ಉತ್ತರಪ್ರಭ
ಗದಗ:
ರಾಜ್ಯಾದ್ಯಂತ 150 ಸ್ಥಾನ ಗೆಲ್ಲುವ ಉದ್ದೇಶದಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ ಕುರಿತು ನಗರದ ಪತ್ರಿಕಾ ಭವನದಲ್ಲಿ ಎಂ.ಎಲ್.ಸಿ ಎಸ್.ವಿ.ಸಂಕನೂರ್ ಸುದ್ದಿಗೋಷ್ಠಿ.
ಸದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನಾವು ಇಗಾಗಲೇ ಭೂತ್ ವಿಜಯ ಅಭಿಯಾನವನ್ನು 10 ದಿನಗಳ ಕಾಲ ಯಶಸ್ವಿಗೊಳಿಸಿದ್ದು, ಬರುವ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಜರುಗಲಿದ್ದು ರಾಜ್ಯಾದ್ಯಂತ 224 ಮತಕ್ಷೇತ್ರದಲ್ಲಿ ಬಿಜೆಪಿಯು ಕನೀಷ್ಠ 150 ಸ್ಥಾನ ಗೆಲ್ಲುವ ಉದ್ದೇಶದಿಂದ, ಬಿಜೆಪಿ ರಾಷ್ಟಾçಧ್ಯಕ್ಷರ ಕರೆಯ ಮೇರೆಗೆ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ವಿಜಯ ಸಂಕಲ್ಪ ಅಭಿಯಾನವು ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದು, ಅಲ್ಲದೆ 39 ಭಾರತಿಯ ಜನತಾ ಪಾರ್ಟಿಯ ಸಂಘಟನಾತ್ಮಕ ಜಿಲ್ಲೆಗಳಿದ್ದು ಇದರಲ್ಲಿ ಈ ಅಭಿಯಾನವು ಪ್ರಾರಂಭ ವಾಗುವದು ಹಾಗೂ 312 ಮಂಡಳಿಗಳು, 11642 ಶಕ್ತಿ ಕೇಂದ್ರಗಳು, ಸುಮಾರೂ 58,156 ಭೂತ್‌ಗಳು ಇದ್ದು, ಇವೆಲ್ಲದರ ಮೂಲಕ ಸುಮಾರು 2 ಕೋಟಿ ಮತದಾರರನ್ನ ಮುಟ್ಟುವ ಗುರಿ ಹೊಂದಲಾಗಿದೆ ಎಂದರು ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವು 21ರಂದು ವಿಜಯಪುರದ ಸಿಂದಗಿಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಷ್ಟಾçಧ್ಯಕ್ಷ ಜೆ.ಪಿ ನಡ್ಡಾ ರವರಿಂದ ವರ್ಚ್ಯುಯಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಏನೆನು..?
• ಪ್ರತಿ ಕುಟುಂಬಗಳಿಗೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು.
• ಪ್ರತಿ ಬೂತ್ ಗೆ ಹೋದಲ್ಲಿ ವಾಹನಗಳಿಗೆ ಸ್ಟಿಕರ್, ಮನೆ ಗೋಡೆಗಳಿಗೆ ಸ್ಟಿಕರ್ ಹಚ್ಚುವ ಕೆಲಸ ಮಾಡುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…

ವಿಧಾನಪರಿಷತ್ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿದ ಬಿಜೆಪಿ!

ಬೆಂಗಳೂರು : ಉಪ ಚುನಾವಣೆಯೊಂದಿಗೆ ವಿಧಾನಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ.

ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ: ಕ್ರಮಕ್ಕೆ ಜೆಡಿಎಸ್ ವಿದ್ಯಾರ್ಥಿ ಘಟಕ ಒತ್ತಾಯ

ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಳಪೆ ಮಟ್ಟದ್ದಾಗಿದ್ದು, ಅದನ್ನು ತಡೆಗಟ್ಟಬೇಕೆಂದು ಜಾತ್ಯಾತೀತ ಜನತಾದಳ ವಿದ್ಯಾರ್ಥಿ ಘಟಕದಿಂದ ಉಪ‌ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕಳಪೆ ಕಾಮಗಾರಿಗೆ ತಡೆ

ಉತ್ತರ ಪ್ರಭ ಸುದ್ದಿರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ…