ಉತ್ತರಪ್ರಭ
ಚುನಾವಣೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಇನ್ನಿತರೆ ನಾಯಕರು. ನಾನು ಸಿಎಂ ಆಗ್ತೀನಿ ಅಂತ ಭಾರಿ ಪ್ರಮಾಣದಲ್ಲಿ ಪೈಪೋಟಿ ಯುಗ ನಡೆಯುತ್ತದೆ. ಒಂದ್ ಕಡೆ ನಾನು ಸಿಎಂ, ನೀನು ಸಿಎಂ ಅಂತ ಹೇಳುತ್ತಾ ತಮ್ಮ ತಮ್ಮ ನಾಯಕರ ಮೇಲೆ ಮುಗಿ ಬೀಳುತ್ತಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ದಿನಾಂಕ ಪ್ರಕಟಿಸಿತ್ತು. ಇದೀಗ ಸ್ಪರ್ದೆ ಮಾಡುವ ದಿನಾಂಕವನ್ನು ನ.21ಕ್ಕೆ ಮುಂದೂಡಿದೆ, ಕೆಪಿಸಿಸಿ ಡಿಕೆ ಶಿವಕುಮಾರ್ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ.15ಕ್ಕೆ ಕೊನೆಯ ದಿನಾಂಕವೆಂದು ಶಾಸಕ ಹಾಗೂ ಘಟಾನುಘಟಿ ನಾಯಕರ ನಡುವೆ ರಾಜ್ಯ ಪ್ರಸಾರ ಪಡಿಸಿತ್ತು. ಆದ್ರೆ ಇದೀಗ ದಿನಾಂಕ ಮುಂದೂಡಿದ ಪ್ರಕಟನೆ ನೋಡಿ ಕಾಂಗ್ರೆಸ್ ಕೆಲ ನಾಯಕರ ನಡುವೆ ಗೊಂದಲ ಸೃಷ್ಟಿಸಿ. ಸಿದ್ದರಾಮಯ್ಯ ಹಾಗೂ ಕೆಲ ಶಾಸಕರು ಮತ್ತು ಕಾಂಗ್ರೆಸ್ ಗೆ ಸ್ಪರ್ದೆ ಮಾಡ್ತೀನಿ ಅಂತ ಅನ್ನುವವರು ಇನ್ನೂ ಕೂಡ ನಾಮಪತ್ರ ಸಲ್ಲಿಕೆ ಮಾಡಿಲ್ಲ, ಬಿಜೆಪಿ ಹಾಗೂ ಕೈ ನಡುವೆ 2023ರ ಚುನಾವಣೆ ಭಾರಿ ಪ್ರಮಾಣದಲ್ಲಿ ಗದ್ದಿಗೆ ಎರಿದೆ.
ಕಾಂಗ್ರೆಸ್ ನಿಂದ ಕೆಲ ನಾಯಕರು ನಮಗೆ ಬೇಕಾದ ಕ್ಷೇತ್ರ ನೋಡಿಕೊಂಡು ಪೈಟ್ ಮಾಡ್ತೀನಿ ಅಂತ ಹೇಳುತ್ತಿರುವಾಗ ಕೆಲ ಕೈ ನಾಯಕರೇ ಇನ್ನೂ ನಾಮಪತ್ರ ಸಲ್ಲಿಸದಿರುವದು “ಕ್ಷೇತ್ರ ಇನ್ನೂ ಕೈ ಸಿಕ್ಕಿಲ್ಲ” ಅಂತ ಬಿಜೆಪಿ ಮುಖಂಡರು ಪಿಸು ಪಿಸೂ ಮಾತಾಡೋಕೆ ಅನುವು ಮಾಡಿಕೊಟ್ಟಿದೆ. ಇನ್ನೊಂದೆಡೆ ಕೆಲ ಕಾಂಗ್ರೆಸ್ ಪಕ್ಷದ ಯುವ ಮುಖಂಡರಿಗೆ ನಮಗೆ ಸಮಯವಿಲ್ಲದೆ ನಾಮಪತ್ರ ಸಲ್ಲಿಸೋಕ್ಕೆ ಆಗಿಲ್ಲ ಅಂತ ಹಣೆ ಮೇಲೆ ಕೈ ಬೇಸರ ವ್ಯಕ್ತಪಡಿಸಿದರು. ಆದರೆ ಅವರ ಯುವ ಮುಖಂಡರ ಮಾತಿಗೆ ಹೈಕಮಾಂಡ್ ಮನಸೋತು ದಿನಾಂಕ ಮುಂದೂಡಿದೆ ಎಂಬ ಮಾತು ಇದೀಗ ಕಾಂಗ್ರೆಸ್ ಯುವ ಮುಖಂಡರರಲ್ಲಿ ಮಂದಹಾಸ ಮೂಡಿದೆ.