ಚಿತ್ರವರದಿ: ಗುಲಾಬಚಂದ ಆರ್ ಜಾಧವ
ಆಲಮಟ್ಟಿ : ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದು ಮಕ್ಕಳ ಆ ನಿಟ್ಟಿನಲ್ಲಿ ಕಠಿಣ ಪರಿಶ್ರಮ ತೋರಿ ಯಶಸ್ಸು ಸಾಧಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೃಷ್ಣಾ ಭಾಗ್ಯ ಜಲನಿಗಮದ ಉಪ ಮುಖ್ಯ ಇಂಜನೀಯರ್ ಎಂ.ಎನ್.ಪದ್ಮಜಾ ಹೇಳಿದರು.
ಮಂಗಳವಾರ ಸಂಜೆ ಸ್ಥಳೀಯ ಎಸ್.ವ್ಹಿ.ವ್ಹಿ.ಸಂಘದ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ 2021-22 ನೇ ಸಾಲಿನ ವಾಷಿ೯ಕ ಸ್ನೇಹ ಸಮ್ಮೇಳನ, ಕರುನಾಡು ಗಾಂಧಿ ಉತ್ಸವ 2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಪುಟ್ಟ ಮಕ್ಕಳ ಮನಸ್ಸು ಮೊಗ್ಗಿನ ಹೂವಿನಂತೆ. ಗದರಿಕೆ,ಹೆದರಿಕೆಯಿಂದ ಅರುಳುವ ಈ ಹೂಬಳ್ಳಿಗಳನ್ನು ಕಾಣದಿರಿ.ಅವುಗಳಿಗೆ ಅಕ್ಕರೆಯ ಪ್ರೀತಿ, ವಾತ್ಸಲ್ಯದಿಂದ ನೋಡಿಕೊಂಡರೆ ಓದಾಸಕ್ತಿ ಸುಲಲಿತವಾಗಿ ಅಂಕುರಗೊಳ್ಳುವುದು ಎಂದರು.


ಪಠ್ಯಗಳಿಗೆ ಕೊಡುವ ಮಹತ್ವ ಸಹಪಠ್ಯಗಳಿಗೂ ನೀಡಿ. ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕ. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಶಿಸ್ತು, ತನ್ಮಯತೆ, ಧನಾತ್ಮಕ ಮಾನವೀಯತೆಯ ಆದರ್ಶತನದ ಮೌಲ್ಯಗಳನ್ನು ಬಿತ್ತುವುದು ಇಂದಿನ ಅಗತ್ಯ. ಆರೋಗ್ಯವಂತ ಮಕ್ಕಳೇ ದೇಶದ ಸಂಪತ್ತು. ಓದು ಬರಹದ ಜೊತೆಗೆ ಮಕ್ಕಳ ಸವಾ೯ಂಗೀಣ ಬೆಳವಣಿಗೆಗೆ ಗಮನ ಹರಿಸಿ ಆದ್ಯತೆ ನೀಡಬೇಕು. ಪಠ್ಯ ಚಟುವಟಿಕೆದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿ ಮಗು ಭಾಗವಹಿಸುವಂತೆ ಉತ್ತೇಜಿಸಿ ಹುರಿದುಂಬಿಸಬೇಕು.ಸಹ ಪಠ್ಯಗಳು ಸುಂದರ ಜೀವನ ರೂಪ ಲಾವಣ್ಯಕ್ಕೆ ಪ್ರೇರಣೆವಾಗಿವೆ ಎಂದರು.


ಪುಟಾಣಿ ಮಕ್ಕಳು ಪಾಠ ಭೋದನೆ ಮೌಲ್ಯ ಅರಿಯಲಾರರು. ಮುಗ್ದಭಾವದ ಮಕ್ಕಳಿಗೆ ಜಿಗಿದಾಟ ಆಟೋಟಗಳೆಂದರೆ ಬಲು ಪ್ರೀತಿ. ಮನರಂಜನಾ ಲಹರಿಯಲ್ಲಿ ತೋಡಗಿಸಿಕೊಳ್ಳಲ್ಲು ಇಚ್ಚಿಸುತ್ತಾರೆ. ಪ್ರೀತಿ ಅದರದಿಂದ ಹಚ್ಚಿಕೊಂಡರೆ ಖಂಡಿತ ಓದಿನಡೆಗೆ ವಾಲುತ್ತಾರೆ. ಸಣ್ಣ ಮಕ್ಕಳಿಗೆ ಹುರಿದುಂಬಿಸಿ ಪ್ರೋತ್ಸಾಹಿಸಬೇಕು. ತಾಯಿ ಮೊದಲು ಅಕ್ಷರ ಮಾತೆ. ಇಲ್ಲಿ ಗುರುಮಾತೆಯರ ಸಮೂಹವೇ ಇರುವುದರಿಂದ ಮಕ್ಕಳ ಕಲಿಕೆಯ ಸಂತಸದಾಯಕ್ಕೆ ತೊಂದರೆವಾಗದು ಎಂದು ಅಭಿಪ್ರಾಯಪಟ್ಚ ಅವರು, ಗುರುಮಾತೆಯರು ಕ್ರಿಯಾಶೀಲತೆಯ ಹಾವಭಾವ ಅಭಿನಯದ ಮೂಲಕ ಬೋಧಿಸುವ ಕೌಶಲ್ಯ ಹೊಂದಿರುವದರಿಂದ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ಬೋಧನಾ ಪ್ರಕ್ರಿಯೆ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿಯಾಗಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹೇಳಬಲ್ಲದೆಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಗುರುಮಾತೆಯರನ್ನು ಪುಟಾಣಿ ಮಕ್ಕಳು ನಮ್ಮವರೆಂಬ ಭಾವದಿಂದ ಹೆಚ್ಚು ಹಚ್ಚಿಕೊಳ್ಳುತ್ತಾರೆ. ಭವಿಷ್ಯತ್ತಿನ ಸುಂದರ ಸಮಾಜ ನಿಮಾ೯ಣ ಗುಣಾತ್ಮಕ ಶಿಕ್ಷಣದಲ್ಲಿ ಅಡಗಿದ್ದು ಶಿಕ್ಷಕಿಯರ ಪಾತ್ರ ನಿಣಾ೯ಯಕವಾಗಿದೆ ಎಂದರು.
ಬಾಲ್ಯದಲ್ಲೇ ಸಾಂಸ್ಕೃತಿಕ ಕಲೆಗಳ ಅರಿವು ಮಕ್ಕಳಿಗೆ ಮೂಡಿಸಸಿದರೆ ಧೈರ್ಯದಿಂದ, ಆತ್ಮವಿಶ್ವಾಸದಿಂದ ಕರಗತ ಮಾಡಿಕೊಳ್ಳಲು ಸಾಧ್ಯ. ವಿದ್ಯೆ ಪ್ರಾಪ್ತಿಗೆ ಇದು ಪೂರಕ. ಅಧ್ಯಯನದ ಹಾಗು ಸಾಂಸ್ಕೃತಿಕ ಅಂಗಳಕ್ಕೆ ಮಕ್ಕಳನ್ನು ಶ್ರದ್ಧೆಯಿಂದ ಅಣಿಗೊಳಿಸಬೇಕು ಎಂದರು.
ಮುಖ್ಯ ಅತಿಥಿ ಮಂಜಪ್ಪ ಹಡೇ೯ಕರ ಸ್ಮಾರಕ ಪ್ರತಿಷ್ಟಾನದ ಕಾರ್ಯದರ್ಶಿ ವ್ಹಿ.ಎಂ.ಪಟ್ಟಣಶೆಟ್ಚಿ ಮಾತನಾಡಿ,ಶರಣನ ಹೆಸರಿನಲ್ಲಿ ನಡೆಯುತ್ತಿರುವ ಈ ಶಾಲೆಯಲ್ಲಿ ಅಭ್ಯಸಿಸಿಸುತ್ತಿರುವ ಮಕ್ಕಳೇ ಪುಣ್ಯವಂತರು ಎಂದರು.


ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘ ಆಲಮಟ್ಟಿ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ಎಂ.ಎಚ್.ಎಂ.ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ,ಎಂ.ಎಚ್.ಎಂ.ಹೈಸ್ಕೂಲಿನ ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಎಂ.ಎಚ್.ಎಂ.ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಕೆ.ಎನ್.ಹಿರೇಮಠ, ಶಾಲಾಭಿಮಾನಿ ಬಸಯ್ಯ ಶಿವಯೋಗಿಮಠ ಮೊದಲಾದವರು ವೇದಿಕೆಯಲ್ಲಿದ್ದರು.
ಶಾಲೆಯ ಎಲ್ಲ ಗುರುಮಾತೆಯರು ಸಾಂಘಿಕ ಶ್ರಮದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದಕ್ಕೆ ಅವರುಗಳನ್ನೆಲ್ಲ ಸನ್ಮಾನಿಸಿ ಗೌರವಿಸಲಾಯಿತು. ಅತಿಥಿ ಗಣ್ಯಮಾನರಿಗೆ ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಶಾಲೆಯ ಪರವಾಗಿ ಸತ್ಕರಿಸಲಾಯಿತು.
ಮುಖ್ಯ ಗುರುಮಾತೆ ತನುಜಾ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸಿದ್ದಮ್ಮ ಅಂಗಡಿ ನಿರೂಪಿಸಿದರು. ಮಹೇಶ್ ಗಾಳಪ್ಪಗೋಳ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಪೊಲೀಸರಿಂದ ವರೀಷ್ಠಾಧಿಕಾರಿ ಮೇಲೆ ಹಲ್ಲೆ..!

ಕೋಲ್ಕತಾ: ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿಯೋಜನೆಯಾಗಿರುವ ಅಂದಾಜು 500 ಪೊಲೀಸ್ ಪೇದೆಗಳು ತಮ್ಮ ರೂಂ ಸ್ಯಾನಿಟೈಸ್…

ಪ್ಯಾಕೇಜ್ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯ

ವರದಿ: ವಿಠಲ ಕೆಳೂತ್ಮಸ್ಕಿ: ಪ್ಯಾಕೇಜ್ ಟೆಂಂಡರ್ ರದ್ದುಗೊಳಿಸಿ ಭ್ರಷ್ಟವಾರ ತಡೆಯುವಂತೆ ಒತ್ತಾಯಿಸಿ ಇಲ್ಲಿನ ಗುತ್ತಿಗೆದಾರ ಸಂಘದ…

ಜು.30 ರಿಂದ ಸಿಇಟಿ ಪರೀಕ್ಷೆ

ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.