ಉತ್ತರಪ್ರಭ ಸುದ್ದಿ

ಹುಬ್ಬಳ್ಳಿ: ತಿರುಪತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ತಿರುಪತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿ ಸಾಮಾನ್ಯ ಬೋಗಿಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರೈಲು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಬಳಿ ರೈಲು ಬಂದಾಗ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ರಕ್ತದ ಕಲೆಗಳಿರುವುದು ಬೆಳಕಿಗೆ ಬಂದಿದೆ.

ಬೋಗಿಯಲ್ಲಿ ಕೊಲೆಯಾದ ವ್ಯಕ್ತಿ

ರೈಲು ತಡರಾತ್ರಿ ಬ್ಯಾಹಟ್ಟಿಗೆ ಬಂದಾಗ ವ್ಯಕ್ತಿಯ ಕೊಲೆಯಾಗಿರುವುದು ಕಂಡುಬಂದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ. ರೈಲಿನ ಸಿಬ್ಬಂದಿಯು ಆ ಬೋಗಿಯನ್ನು ಪ್ರತ್ಯೇಕಿಸಿ ಬ್ಯಾಹಟ್ಟಿಯಲ್ಲೇ ನಿಲ್ಲಿಸಿದ್ದಾರೆ.

ಕೂಡಲೇ ಸಿಬ್ಬಂದಿ ರೈಲು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಅಂತೆಯೇ ಬ್ಯಾಹಟ್ಟಿಯಲ್ಲೇ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವುದು ಬಯಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಯಾದ ವ್ಯಕ್ತಿ ಯಾರು..?, ಹತ್ಯೆ ಮಾಡಿದವರು ಯಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ತೆರವಿಗೆ 3 ದಿನ ಬಾಕಿ : ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಲಾಕ್ ಡೌನ್ ಇದ್ದರೂ ದೇಶದಲ್ಲಿ ಕೊರೊನಾ ಹತೋಟಿಗೆ ಬರುತ್ತಿಲ್ಲ. ಲಾಕ್ ಡೌನ್ ತೆರವಿಗೆ 3 ದಿನಗಳು ಬಾಕಿ ಇರುವಾಗಲೇ ಶುಕ್ರವಾರ ದಾಖಲೆ ಪ್ರಮಾಣದ ಏರಿಕೆ ಕಂಡಿದೆ.

ಗುತ್ತಿಗೆ ದಾರನಿಂದ ಕಳಪೆ ಕಾಮಗಾರಿ-ಗ್ರಾಮಸ್ಥರ ಆಕ್ರೋಶ

ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು…

ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಹಿಂದೂ-ಮುಸ್ಲಿಂ ಯುವಕರು

ನರೆಗಲ್ಲ: ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಹಿಂದೂ, ಮುಸ್ಲಿಂ ಧರ್ಮದ ಜನರು…

ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರಿ-ಎಂ.ಎನ್.ಪದ್ಮಜಾ

ಚಿತ್ರವರದಿ: ಗುಲಾಬಚಂದ ಆರ್ ಜಾಧವಆಲಮಟ್ಟಿ : ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದು ಮಕ್ಕಳ ಆ ನಿಟ್ಟಿನಲ್ಲಿ ಕಠಿಣ…