ಆಲಮಟ್ಟಿ : ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ನಿಡಗುಂದಿ ತಾಲೂಕು ಸಂಘಟನೆ ಆಶ್ರಯದಲ್ಲಿ 42 ನೇ ರೈತ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ನಿಡಗುಂದಿಯ ಸಿದ್ದಣ್ಣ ನಾಗಠಾಣ ಅವರ ಕಲ್ಯಾಣ ಮಂಟಪದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಹಲ ರೈತ ಸಂಘಟನೆ ಪ್ರಮುಖರು,ರೈತರನೇಕರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿದ್ದ ರೈತ ಸಂಘದ ಬಸವರಾಜ ಬಾಗೇವಾಡಿ, ರೈತರೆಲ್ಲರು ಒಗ್ಗೂಡಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು. ಪಟ್ಟಣ ಪಂಚಾಯತ ಸದಸ್ಯ ಶಿವಾನಂದ ಮುಚ್ಚಂಡಿ, ರೈತರಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆ ಯೋಜನೆಗಳ ಸದುಪಯೋಗ ಪ್ರತಿಯೊಬ್ಬ ರೈತರು ಪಡೆಯಲು ಮುಂದಾಗಬೇಕು. ರೈತ ಸಂಘಟನೆಗೆ ಸದಾ ಬೆಂಬಲವಾಗಿ ನಿಂತು ಇನ್ನಷ್ಟು ಬಲಪಡಿಸಬೇಕು. ಇಂದಿನ ದಿನಮಾನದಲ್ಲಿ ಸಂಘಟನೆಯೇ ನಮಗೆಲ್ಲ ಮೊದಲು ಆಧಾರಸ್ತಂಭವಾಗಿದೆ ಎಂದರು.


ರೈತ ಸಂಘದ ತಾಲೂಕಾಧ್ಯಕ್ಷ ಸೀತಪ್ಪ ಗಣಿ, 1980 ರಲ್ಲಿ ನವಲಗುಂದ, ನರಗುಂದಲ್ಲಿ ರೈತರ ಹಕ್ಕುಗಳಿಗಾಗಿ ನಡೆದ ಬಂಡಾಯದ ಹೋರಾಟಕ್ಕೆ ಇಂದು 42 ವರ್ಷ ಗತಿಸಿದವು. ಅಂದು ಗುಂಡೆಟಿಗೆ ಬಲಿಯಾದ ರೈತ ಬಸಪ್ಪ ಲಕ್ಕುಂಡಿ ಸಾವಿಗೆ ರೈತರೆಲ್ಲ ಎಚ್ಚೇತ್ತುಕೊಂಡರು. ಸಂಘಟನೆಗಳು ಹುಟ್ಟಿಕೊಂಡವು. ಇಡೀ ರಾಜ್ಯದ ತುಂಬೆಲ್ಲ ಹೋರಾಟದ ಕಹಳೆ ಮೊಳಗಿದವು. ಸಂಘಟನೆಗಳಿದ್ದರೆ ಮಾತ್ರ ನ್ಯಾಯ ಸಿಗುವುದು. ನಮ್ಮ ಬದುಕಿಗೆ ರೈತ ಪರ ಸಂಘಗಳು ಆಸರೆವಾಗಬಲ್ಲವು. ಆ ಕಾರಣ ಸಂಘಟನೆ ಸದೃಢವಾಗಿ ಬೆಳೆಯಬೇಕು.ಅದಕ್ಕೆ ರೈತರು ಶಕ್ತಿ ತುಂಬಬೇಕು ಎಂದರು.
ಪಪಂ ಸದಸ್ಯ ಪ್ರಲ್ಹಾದ ಪತ್ತಾರ, ಕಂದಾಯ ನಿರೀಕ್ಷಕ ಸಲೀಂ ಹುಲಗೊಂಡ, ಪ್ರಗತಿಪರ ರೈತ ಪ್ರಕಾಶ ರೇಷ್ಮಿ,ಬೀರಪ್ಪ ಇಂಜಗೆನೆರಿ,ಶಿವಪ್ಪ ಇಂಗಳೇಶ್ವರ,ತಾಲೂಕಾ ಕುರುಬರ ಸಂಘದ ಪ್ರಧಾನ ಕಾರ್ಯದಶಿ೯ ಪರಶು ಕುರಿ, ಮಾಜಿ ಸೈನಿಕರಾದ ಗುಳಪ್ಪ ಅಂಗಡಿ, ಯಲಗೂರೇಶ ಮಸೂತಿ, ಎಸ್.ಎಸ್.ಹಳೇಮನಿ ಇತರರು ಅತಿಗಳಾಗಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾವಾಸಾಬ ವಾಲಿಕಾರ, ಕಾಯಾ೯ಧ್ಯಕ್ಷ ವೆಂಕಟೇಶ ವಡ್ಡರ, ಉಪಾಧ್ಯಕ್ಷ ಪೀರಸಾಬ ನದಾಫ್, ಸಾಬಣ್ಣ ಅಂಗಡಿ,ಖಜಾಂಚಿ ಸುಭಾಸ ಚೋಪಡೆ,ಕಾರ್ಯದರ್ಶಿ ಮಲ್ಲಯ್ಯ ನಾಗೂರಮಠ ಮೊದಲಾದವರಿದ್ದರು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

You May Also Like

ಗುರು-ಶಿಷ್ಯರ ಸಂಬಂಧ ಪವಿತ್ರ- ಜಿ.ಎಂ. ಕೋಟ್ಯಾಳ

ಆಲಮಟ್ಟಿ : ಗುರು ಶಿಷ್ಯರ ಸಂಬಂಧ ಬಹಳಷ್ಟು ಪವಿತ್ರಮಯ. ಆದರೆ ಇತ್ತಿತ್ತಲಾಗಿ ಆ ಭಾವ ಕಣ್ಮರೆಯಾಗುತ್ತಿದೆ.…

ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ

ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ…

ಕೊರೊನಾ ಏರಿಕೆ:ಕೆಲವು ಪ್ರದೇಶಗಳು ಸೀಲ್ ಡೌನ್ ಎಂದ ಬಿಎಸ್ವೈ

ಬೆಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಆದ್ದರಿಂದ ಕೆಲವು ಪ್ರದೇಶಗಳನ್ನು ಸೀಲ್ ಡೌನ್…

ಕೊರೋನಾ ಕಾವ್ಯ-1

ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ.