ಬೆಂಗಳೂರು : ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಕಷ್ಟಪಡುತ್ತಿವೆ. ಇದರ ಮಧ್ಯೆಯೇ ಸೋಂಕಿಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರ ಹೊರೆಯೂ ಸರ್ಕಾರದ ಮೇಲೆ ಬಿದ್ದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಿಲ್ ನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಹೊರೆಯೇ ಸರ್ಕಾರಕ್ಕೆ ಹೆಚ್ಚಾಗಿದೆ. ಜನ ಪ್ರತಿನಿಧಿಗಳು ಮತ್ತು ಕುಟುಂಬಸ್ಥರ ಬಿಲ್ ಲಕ್ಷದ ಲೆಕ್ಕದಲ್ಲಿ ಆಗಿದ್ದು, ವಿಧಾನಸಭೆ ಸಚಿವಾಲಯಕ್ಕೆ ಬಿಲ್ ಗಳನ್ನು ಸಲ್ಲಿಸಲಾಗಿದೆ.

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು, ರೂ. 2,24,279 ಮೊತ್ತದ ಬಿಲ್ ನ್ನು ಸಲ್ಲಿಸಿದ್ದಾರೆ.
ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರು ರೂ. 5,52,242 ಮೊತ್ತದ ಬಿಲ್‍ ನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ರೂ. 2,29,247 ಮೊತ್ತದ ಬಿಲ್‍ ನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

ಕಲಘಟಗಿ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣನವರ್ ಅವರು ರೂ. 2,91,045 ಮೊತ್ತದ ಬಿಲ್‍ ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ ಅವರು ರೂ. 5,11,172 ಮೊತ್ತದ ಬಿಲ್‍ ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ರೂ. 1,07,112 ಬಿಲ್ ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಬಿಜೆಪಿ ಶಾಸಕ ಅನಿಲ್ ಬೆನಕೆ ಅವರು ಸರ್ಕಾರಕ್ಕೆ ತಮ್ಮ ಹಾಗೂ ಕುಟುಂಬ ಚಿಕಿತ್ಸೆ ಪಡೆದ ರೂ. 8,55,856 ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ರೂ. 2,36,021 ಮೊತ್ತದ ಬಿಲ್ ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ರೂ. 3,07,113 ಮೊತ್ತದ ಬಿಲ್ ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರು ರೂ. 2,29,654 ಮೊತ್ತದ ಬಿಲ್ಅಲನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಶಾಸಕರು ಹಾಗೂ ಅವರ ಕುಟುಂಬಸ್ಥರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಯಮಗಳಂತೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಆದರೆ, ಕೊರೊನಾ ವಿಷಯಕ್ಕೆ ಕೆಲವು ಮಾರ್ಪಡುಗಳನ್ನು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೇ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಮೊತ್ತವನ್ನು ಸರ್ಕಾರವೇ ಬರಿಸಲಿದೆ. ಆದರೆ, ಈ ನಾಯಕರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಆ ಬಿಲ್ ನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಯುವಕರೇ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..! ಪೊಲೀಸರ ನಿಗಾ ನಿಮ್ಮ ಮೇಲಿದೆ..!!

ಉತ್ತರಪ್ರಭಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ…

ದಾವಣಗೆರೆ ಜಿಲ್ಲೆಯಲ್ಲಿ 21 ಕೊರೋನಾ ಪಾಸಿಟಿವ್: ರಾಜ್ಯದಲ್ಲಿ 642ಕ್ಕೆ ಏರಿಕೆ

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗುತ್ತಿದೆ.

ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರಾಗಿ ದೇವರಾಜ ಉಳೇನೂರು ಆಯ್ಕೆ

ಉತ್ತರಪ್ರಭ ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ…

ಸರಕಾರಿ ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ

ಉತ್ತರಪ್ರಭ ಸುದ್ದಿ ಮಸ್ಕಿ: ತಾಲೂಕಿನ ಉಸ್ಕಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಗ್ರಾಮಸ್ತರು ಮತ್ತು ವಿದ್ಯಾರ್ಥಿಗಳು…