ಬೆಂಗಳೂರು : ಕೊರೊನಾದ ಹಾವಳಿಯ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ಸಪ್ತಪದಿ ಯೋಜನೆಗೆ ಮುಂದೂಡಿದೆ.
ಮುಜರಾಯಿ ಇಲಾಖೆ ನಡೆಸುವ ಈ ಕಾರ್ಯಕ್ರಮಕ್ಕೆ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಇರುವ ಬೇರೆ ಬೇರೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಸಲು ಸರ್ಕಾರ ಸಮಯ ನಿಗದಿ ಮಾಡಿತ್ತು.
ಇದಕ್ಕಾಗಿ ಮಾರ್ಚ್ ನಲ್ಲಿ ನೋಂದಾಯಿಸಿದ್ದ ವಧು – ವರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಸಮ್ಮತಿ ಪತ್ರ ಪಡೆದು ನಿಗದಿತ ದಿನಾಂಕದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿಯೇ ಎ ದರ್ಜೆಯ 110 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾದಿಂದ ಮುಂದೂಡಲಾಗಿತ್ತು. ಸದ್ಯ ಮತ್ತೆ ಈ ಸಮಯವನ್ನು ಮುಂದೂಡಲಾಗಿದೆ.

Leave a Reply

Your email address will not be published.

You May Also Like

ಪೊಲೀಸರಿಗೆ ಸಿಕ್ಕ ನಟ ಸುಶಾಂತ್ ಸಿಂಗ್ ಒಪ್ಪಂದಗಳ ಪ್ರತಿಗಳು!

ನವದೆಹಲಿ: ನಟ ಸುಶಾಂತ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರತಿಗಳನ್ನು ಯಶ್ ರಾಜ್ ಫಿಲ್ಮ್ಸ್ (ವೈಆರ್…

ನಗರ ಸಭೆ ಚುನಾವಣೆ: 4ನೇ ವಾರ್ಡಿನಲ್ಲಿ ಕಾಂಗ್ರೇಸ್   ಮತ್ತು 28ನೇ ವಾರ್ಡಿನಲ್ಲಿ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 4 ಮತ್ತು  28 ನೇ ವಾರ್ಡನ ಮತ  ಎಣಿಕೆ ಮುಕ್ತಾಯ ,…

ಗದಗ ಜಿ.ಪಂ. ಪ್ರಭಾರ ಅಧ್ಯಕ್ಷರಾಗಿ ಮಲ್ಲವ್ವ ಬಿಚ್ಚೂರ

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರು, ಇಂದು ಗದಗ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರ ಅಧಿಕಾರ ಸ್ವೀಕರಿಸಿದರು.