ಉತ್ತರಪ್ರಭ ಸುದ್ದಿ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡದಲ್ಲಿ ಮತ್ತೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಗೆಜ್ಜಿ ಸಿದ್ಧೇಶ್ವರ ಮಠದ ಬಳಿ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನೂರಾರು ಎಕರೆ ಪ್ರದೇಶದ ಅರಣ್ಯ ಬೆಂಕಿಗಾಹುತಿಯಾಗಿದೆ.

ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡಕ್ಕೆ ಬೆಂಕಿ, ಬೆಂಕಿಯ ಕೆನ್ನಾಲೆಗೆಯಿಂದ ಪ್ರತಿ ವರ್ಷ ಅರಣ್ಯ ನಾಶವಾಗಿ ಅಲ್ಲಿಯ ಪ್ರಾಣಿ, ಪಕ್ಷಿಗಳು ಸೇರಿದಂತೆ ಅದರಲ್ಲೂ ಕಪ್ಪತ್ತಗುಡ್ಡದ ಹೃದಯ ಭಾಗದಲ್ಲಿ ಬೆಂಕಿ ಬಿದ್ದಿರುವುದರಿಂದ ಬೆಲೆ ಬಾಳುವ ಆಯುರ್ವೇದಿಕ ಸಸ್ಯಗಳು ಸುಟ್ಟು ಬಸ್ಮವಾಗುತ್ತಿವೆ, ಬೆಂಕಿಯನ್ನು ತಡೆಯಲು ಅರಣ್ಯ ಇಲಾಖೆ ಎಲ್ಲೋ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುರಿಗಾಯಿಗಳು ತಮ್ಮ ಕುರಿ ಮೇಕೆಗಳೆಗೆ ದಾರಿ ಮಾಡುವ ನೆಪದಲ್ಲಿ ಅರಣ್ಯವನ್ನು ನಾಶ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಕಪ್ಪತಗುಡ್ಡದಲ್ಲಿನ ಅಪಾರ ಪ್ರಮಾಣದ ಆಯುರ್ವೇದ ಸಸ್ಯ ಕಾಶಿ ಅಗ್ನಿಯ ಜ್ವಾಲೆಗೆ ಹೊತ್ತಿ ಉರಿದಿದೆ. ವರ್ಷದಲ್ಲಿ ನಾಲ್ಕೈದು ಬಾರಿ ಕಪ್ಪತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಪ್ಪತ್ತಗುಡ್ಡದ ಹತ್ತಿರದ ಗೆಜ್ಜಿ ಸಿದ್ಧೇಶ್ವರ ಮಠ ಎದುರಿಗೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಅಲ್ಲಿಯ ಸಾರ್ವಜನಿಕರು ಮಾಹಿತಿ ನೀಡಿದ್ದು. ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುವುದು ಹೊಸದೆನಲ್ಲ, ಅರಣ್ಯ ಇಲಾಖೆ ಕುರಿಗಾಹಿಗಳ ಮೇಲೆ ದೂಶಿಸುತ್ತದೆ, ಆದರೆ ಅಲ್ಲಿಯ ಸಾರ್ವಜನಿಕರು ಹೇಳುವುದೇ ಬೇರೆ ಕಪ್ಪತ್ತಗುಡ್ಡ ನಮ್ಮ ತಾಯಿ ಇದ್ದ ಹಾಗೇ, ಅದಕ್ಕೆ ನಾವು ಎಂದು ಬೆಂಕಿ ಹಚ್ಚುವುದಿಲ್ಲ, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಣಿ ಲಾಭಿಗೆ ಮಣಿದು ಬೆಂಕಿ ಹಚ್ಚಿ ಅವರಿವರ ಮೇಲೆ ಹಾಕುತ್ತದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರ ಹೊಣೆಯನ್ನು ಹೊರುವವರು ಯಾರು? ಅರಣ್ಯ ಇಲಾಖೆ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.

ಈ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಉತ್ತರಪ್ರಭ ಕರೆ ಮಾಡಿದಾಗ ಅವರು ಕರೆಯನ್ನು ಸ್ವಿಕರಿಸಲ್ಲಿಲ್ಲ.‌.

Leave a Reply

Your email address will not be published. Required fields are marked *