ಉತ್ತರಪ್ರಭ
ಆಲಮಟ್ಟಿ: ಸುಮಾರು 21 ವರ್ಷಗಳ ಹಿಂದೆ ಕತ್ತರಿಸಿ ಸಂರಕ್ಷಿಸಿ ಭದ್ರತೆಯಲ್ಲಿಟ್ಟಿರುವ ಆಲಮಟ್ಟಿ ಆಣೆಕಟ್ಟಿನ ಕ್ರಸ್ಟ್‌ ಗೇಟ್ ಗಳ ಸ್ಥಿತಿಗತಿಗಳ ಪರಿಶೀಲನೆಗೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಇದೇ 23 ರಂದು ಆಗಮಿಸಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿದೆ.
ಆಲಮಟ್ಟಿ ಜಲಾಶಯ ಹಾಗೂ ನಾರಾಯಣಪುರ ಜಲಾಶಯದ ಏತ ನೀರಾವರಿ ಯೋಜನೆ, ಕಾಲುವೆಗಳ ಕಾಮಗಾರಿಗಳ ಪ್ರಗತಿ, ಆಲಮಟ್ಟಿ ಜಲಾಶಯದ ಕತ್ತರಿಸಿದ ಗೇಟ್ ಗಳ ಅಧ್ಯಯನಕ್ಕಾಗಿ ಸುಪ್ರಿಂಕೋರ್ಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕರ್ನಾಟಕದ ಪರವಾಗಿ ವಾದ ಮಂಡಿಸುತ್ತಿರುವ ಕಾನೂನು ತಂಡ ಇದೇ 23 ಮತ್ತು 24 ಎರಡು ದಿನ ಆಲಮಟ್ಟಿಗೆ ಆಗಮಿಸುತ್ತಿದೆ.
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸುಪ್ರಿಂಕೋರ್ಟ್ ಹಿರಿಯ ವಕೀಲರಾದ ಶ್ಯಾಮ ದಿವಾನ, ಮೋಹನ ಕಾತರಕಿ, ವಿ.ಎನ್. ರಘುಪತಿ, ಹೈಕೋರ್ಟ್ ವಕೀಲರಾದ ಪಿ.ಎನ್. ರಾಜೇಶ್ವರ, ಅಶ್ವಿನ ಚಿಕ್ಕಮಠ, ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಪ್ರಧಾನ ತಾಂತ್ರಿಕ ಸಲಹೆಗಾರ ಶ್ರೀರಾಮಯ್ಯ, ಸಂಯೋಜಕ ಹಾಗೂ ಸಲಹೆಗಾರ ಕೆ. ಬಂಗಾರಸ್ವಾಮಿ, ಟಿ.ಎನ್. ಅಚ್ಯುತಕುಮಾರ ಅವರುಳ್ಳ ತಂಡ ಆಗಮಿಸಲಿದೆ.
ಇದೇ 23 ರಂದು ಮಧ್ಯಾಹ್ನ 2 ಕ್ಕೆ ಬೆಳಗಾವಿಯಿಂದ ಆಲಮಟ್ಟಿಗೆ ಆಗಮಿಸುವ ತಂಡ ಆಲಮಟ್ಟಿಯ ಜಲಾಶಯದ ಕತ್ತರಿಸಿದ ಗೇಟ್ ಗಳನ್ನು ಪರಿಶೀಲಿಸಲಿದೆ. 24 ರಂದು ಬೆಳಿಗ್ಗೆ 9 ಕ್ಕೆ ನಾರಾಯಣಪುರ ಜಲಾಶಯಕ್ಕೆ ತೆರಳಿ ಅಲ್ಲಿ ಅಣೆಕಟ್ಟು ಪರಿಶೀಲಿಸಿ ಮಧ್ಯಾಹ್ನ 12 ಕ್ಕೆ ಆಲಮಟ್ಟಿಗೆ ತಂಡ ಆಗಮಿಸಿ, ಪುನಃ ನಾನಾ ಕಾಮಗಾರಿಗಳನ್ನು ಪರಿಶೀಲಿಸಲಿದೆ.
ಜಲಾಶಯದ ಕ್ರಸ್ಟ್ ಗೇಟ್ ಗಳನ್ನು 524.256 ಮೀ.ಗೆ ವಿನ್ಯಾಸಗೊಳಿಸಲಾಗಿತ್ತು. 2000 ರಲ್ಲಿ ಅದೇ ಎತ್ತರಕ್ಕೆ ಅಳವಡಿಸಲಾಗಿತ್ತು. ಆದರೆ ನೀರಿನ ಸಂಗ್ರಹ ಆಗಿರಲಿಲ್ಲ. ನಂತರ ಸುಪ್ರಿಂಕೋರ್ಟ್ ಆದೇಶದಂತೆ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು ಜಲಾಶಯದ ಮಟ್ಟವನ್ನು 519.60 ಮೀ.ಗೆ ಎತ್ತರದವರೆಗೆ ಮಾತ್ರ ಸೀಮಿತಗೊಳಿಸಿ, ಉಳಿದ ಎತ್ತರದ ಗೇಟ್ ಗಳನ್ನು ಕತ್ತರಿಸಿ 2001 ರಲ್ಲಿ ಕತ್ತರಿಸಿ ಜಲಾಶಯದ ಸಮೀಪ ಒಂದೆಡೆ ಸಂರಕ್ಷಿಸಿಡಲಾಗಿದೆ.
2010 ರ ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರ-2 ತೀರ್ಪಿನ ಪ್ರಕಾರ ಜಲಾಶಯವನ್ನು 524.256 ಮೀಗೆ ಎತ್ತರಿಸಲು ಅನುಮತಿ ನೀಡಿದ್ದರೂ, ನಾನಾ ರಾಜ್ಯಗಳ ತಕರಾರುಗಳ ಕಾರಣ ಜಲಾಶಯ ಎತ್ತರದ ವಿಷಯ ಇನ್ನೂ ಬಗೆಹರಿದಿಲ್ಲ.
ಹೀಗಾಗಿ ಸುಪ್ರಿಂಕೋರ್ಟ್ ನಲ್ಲಿ ವಾದ ಮಂಡಿಸುವ ಕಾನೂನು ತಂಡ ಆಲಮಟ್ಟಿಗೆ ಆಗಮಿಸಿ ಕತ್ತರಿಸಿದ ಗೇಟ್ ಗಳನ್ನು ಪರಿಶೀಲಿಸಲಿದೆ. ಅದಕ್ಕಾಗಿ ಕಳೆದ 21 ವರ್ಷಗಳಿಂದ ಸಂಗ್ರಹಿಸಡಲಾದ ಕತ್ತರಿಸಿದ ಗೇಟ್ ಗಳ ಸುತ್ತ ಸ್ವಚ್ಛತಾ ಕಾರ್ಯ, ಗೇಟ್ ಗಳ ಬಳಿ ಸ್ವಚ್ಛತೆ, ಅದಕ್ಕೆ ಅಕ್ಷರಗಳ ಪೇಂಟ್ ನಮೂದಿಸುವುದು ಸೇರಿ ನಾನಾ ಕಾರ್ಯವನ್ನು ಕೆಬಿಜೆಎನ್ ಎಲ್ ಅಧಿಕಾರಿಗಳು ಭರದಿಂದ ಆರಂಭಿಸಿದ್ದಾರೆ.
ಮತ್ತೊಂದೆಡೆ ಕಾನೂನು ತಂಡಕ್ಕೆ ಅಗತ್ಯ ಮಾಹಿತಿ ನೀಡಲು ಕೆಬಿಜೆಎನ್ ಎಲ್ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಸಂಕಷ್ಟ – ರಾಜ್ಯದಲ್ಲಿ ಮತ್ತೆ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಂಕಷ್ಟ ಮುಂದುವರೆದ ಹಿನ್ನೆಲೆಯಲ್ಲಿ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈ…

ಸಾರಿಗೆ ನೌಕರರಲ್ಲಿ ಸಿಎಂ ಮಾಡಿದ ಮನವಿ ಏನು ಗೊತ್ತಾ?

ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕೂಡಲೇ ಮುಷ್ಕರ ಕೈಬಿಟ್ಟು ಸಾರಿಗೆ ಸಚಿವರ ಜೊತೆ ಚರ್ಚೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಗೃಹ ರಕ್ಷಕ ದಳದ ಸದಸ್ಯ ಸ್ಥಾನಗಳ ನೋಂದಣಿಗೆ ಅರ್ಜಿ ಆಹ್ವಾನ

ಜಿಲ್ಲೆಯ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 194 ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯ ಸ್ಥಾನಗಳಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 9 ರಂದು ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಅಲ್ಪಾವಧಿ ಕೃಷಿ ಸಾಲ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ…