ನರೆಗಲ್ಲ: ಹಂದಿಗಳ ಹಾವಳಿಯಿಂದ ಪಟ್ಟಣದ ಜನತೆ ಹೈರಾಣಾಗಿದ್ದು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದರು ಸ್ಪಂದಿಸದ ಮುಖ್ಯಾಧಿಕಾರಿ ಹನುಮಂತಪ್ಪ ಮಣ್ಣೋಡ್ಡರ ವರ್ಗಾವಣೆಗೆ ಆಗ್ರಹಿಸಿ ಪಟ್ಟಣ ಪಂಚಾಯತಿಗೆ ಬೀಗ ಹಾಕಿ ಬೆಳಿಗ್ಗೆಯಿಂದ ಪಟ್ಟಣದ ನಾಗರಿಕರು ಪ್ರತಿಭಟನೆ ನಡೆಸಿದರು.
ಘಟನೆ ವಿವರ: ಈ ಹಿಂದೆ ಇದ್ದ ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಕೆಲಸವನ್ನು ಮಾಡಿದ್ದರು ಹಾಗೂ ಹಂದಿಗಳನ್ನು ಹಿಡಿಸಿ ಬೇರೆ ಕಡೆಗೆ ಸಾಗಿಸಲು ಸಾಕಷ್ಟು ಪ್ರಯತ್ನವನ್ನು ಕೂಡ ಮಾಡಿದ್ದರು ಆದರೆ ಸಸ್ಪೆಂಡ್ ಆದ ಮುಖ್ಯಾಧಿಕಾರಿ ಹನುಮಂತಪ್ಪ ಮಣ್ಣೋಡ್ಡರ ಮತ್ತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡ ಮೇಲೆ ಹಂದಿಗಳನ್ನು ಹಿಡಿಸದೆ ಅಭಿವೃದ್ಧಿ ಕೆಲಸವನ್ನು ಮಾಡದೆ ಕಾಲ ಹರಣ ಮಾಡುತ್ತಿದ್ದಾರೆ ಹಾಗೂ ಪಟ್ಟಣ ಪಂಚಾಯತಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಭ್ರಷ್ಟ ಮುಖ್ಯಾಧಿಕಾರಿಯನ್ನು ಕೊಡಲೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಸಿ ಪಟ್ಟಣದ ನಾಗರಿಕರು ಪಂಚಾಯತಿ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವವ ವಹಿಸಿದ ಜಗದೀಶ್ ಸಂಕನಗೌಡ್ರ ಮಾತನಾಡಿ ಪಟ್ಟಣದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು ಇಂದು ಅವುಗಳನ್ನು ಹಿಡಿದು ಬೇರೆ ಸಾಗಿಸಲು ದೂರದ ಬೆಂಗಳೂರಿನಿಂದ ಬಂದವರನ್ನು ಇಲ್ಲಿನ ಮುಖ್ಯಾಧಿಕಾರಿ ಅವರನ್ನು ತಡೆದು ಹಂದಿಗಳನ್ನು ಹಿಡಿಯಬೇಡಿ ಎಂದು ತಕರಾರು ತೆಗೆದಾಗ ಪಟ್ಟಣದ ಎಲ್ಲಾ ನಾಗರಿಕರು ಪಟ್ಟಣ ಪಂಚಾಯತಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ಹಂದಿಗಳ ಹಾವಳಿ ಮಿತಿ ಮಿರಿದೆ ಎಂದು ಸಾಕಷ್ಟು ಬಾರಿ ಮನವಿ ಕೊಟ್ಟರು ಸಹಿತ ಕ್ಯಾರೆ ಎನ್ನದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಸಾಕಷ್ಟು ಹಂದಿಗಳು ಪಟ್ಟಣದ ತುಂಬಾ ನಿಗೂಢವಾಗಿ ಸಾಯುತ್ತಿವೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವನಗೌಡ ಪಾಟೀಲ ಮಾತನಾಡಿ ಪಟ್ಟಣದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಇದಕ್ಕೆ ಈಗಿರುವ ಮುಖ್ಯಾಧಿಕಾರಿ ಅಭಿವೃದ್ಧಿ ಕೆಲಸವನ್ನು ಬಿಟ್ಟು ತಮ್ಮ ಜೇಬನ್ನು ತುಂಬಿಕೊಳ್ಳುತ್ತಿದ್ದಾರೆ, ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇದನ್ನು ತಡೆಯಲು ಎರಡು ತಿಂಗಳ ಹಿಂದೆ ಇದ್ದ ಮುಖ್ಯಾಧಿಕಾರಿ ಹನುಮಂತಪ್ಪ ಮಣ್ಣೋಡ್ಡರ ಸಸ್ಪೆಂಡ ಮಾಡಿದ್ದರು ಆದರೆ ಅವರು ಮತ್ತೆ ನರೆಗಲ್ಲ ಪಟ್ಟಣ ಪಂಚಾಯತ ಅಧಿಕಾರಿಯಾಗಿ ಬಂದರು ಆದರೆ ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಹಣ ಬೇಕಾಗಿದೆ ಆದ್ದರಿಂದ ಅವರನ್ನು ಈ ಕೊಡಲೆ ವರ್ಗಾವಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸದಸ್ಯರ ಮೇಲೆ ಹಲ್ಲೆ…!
ಪಟ್ಟಣದ 3ನೆ ವಾರ್ಡಿನ ಸದಸ್ಯ ಮಲ್ಲಿಕಾರ್ಜುನಗೌಡ ಭೊಮನಗೌಡ ಮೇಲೆ ಹಂದಿಯ ಮಾಲಿಕರು ಹಲ್ಲೆ ಮಾಡಿದ್ದೆ ಉಗ್ರ ಪ್ರತಿಭಟನೆಗೆ ಪ್ರಮುಖ ಕಾರಣ.
ಇವರು ಸದಸ್ಯರ ಮೇಲೆ ಹಲ್ಲೆ ಮಾಡಿದರೆ ಸಾಮಾನ್ಯ ಜನರ ಗತಿ ಎನು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
ನಂತರ ಮುಖ್ಯಾಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಸಾರ್ವಜನಿಕರೆಲ್ಲ ಸೇರಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್ ರವರ ಮೂಲಕ ಮನವಿ ನೀಡಿದರು.
ಉಗ್ರ ಸ್ವರೂಪ ತಾಳಿದ ಪ್ರತಿಭಟನೆ:
ಬೆಳಿಗ್ಗೆಯಿಂದ ಪ್ರತಿಭಟನೆ ಮಾಡಿದ ನಾಗರಿಕರು ಸಂಜೆವರೆಗೂ ಭ್ರಷ್ಟ ಮುಖ್ಯಾಧಿಕಾರಿಯ ವರ್ಗಾವಣೆ ಆದೇಶ ಬಾರದೆ ಇರದ ಕಾರಣ ರಾತ್ರಿ ಪೂರ್ತಿ ಬೆಳಿಗ್ಗೆ ವರೆಗೂ ಪ್ರತಿಭಟನೆ ಮಾಡಿದರು, ಪಟ್ಟಣ ಪಂಚಾಯತಿ ಎದುರುಗಡೆ ಅಡುಗೆ ಮಾಡಿ ಊಟವನ್ನು ಮಾಡಿ ಅಲ್ಲೇ ಮಲಗಿ ಪ್ರತಿಭಟನೆ ಮಾಡಿದರು,
ಪಟ್ಟಣ ಪಂಚಾಯತಿ ಸದಸ್ಯನಾದ ನನ್ನ ಮೇಲೆ ಜೀವ ಬೆದರಿಕೆ ಅಲ್ಲದೇ ಹಲ್ಲೆ ಮಾಡಲು ಯತ್ನಿಸಿದ ಹಂದಿಗಳ ಮಾಲಕರ ವಿರುದ್ಧ ದೂರು ಸಲ್ಲಿಸಲಾಗುವುದು.
– ಮಲ್ಲಿಕಾರ್ಜುನಗೌಡ ಬೊಮನಗೌಡ್ರ, ಪಟ್ಟಣ ಪಂಚಾಯತಿ ಸದಸ್ಯ, ನರೆಗಲ್.
ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿದು ಸಾಗಿಸಲು ಹಾಗೂ ಭ್ರಷ್ಟ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಿ ವರ್ಗಾವಣೆ ಆದೇಶ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ..
–ಶಿವುನಗೌಡ ಪಾಟೀಲ
.
ಸಾರ್ವಜನಿಕರ ಸಹಿ ಮಾಡಿದ ಮುಖ್ಯಾಧಿಕಾರಿ ವರ್ಗಾವಣೆ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳಿಹಿಸಲಾಗುದೆ…
–ಮಾರುತಿ ಬ್ಯಾಕೋಡ್ ಜಿಲ್ಲಾ ಯೋಜನಾ ನಿರ್ದೇಶಕ
ಇಷ್ಟೆಲ್ಲಾ ಸಾರ್ವಜನಿಕರು ಪ್ರತಿಭಟನೆ ಮಾಡಬೇಕಾ, ಸಾರ್ವಜನಿಕರ ಬೇಡಿಕೆಗೆ ಅಧಿಕಾರಿಗಳ ನಿರ್ಲಕ್ಷ್ಯ ಏಕೆ..?, ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವಾ..? ಸಾರ್ವಜನಿಕರಿಗಾಗಿಯೆ ಕೆಲಸ ಮಾಡಲು ಕುಳಿತ ಅಧಿಕಾರಿಗಳು ಅವರ ಬೇಡಿಕೆಗೆ ಸ್ಪಂದಿಸದಿದ್ದರೆ ಆ ಸ್ಥಾನದಲ್ಲಿ ಏಕೆ ಇರಬೇಕು..?, ಮೇಲಾಧಿಕಾರಿಗಳು ಏನು ಕೆಲಸ ಮಾಡಿತ್ತದ್ದಾರೆ..? ಕಣ್ಮುಚ್ಚಿ ಕುಳಿತಿರುವರಾ..? ಹೀಗೆ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿರುವದು ಸಹಜ… ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸುವರೋ..! ಮೇಲಾಧಿಕಾರಿಗಳೆ ಉತ್ತರ ನಿಡಲಿ ಎಂದು ಸಾರ್ವಜನಿಕರ ಪರವಾಗಿ ವಿನಂತಿ…..!
ರೆಮ್ ಡೆಸಿವರ್ ಈಗ 800 ಮೆಟ್ರಿಕ್ ಟನ್ ಹೆಚ್ಚಿಸಿದ ಕೇಂದ್ರ ಸರ್ಕಾರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವಿ ಸ್ಪಂದಿಸಿದ ಪ್ರಾಧನಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ರಾಜ್ಯಕ್ಕೆ ರೆಮ್ ಡೆಸವಿರ್ ಹಂಚಿಕೆಯನ್ನು 800 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ .ಕೆ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಪೋಷ್ಟ ಮಾಡಿದ್ದಾರೆ.