ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !

ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್ ಬಾಂಬ್ ಹಾಕಲು ಬಂದವರಿಗೆ ಬಿರಿಯಾನಿ ತಿನಿಸಿ ಓಟ ಹಾಕಿಸಿಕೊಳ್ಳುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯವಾಗುವದರಿಂದ ದೇಶದಲ್ಲಿ‌ ಕಾಂಗ್ರೆಸ್ ಪಕ್ಷವನ್ನು ಜನ ಕಿತ್ತೊಗೆಯುತಿದ್ದಾರೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ಹೇಳಿದರು.

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಅಪಾರ ಜನಸಾಗರದ ಮಧ್ಯೆ ಜರುಗಿತು.


ನಿಡಗುಂದಿ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ರೋಡ್ ಶೋ ದಲ್ಲಿ ಮಾತನಾಡಿ, ಈ ಭೂಮಿಯ ಭದ್ರತೆಗೆ ದಕ್ಕೆ ತರುವ ಯಾವ ಉಗ್ರಗಾಮಿಯನ್ನು ಬೀಡದೆ ಶಿಕ್ಷಿಸುವದೆ ಬಿಜೆಪಿ ಮೂಲ ಗುರಿ ನಮಗೆ ದೇಶ ಮೊದಲು ಕಾಂಗ್ರೆಸಗರಿಗೆ ಅಧಿಕಾರ ಮೊದಲು ಎನ್ನುವದರಿಂದ ಅವರಿಗೆ ಸುರಕ್ಷೆಯ ಅರಿವಿಲ್ಲ, ಕೋಮು ಭಾವನೆ ಕೆರಳಿಸುವದು, ಮುಸ್ಲಿಂರ ಒಲೈಕೆ ಮಾಡುವದೆ ಅವರ ಚಾಳಿಯಾಗಿದೆ‌. ಬಿಜೆಪಿಯ ಎಲ್ಲ ಯೋಜನೆಗೆಳು ಜಾತಿ, ಮತ ಪಂಥಗಳನ್ನು ಮಿರಿ ಸರ್ವರಿಗೂ ಸಮಬಾಳು ಎನ್ನುವಂತೆ ಯಾವ ಯೊಜನೆಯನ್ನು ಜಾತಿ ಆಧಾರವಾಗಿ ಮಾಡದೆ ಬಡವರ ಪರವಾಗಿ, ಸೌಲಭ್ಯ ವಂಚಿತ ವರ್ಗದ ಪರವಾಗಿವೆ.


ಕನ್ನಡ ನಾಡಿಗೆ ಬೇಡಾದ ಟಿಪ್ಪು ಜಯಂತಿ ಮಾಡುವ ಉಲ್ಲಾಖಾನ ನಾಡಿಗೆ ಅವರ ಕೊಡುಗೆ ಏನು ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ನಾಡು, ನುಡಿ, ಜಲ ಜನರ ಜೀವಕ್ಕೆ ಬೆಲೆ ಕೊಡುವವರನ್ನ ಗೌರವಿಸುತ್ತೆವೆ, ಜೀವ ತಗೆಯಲು ಬಂದವರನ್ನ ಜೀವಸಹಿತ ಉಳಿಸುವದು ಹೇಗೆ ಅದಕ್ಕಾಗಿ ಬಿಜೆಪಿ ಪರವಾಗಿ ರಾಜ್ಯದ ಜನತೆ ನಿಂತಿದ್ದಾರೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಮುರಗೇಶ ನಿರಾಣಿ, ಗೋ ಕಾರಜೋಳ ಮಾತನಾಡಿದರು.
ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಶಾಸಕ‌ ಮಾಲಿಕಯ್ಯ ಗುತ್ತೆದಾರ, ಮಾಜಿ ಶಾಸಕರಾದ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ ಹಾಗೂ ಸೋಮನಗೌಡ ಪಾಟೀಲ ನೇತೃತ್ವದಲ್ಲಿ ಅದ್ದೂರಿಯಾದ ವಿಜಯ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಕೊರೊನಾದಿಂದಾಗಿ ಬಸ್ ಹತ್ತದ ಜನ!!

ಬೆಂಗಳೂರು : ಕೊರೊನಾ ಭಯದಿಂದಾಗಿ ಜನರು ಸಾರಿಗೆ ಸಂಸ್ಥೆಯ ಬಸ್ ನಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ…

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ರಾಜ್ಯದಲ್ಲಿ ಲೇಟ್ ನೈಟ್ ಪಾರ್ಟಿ ನಿಷೇಧಿಸಿದ ಕರ್ನಾಟಕ ಸರ್ಕಾರ

ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಗುರುವಾರದಿಂದ ಲೇಟ್ ನೈಟ್ ಪಾರ್ಟಿಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸ್ಟಾರ್ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಚಿಸಲಾಗಿದೆ ಎಂದು ಸುಧಾಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯೇಕ ಧ್ವಜ ಹಾರಿಸಲು ಪ್ರಯತ್ನ – ಹಲವರ ಬಂಧನ!

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ ಎಂದ ಮಾಜಿ ಸಚಿವ ರುದ್ರಪ್ಪ ಲಮಾಣಿ!

ಬೆಂಗಳೂರು : ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ಪುತ್ರ ದರ್ಶನ್ ಬಗ್ಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.