ಉತ್ತರಪ್ರಭ ಸುದ್ದಿ

ಹುಬ್ಬಳ್ಳಿ: ಕ್ಷುಲ್ಲಕ ವಿಚಾರವಾಗಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ರಾತ್ರಿ ಇಲ್ಲಿನ ಹಳೇಹುಬ್ಬಳ್ಳಿ ಸದರಸೋಫಾ ಕಟಗರ ಓಣಿ ಬಳಿಯ ಮುಖಗಲ್ಲಿಯಲ್ಲಿ ನಡೆದಿದೆ.

ಮಹಮ್ಮದ್ ಜಾಫರ್ ಇಮ್ತಿಯಾಜ್ ದಢೇಸೂರ (21 ವ) ಕೊಲೆಯಾಗಿದ ವ್ಯಕ್ತಿ. ಹಳೇಹುಬ್ಬಳ್ಳಿ ಕಸಾಯಿ ಮೊಹಲ್ಲಾದ ಶಾಬಾದ ಎಂಬಾತನೇ ಕೊಲೆ ಮಾಡಿದ್ದವನೆಂದು ಮೃತನ ಸಹೋದರ ಖ್ವಾಜಾಮೈನುದ್ದೀನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಕ್ಷುಲ್ಲಕ ವಿಷಯವಾಗಿ ಇವರಿಬ್ಬರ ನಡುವೆ ಎರಡು ದಿನಗಳ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಇದೇ ದ್ವೇಷ ಸಾಧಿಸುತ್ತಿದ್ದ ಶಾಬಾದ್ ಶನಿವಾರ ರಾತ್ರಿ ತನ್ನ ಮನೆ ಬಳಿ ಬಂದಿದ್ದ ಮಹಮ್ಮದ್ ಜೊತೆ ಮತ್ತೆ ವಾಗ್ವಾದ ಮಾಡಿ ಚಾಕುವಿನಿಂದ ಮೊಣಕಾಲು ಬಳಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಮ್ಮದ್ ನನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸವೊಂದರ ವೀಲ್ ಜೇಂಟ್ ಕಟ್ ಆಗಿರುವ ಪರಿಣಾಮ, ಬಸ್ ಪಲ್ಟಿಯಾಗಿ…

ಲಿಂ.ತೋಂಟದ ಸಿದ್ದಲಿಂಗ ಶ್ರೀಗಳವರ “ಆಲಮಟ್ಟಿ ಪ್ರೇಮ ಕಾವ್ಯಭಾವ” ಅನನ್ಯ !!!

ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿಆಲಮಟ್ಟಿ (ವಿಜಯಪುರ ಜಿಲ್ಲೆ) : ಮನದಾಳದಿಂದ ಹೊರಡುವ ನಿಷ್ಕಲ್ಮಶ,ನಿಸ್ವಾರ್ಥವುಳ್ಳ ಪ್ರೀತಿ…

ಟ್ರಾಕ್ಟರ್ ಮತ್ತು ಕಾರು ಮುಖಾಮುಖಿ :ಟ್ರಾಕ್ಟರ್ ಪಿಸ್ ಪಿಸ್..!

ಉತ್ತರಪ್ರಭಗದಗ:ಟ್ರ್ಯಾಕ್ಟರ್ ಮತ್ತು ಕಾರ ನಡುವೆ ಮುಖಾಮುಖಿ ನಡೆದು ಟ್ರ್ಯಾಕ್ಟರ್ ತುಂಡಾದ ಘಟನೆ ಗದಗ ಸಮೀಪದ ಚಿಕ್ಕಟ್ಟಿ…

ಡಬ್ ಮಲಗ್ತೀರೋ, ಹೋಳ್ ಮಗ್ಗಲಾಗಿಯೋ, ಬೆನ್ ಹಚ್ಚಿ ಮಲಗ್ತೀರೊ?: ಯಾವ ಪೊಸಿಷನ್ನಿನಲ್ಲಿ ಮಲಗಿದರೆ ಬೆಟರ್?

ಮಲಗುವ ಸ್ಥಿತಿಗಳಲ್ಲಿ ಹಲವಾರು ವಿಧ. ಕೆಲವರು ಹೊಟ್ಟೆ ಹಚ್ಚಿ ಡಬ್ ಮಲಗಿದರೆ, ಇನ್ನು ಕೆಲವರು ಹೋಳ್ ಮಗ್ಗುಲಾಗಿ ಅಂದರೆ ದೇಹದ ಒಂದು ಭಾಗದ ಮೇಲೆ ಮಲಗುತ್ತಾರೆ. ಕೆಲವರು ಬೆನ್ನು ಹಚ್ಚಿ ಮಲಗುತ್ತಾರೆ. ಈ ಮೂರರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ? ಯಾವುದರಿಂದ ಏನು ಸಮಸ್ಯೆ ಆಗುತ್ತವೆ?