ಆಲಮಟ್ಟಿ : ಆಲಮಟ್ಟಿಯ ಕುವರಿ,ಪ್ರತಿಭಾನ್ವಿತೆ ಭಾಗ್ಯಶ್ರೀ ಬಿರಾದಾರ ಅವರ ಮದುವೆ ಸಮಾರಂಭ ವರ ಮಲ್ಲಿಕಾರ್ಜುನ ಅವರೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.

ಅದ್ದೂರಿ ಮದುವೆ ಸಮಾರಂಭದಲ್ಲಿ ಈ ನವ ಜೋಡಿಗಳು ಸಪ್ತಪತಿ ತುಳಿದು ಹೊಸಬಾಳಿಗೆ ಕಾಲಿರಿಸಿದರು. ಆಲಮಟ್ಟಿಯ ಶ್ರೀಮತಿ ಸುಮಿತ್ರಾ ಮತ್ತು ದಿ, ಪ್ರಭು ಕಲ್ಲಪ್ಪ ಬಿರಾದಾರ ಅವರ ಸುಪುತ್ರಿಯಾಗಿರುವ ಎಂಕಾಮ್ ಪದವೀಧರೆ ಭಾಗ್ಯಶ್ರೀ ಇವರ ಶುಭ ವಿವಾಹ ಕನಮಡಿಯ ಶ್ರೀಮತಿ ಶಾರದಾ ಮತ್ತು ರಾವಾಸಾಹೇಬ್ ಬಿರಾದಾರ ಅವರ ಜೇಷ್ಠ ಸುಪುತ್ರ ಚಿಕ್ಕೋಡಿ ಕಾಲೇಜೊಂದರ ಉಪನ್ಯಾಸಕ ಮಲ್ಲಿಕಾರ್ಜುನ ಅವರೊಂದಿಗೆ ನೆರವೇರಿತು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಶ್ರೀ ಧರಿದೇವರ ದೇವಸ್ಥಾನ ಮಂಗಲ ಕಾಯಾ೯ಲಯದಲ್ಲಿ ಜರುಗಿದ ವಿವಾಹ ಸಮಾರಂಭದಲ್ಲಿ ಈ ನವ ಜೋಡಿಗಳು ಸಹಸ್ರಾರು ಹಿತೈಷಿಗಳ ಸಮ್ಮುಖದಲ್ಲಿ ಸತಿಪತಿ ಬಾಳ ಸಂಗಾತಿಗಳಾಗಿ ಕೈಹಿಡಿದರು. ಹೊಸಬಾಳಿನ ಹೊಸಿಲಲಿ ನವ ಜೋಡಿಗಳು ಮಿನುಗಿ ಸಂತಸದ ಹೊನಲಿನಲ್ಲಿ ತೇಲಿ ದಾಂಪತ್ಯ ಜೀವನದ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.



ನವ ವಧು- ವರರನ್ನು ಗುರು,ಹಿರಿಯರು,ಬಂಧು,ಬಳಗ, ಆತ್ಮೀಯರು,ಒಟನಾಟಿ ಆಪ್ತಮಿತ್ರರು ಆಶೀರ್ವದಿಸಿ ನೂರಾರು ವಸಂತಕಾಲ ಸಹಬಾಳ್ವೆ ಹೊಂದಾಣಿಕೆಯಿಂದ ಹರುಷದಿಂದ ಬಾಳಿ ಬದುಕಲಿ ಎಂದು ಶುಭಹರಿಸಿದರು.