ಉತ್ತರಪ್ರಭ
ಆಲಮಟ್ಟಿ;
ಇಲ್ಲಿಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಮೈದಾನವನ್ನು 2.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ಹೇಳಿದರು.
ಸ್ಥಳೀಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ಟೇಡಿಯಂ ಮಾದರಿ ವೀಕ್ಷಣಾ ಗ್ಯಾಲರಿ, ತಲಾ 10 ಶೌಚಾಲಯ, ಬಾತ್ ರೂಮ್ , 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒಳಗೊಂಡಿರಲಿದೆ. ಈಗಿರುವ ಮೈದಾನ ಇನ್ನಷ್ಟು ವಿಸ್ತಾರಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಸಿಂಥಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು ಎಂದರು.
ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ. ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ. ಕುಲಕರ್ಣಿ, ಐ.ಎಲ್. ಕಳಸಾ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಪಿ.ಎ. ಹೇಮಗಿರಿಮಠ, ಜಿ.ಎಂ. ಕೊಟ್ಯಾಳ, ಪಿ. ಶಾಂತಾ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಎಸ್.ಐ. ಗಿಡ್ಡಪ್ಪಗೋಳ, ಪಿಎಸ್ ಐ ಇಂಡಿಕರ, ಇನ್ನೀತರರು ಇದ್ದರು.
10 ಕ್ಕೂ ಹೆಚ್ಚು ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಡಿಸ್ ಪ್ಲೇ ನೃತ್ಯ ಗಮನ ಸೆಳೆದವು.
ಜವಾಹರ ನವೋದಯ ವಿದ್ಯಾಲಯದ ಮಕ್ಕಳು ಪ್ರಚುರಪಡಿಸಿದ ಸ್ಕಿಪ್ಪಿಂಗ್ ರೋಪ್ ನಲ್ಲಿ ಕವಾಯತ್ತು ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

You May Also Like

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಯತ್ನ ಚಿಕಿತ್ಸೆ ಫಲಿಸದೆ ಸಾವು

ಗದಗ:ಸಾಲಕ್ಕೆ ಹೆದರಿ ಗದಗ ತಾಲೂಕಿನ ಬೆಳದಡಿ ತಾಂಡಾದ ರೈತ ವೆಂಕಟೇಶ ಶಿವಪ್ಪ ಚವ್ಹಾಣ ವಯಸ್ಸು:32 ಆತ್ಮಹತ್ಯೆಗೆ…

ಡಿಕೆಶಿ ಹೇಳಿಕೆ ಹಾಸ್ಯಾಸ್ಪದವಾಗಿವೆ : ರಾಮದಾಸ್ ಟೀಕೆ

ಲಸಿಕೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಂದು ಲಸಿಕೆಗೋಸ್ಕರ ಬಿಕ್ಷೆ ಬೇಡುತ್ತಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಶಾಸಕ ರಾಮದಾಸ್ ಡೀಕಿಸಿದ್ದಾರೆ.

ಬಳಗಾನೂರಿನಲ್ಲಿ ಚೆನ್ನಮ್ಮ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಮನವಿ

ಪಂಚಮಸಾಲಿ ಸಮಾಜದ ಶಹರ ಘಟಕ ದಿಂದ ಗದಗ ಜಿಲ್ಲಾ ಬಳಗಾನೂರ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಇಂದು ಮೂರನೇ ಹಂತದ ಲಾಕ್ ಡೌನ್ ಅಂತ್ಯ – ನಾಳೆಯಿಂದ ಹೇಗಿರಲಿದೆ ರಾಜ್ಯ?

ಇಂದು ಮೂರನೇ ಹಂತದ ಲಾಕ್ ಡೌನ್ ಕೊನೆಗೊಳ್ಳಲಿದೆ. ನಾಳೆಯಿಂದ ಹೊಸ ಸ್ವರೂಪದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.