧರ -752 (ಬಿಜೆಪಿ),
ವಾರ್ಡ ನಂ.13: ಗೂಳಪ್ಪ ಹನುಮಂತಪ್ಪ ಮುಶಿಗೇರಿ -1022 (ಬಿಜೆಪಿ),
ವಾರ್ಡ ನಂ. 14 : ಪ್ರಕಾಶ ರಾಚಪ್ಪ ಅಂಗಡಿ-895 ( ಬಿಜೆಪಿ),
ವಾರ್ಡ ನಂ.15: ಚಂದ್ರಶೇಖರ ಬಸವರಾಜ ತಡಸದ- 1345 (ಬಿಜೆಪಿ),
ವಾರ್ಡ ನಂ. 16: ಕೃಷ್ಣ ಪರಸಪ್ಪ ಪರಾಪೂರ – 1102 (ಐ.ಎನ್.ಸಿ),
ವಾರ್ಡ ನಂ.17: ಆಸ್ಮಾ ಮುನ್ನಾಸಾಬ ರೇಶ್ಮಿ-1112 (ಪಕ್ಷೇತರ),
ವಾರ್ಡ ನಂ. 18: ಜೈನುಲಾಬ್ದೀನ್ ರಹೀಮಾನಸಾಬ ನಮಾಜಿ- 1171 (ಐ.ಎನ್.ಸಿ),
ವಾರ್ಡ ನಂ 19: ಮಹಾಂತೇಶ ಕೆ ನೆಲವಡಿ- 1151 ( ಬಿಜೆಪಿ),
ವಾರ್ಡ ನಂ. 20: ಪರವೀನಬಾನು ಅಬ್ದುಲ ಮುನಾಫ್‌ಮುಲ್ಲಾ -1095 (ಐ.ಎನ್.ಸಿ),
ವಾರ್ಡ ನಂ. 21: ಚುಮ್ಮಿ ಡಿ ನದಾಫ್ -555 (ಪಕ್ಷೇತರ),
ವಾರ್ಡ ನಂ. 22: ರವಿಕುಮಾರ ಕೊಟ್ರಪ್ಪ ಕಮತರ- 987 ( ಐ.ಎನ್.ಸಿ),
ವಾರ್ಡ ನಂ. 23: ಬರಕತ್ ಅಲಿ ಮುನ್ನಾ ಅಬ್ದುಲ ವಹಾಬಸಾಬ- 1267 (ಐ.ಎನ್.ಸಿ),
ವಾರ್ಡ ನಂ. 24: ನಾಗರಾಜ ಹುಲಿಗೆಪ್ಪ ತಳವಾರ -1008 (ಬಿಜೆಪಿ),
ವಾರ್ಡ ನಂ. 25: ಮಾನವಿ ವಿನಾಯಕ ಶಿವಪ್ಪ -780 ( ಬಿಜೆಪಿ),
ವಾರ್ಡ ನಂ. 26: ಹುಲಿಗೆಮ್ಮ ಗಂಗಾಸಾ ಹಬೀಬ -1043 ( ಬಿಜೆಪಿ),
ವಾರ್ಡ ನಂ. 27: ಅಸೂಟಿ ಲಲಿತಾ ಬಸೆಟ್ಟಪ್ಪ -1482 ( ಐ.ಎನ್.ಸಿ),
ವಾರ್ಡ ನಂ. 28: ಶಿದ್ಲಿಂಗಪ್ಪ (ಅನಿಲ) ಅಬ್ಬಿಗೇರಿ -766 ( ಬಿಜೆಪಿ),
ವಾರ್ಡ ನಂ. 29: ಎಲ್.ಡಿ. ಚಂದಾವರಿ – 1789 (ಐ.ಎನ್.ಸಿ),
ವಾರ್ಡ ನಂ. 30: ಕಟಗಿ ಪದ್ಮಾ-845 ( ಐ.ಎನ್.ಸಿ),
ವಾರ್ಡ ನಂ. 31: ಬಾಕಳೆ ಶೈಲಾ ನರಸಿಂಗಸಾ- 1205( ಬಿಜೆಪಿ),
ವಾರ್ಡ ನಂ 32: ಸುನಂದಾ ಪ್ರಕಾಶ ಬಾಕಳೆ-1188 (ಬಿಜೆಪಿ) ,
ವಾರ್ಡ ನಂ. 33: ಅನಿತಾ ವಿಜಯಕುಮಾರ್ ಗಡ್ಡಿ -1716 ( ಬಿಜೆಪಿ),
ವಾರ್ಡ ನಂ. 34 : ವಿದ್ಯಾವತಿ ಅಮರನಾಥ ಗಡಗಿ – 825 (ಬಿಜೆಪಿ),ವಾರ್ಡ ನಂ. 35: ದಾಸರ ಉಷಾ ಮಹೇಶ-1876 ( ಬಿಜೆಪಿ) ಮತಗಳನ್ನು ಪಡೆಯುವ ಮೂಲಕ ವಿಜೇತರಾಗಿರುತ್ತಾರೆ.