ಉತ್ತರಪ್ರಭ ಸುದ್ದಿ
ಗದಗ: ಹಿಂದು ಪದ ಭಾರತೀಯದ್ದಲ್ಲ ಅದು ಪರ್ಷಿಯನ್ ನಿಂದ ಬಂದಿದೆ. ಪರ್ಷಿಯನ್ ಹಾಗೂ ಇಸ್ಲಾಂದಲ್ಲಿ ನೋಡಿದರೆ. ಆ ಪದದ ಅರ್ಥ ಬೇರೆ ಇದೆ ಎಂದು ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ನಮ್ಮದಲ್ಲದ ಪದದಿಂದ ಇಷ್ಟೆಲ್ಲ ಚರ್ಚೆ ಯಾಕೆ ಅಂತಾ ಪ್ರಶ್ನಿಸಿದ ಅವರು, ಹಿಂದು ಅನ್ನೋದು ಒಂದು ನಾಗರಿಕ ಸಮಾಜ ಬಳಸದಂತ ಪದವಾಗಿದೆ. ಇಸ್ಲಾಂ ಸಂಸ್ಕೃತಿಯನ್ನು ಪರಕೀಯರ ಸಂಸ್ಕೃತಿ ಅಂತಾ ವಿರೋಧ ಮಾಡ್ತೀರಿ ಆದರೆ ಅವರು ಕೊಟ್ಟಿರುವ ಪದದ ಬಗ್ಗೆ ನಿಮಗೆ ಯಾಕೇ ಇಷ್ಟೊಂದು ಪ್ರೀತಿ, ಹಿಂದುಸ್ತಾನ್ ಎನ್ನುವದು ಮಮ್ಮಡಿಯನ್ಸ್ ಕೊಟ್ಟಿರುವ “ಪದ” ಸಿಂಧುಸ್ತಾನ ಅಂತ ಕರೆಯಿರಿ ಎಂದು ವಿವರಿಸಿದರು.
ನಮ್ಮದು ಸಿಂಧೂ ಸಂಸ್ಕೃತಿ, ದ್ರಾವಿಡ ಸಂಸ್ಕೃತಿ, ದೇಶಕ್ಕೆ ಭಾರತ್ ಖಂಡ ಅಂತಾ ಹೆಸರು ಇದೆ. ಭಾರತ್ ಖಂಡ್ ಭಾರತ್ ಖಂಡೇ, ಜಂಬೂ ದ್ವೀಪ ಎಂದು ಹೆಸರು ಇದೆ. ಚರಿತ್ರೆಯನ್ನು ಹುಡುಕಿದರೆ ಹಿಂದೂಸ್ತಾನ್ ಅಂತಾ ಎಲ್ಲಿದೆ ಎಂದು ಪ್ರಶ್ನಿಸಿದರು. ಪದಗಳ ಬಗ್ಗೆ ಚರ್ಚೆ ನಡೆಯಬೇಕು, ಭಾವನಾತ್ಮಕ ಅಂಧತ್ವದಿಂದ ನೋಡಬಾರದು. ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಹಿಂದೂ ಪದ ಎನ್ನುವದು ಈ ದೇಶದ ಮೂಲತವಾದರೆ ಬಹಿರಂಗ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದರು.

ಸತೀಶ್ ಜಾರಕಿಹೊಳಿಯವರ ಮಾತನ್ನು ಎಲ್ಲರು ಒಪ್ಪಿಕೊಳ್ಳಬೇಕು. ನನ್ನ ಮಾತಿನಲ್ಲಿ ಸತ್ಯಾಂಶ ಇಲ್ಲದಿದ್ದರೆ, ಇತಿಹಾಸಗಾರರ ಸಮಿತಿಯನ್ನು ರಚನೆ ಮಾಡಿ ಅಂತಾ ಅವರು ಹೇಳಿದ್ದಾರೆ. ಅದನ್ನು ಮಾಡಬೇಕಾದವರು ಈಗೀನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು. ಸರ್ಕಾರ ಅಲ್ಲ, ಸರ್ಕಾರ ತನಿಖೆ ಬೇಕಾದನ್ನು ಮಾಡಿಕೊಳ್ಳುತ್ತೆ. ಯಾವದು ನಮ್ಮ ಪದ ಅಲ್ವೋ ಆ ಪದವನ್ನು ಇಟ್ಟುಕೊಂಡು ಮೂಲ ನಿವಾಸಿಗಳ ವಿರುದ್ಧ ಷಡ್ಯಂತರ ಮಾಡಲಾಗುತ್ತಿದೆ ಅಂತಾ ಸತೀಶ್ ಜಾರಕಿಹೊಳಿಯವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೂ ಪದದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಬೇಕು. ಇಲ್ಲವಾದರೆ ಇಂತಹ ಭಾವನಾತ್ಮಕ ಪದಗಳನ್ನು ಇಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸವಾಗುತ್ತದೆ ಎಂದರು.
ಹಿಂದೂಸ್ತಾನ್ ಅಲ್ಲ, ಸಿಂಧೂಸ್ತಾನ್:
ಪರ್ಷಿಯನ್ ಹಾಗೂ ಇಸ್ಲಾಮ್ನಲ್ಲಿ ನೋಡಿದರೆ ಆ ಪದದ ಅರ್ಥ ಬೇರೆ ಇದೆ. ನಮ್ಮದು ಅಲ್ಲದ ಪದದಿಂದ ಇಷ್ಟೆಲ್ಲಾ ಚರ್ಚೆ ಯಾಕೇ? ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಸರಿಯಿದೆ. ಇಸ್ಲಾಂ ಸಂಸ್ಕೃತಿಯನ್ನು ಪರಕೀಯರ ಸಂಸ್ಕೃತಿ ಅಂತ ವಿರೋಧ ಮಾಡುತ್ತೀರಿ. ಅವರು ಕೊಟ್ಟಿರುವ ಪದದ ಬಗ್ಗೆ ನಿಮಗೆ ಯಾಕೇ ಇಷ್ಟೊಂದು ಪ್ರೀತಿ ಅಂತ ಪ್ರಶ್ನಿಸಿದ್ದಾರೆ. ಹಿಂದೂಸ್ತಾನ್ ಎನ್ನುವುದು ಮಮ್ಮಡಿಯನ್ಸ್ ಕೊಟ್ಟಿರುವ ಪದ. ನೀವು ಹಿಂದುಸ್ತಾನ್ ಅಲ್ಲಾ ಸಿಂದೂಸ್ತಾನ ಅಂತಾ ಮಾಡಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಶೇಖಣ್ಣ ಕವಳಿಕಾಯಿ, ವಾಸಂತಿ ಮಲ್ಲಾಪೂರ, ಮುತ್ತು ಬಿಳಿಯಲಿ, ರಮೇಶ ಕೋಳೂರ, ಶಿವಣ್ಣ ತಮ್ಮಣ್ಣವರ, ಅನೀಲ ಕಾಳೆ, ಪರಶು ಕಾಳೆ ಸೇರಿ ಅನೇಕರಿದ್ದರು