ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು ಭವ್ಯ ಆತಿಥ್ಯ ನೀಡಲಾಯಿತು.

ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಯಾತ್ರಾಥಿ೯ಗಳಿಗೆ ಎಸ್.ವಿ.ವಿ.ಸಂಸ್ಥೆಯ ಶಾಲಾ ಆವರಣದಲ್ಲಿ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಪ್ರಸಾದ್ ಸ್ವೀಕರಿಸುತ್ತಿರುವ ಬಸವ ಭಕ್ತ ಯಾತ್ರಿಕರನ್ನು ಇಲ್ಲಿನ ಚಿತ್ರದಲ್ಲಿ ಕಾಣಬಹುದು

     ಇಲ್ಲಿನ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಆವರಣದಲ್ಲಿನ ಕರುನಾಡು ಗಾಂಧಿ ಶರಣ ಮಂಜಪ್ಪ ಹಡೇ೯ಕರ ಸ್ಮಾರಕ ಭವನ ವೀಕ್ಷಿಸಲು ಆಗಮಿಸಿದ್ದ ಬಸವಭೂಮಿ ಯಾತ್ರೆಯ ಶರಣ,ಶರಣಿಯರಿಗೆ ಮೊದಲು ಎಂ.ಎಚ್.ಎಂ.ಶಾಲೆಯ ಮುಖ್ಯ ದ್ವಾರದ ಬಳಿ ಎಸ್.ವಿ.ವಿ.ಸಂಸ್ಥೆಯಡಿಯಲ್ಲಿನ  ಶಾಲಾ,ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿಗಳು,ನಿಡಗುಂದಿ ಬಸವ ಬಳಗದ ಸದಸ್ಯರು ಸೇರಿದಂತೆ ಬಸವಾಭಿಮಾನಿಗಳು ಭಕ್ತಿ ವಿನಮ್ರತೆಯಿಂದ ನಮಿಸಿ ಅವರೆಲ್ಲರನ್ನು ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಕರ್ಮಭೂಮಿಯ ನೆಲೆಗೆ ಸಂಭ್ರಮ, ಸಂತೋಷದಿಂದ ಸ್ವಾಗತಿಸಿ ಬರಮಾಡಿಕೊಂಡರು.

      ಸ್ಮಾರಕ ಭವನ,ಶಾಲಾವರಣದಲ್ಲಿ ಸಂಜೆ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಸಾಲು ಸಾಲಾಗಿ ಒಂದರ ಹಿಂದೆ ಒಂದೊಂದರಂತೆ ನೂರಾರು ಕ್ರೋಜರ್ ಟ್ರ್ಯಾಕ್ಸ್ ಜೀಪಿನಲ್ಲಿ ಬಂದಿಳಿದ ಯಾತ್ರಾತ್ರಿಗಳು ಆವರಣದಲ್ಲಿನ ಹಸಿರು ವನಸಿರಿಗೆ ಮನ ಸೋತರು. ಬಸವ ಭಕ್ತರು ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ ಬಸವ ತತ್ವಗಳ ಜಯ ಘೋಷ ಜಪಿಸುತ್ತಾ ಹೆಜ್ಜೆ ಹಾಕಿದರು. ಕೋರಳಲ್ಲಿ ಬಸವಭೂಮಿ ಯಾತ್ರೆಯ 25 ನೇ ಬೆಳ್ಳಿ ಹಬ್ಬ ಸಂದೇಶದ ಬರಹಗಳು ರಾರಾಜಿಸಿದವು.  ಶರಣ ವಿಚಾರ ವಾಹಿನಿಯ 25 ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಬಸವಭೂಮಿ ಯಾತ್ರೆಯನ್ನು ಕುಂದಾನಗರಿ ಬೆಳಗಾವಿ ಜಿಲ್ಲೆಯಿಂದ ಆರಂಭಿಸಿ ಕಲ್ಯಾಣ ನಾಡು ಬೀದರ ಜಿಲ್ಲೆಯ ವಿವಿಧೆಡೆ ಬಸವಕಲ್ಯಾಣ ನಾಡಿನಲ್ಲಿ ಸಂಚರಿಸಿ ಕೊನೆಯಲ್ಲಿ ಮಂಜಪ್ಪನವರು ಓಡಾಡಿದ ನೆಲೆ ಆಲಮಟ್ಟಿಗೆ ಬಂದು ತಲುಪಿತು. ಸ್ಮಾರಕ ಭವನದಲ್ಲಿ ವಿರಾಜಮಾನರಾದ ಅಜ್ಞಾತ ಶರಣನ ಕಂಚಿನ ಪುತ್ಥಳಿ ಪ್ರತಿಮೆಯ ನೋಟ ಕಣ್ತುಂಬಿಸಿಕೊಂಡು ಬಸವ ಯಾತ್ರಾಥಿ೯ಗಳು ಭಕ್ತಿಪೂರ್ವಕ ಗೌರವ ಸಲ್ಲಿಸಿದರು.ಮಂಜಪ್ಪನವರ ದರ್ಶನ ಭಾಗ್ಯಕ್ಕೆ ಧನ್ಯತೆ ಭಾವ ಮನದಲ್ಲಿ ಮೆರೆದರು. ಶರಣ ಆಯ್.ಆರ್.ಮಠಪತಿ ಅವರ ನೇತೃತ್ವದಲ್ಲಿ ಸುಮಾರು 1500 ಕ್ಕೂ ಹೆಚ್ಚು ಬಸವ ಭಕ್ತರು ಸಾಮೂಹಿಕವಾಗಿ ಇಲ್ಲಿಗೆ ಆಗಮಿಸಿದ್ದರು. ಎಲ್ಲ ಯಾತ್ರಾಥಿ೯ಗಳಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಸಾಂಬಾರ, ಸಿಹಿಯಾದ ಶಿರಾ  ಪ್ರಸಾದ ರೂಪದಲ್ಲಿ ಯಾತ್ರಿಕರು ಸ್ವೀಕರಿಸಿ ಸಂತೃಪ್ತಿ ಭಾವ ತೋರಿದರು.

 ಕಳೆದ ಇಪ್ಪತೈದು ವರ್ಷಗಳಿಂದ ಪ್ರತಿವರ್ಷವೂ ರಾಯಬಾಗ ತಾಲೂಕಿನ ಹಾರುಗೇರಿಯಿಂದ ಶರಣ ಮಠಪತಿ ಅವರು ತಮ್ಮ ಮುಂದಾಳತ್ವದಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಈ ಬಸವಭೂಮಿ ಯಾತ್ರೆ ನಿಜಕ್ಕೂ ಯಾತ್ರಾಥಿ೯ಗಳಿಗೆ ಹೊಸ ಆನಂದ,ಹೊಸ ಮನಸ್ಸು,ಭಾಷೆ ಕೊಡುವ ಯಾತ್ರೆಯಾಗಿದೆ.   ಶರಣರ ಚಿಂತನೆಗಾಗಿ, ಬಸವ ತತ್ವದ ಪ್ರಭಲ ಅನುಷ್ಠಾನಕ್ಕೆ ಸಹಕಾರಿಯಾಗಿದೆ. ಯಾತ್ರೆವುದ್ದಕ್ಕೂ ಶರಣರ ಜೀವನ ಚರಿತ್ರೆ ಮೊಳಗುತ್ತದೆ.ಭವ್ಯ ಪರಂಪರೆಯ ಸಾರ ಹೊಂದಿರುವ ನಮ್ಮ ದೇಶ ವಿಶ್ವ ಗುರುವಾಗಬೇಕು.ಬಸವ,ಬುದ್ಧ, ಅಂಬೇಡ್ಕರ್ ರಂಥ ಮಹಾನುಭಾವರ ಚಿಂತನೆ ಪ್ರತಿಯೊಬ್ಬರ ಮಸ್ತಕದಲ್ಲಿ ಸುಳಿದಾಡಿದರೆ ಇದು ಸಾಧ್ಯ. ಆ ಕಾಲ ಸನ್ನಿಹಿತ ಎನ್ನುತ್ತಾರೆ ಯಾತ್ರೆ ರೂವಾರಿ ಆಯ್.ಆರ್. ಮಠಪತಿ ಶರಣರು.

    ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಸ್ಮಾರಕ ಪ್ರತಿಷ್ಠಾನ ಹಾಗು ನಿಡಗುಂದಿ ಬಸವ ಬಳಗದ ಸದಸ್ಯರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಭಾಗವಹಿಸಿದ್ದರು. 

ಸ್ಮಾರಕ ಭವನ ಕಾರ್ಯದರ್ಶಿ ವಿ.ಎಂ.ಪಟ್ಟಣಶೆಟ್ಟಿ, ಎಂ.ಎಚ್.ಎಂ.ಪ.ಪೂ.ಕಾಲೇಜು ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಪದವಿ ಕಾಲೇಜು ಪ್ರಾಚಾರ್ಯ ಎಚ್.ಎನ್.ಕೆಲೂರ, ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ,ಎಂ.ಎಚ್.ಎಂ.ಹೈಸ್ಕೂಲ್ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಶಿಕ್ಷಣ ಪ್ರೇಮಿ ಬಸಯ್ಯ ಶಿವಯೋಗಿಮಠ ಸೇರಿದಂತೆ ಎಲ್ಲ ವಿಭಾಗದ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು ಹಾಗು  ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ಪ್ರಕಾಶ ಧನಶೆಟ್ಟಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ,ಮಮತಾ ಕರೆಮುರಗಿ,ಧನರಾಜ ಸಿಂಗಾರಿ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ್ ಗಾಳಪ್ಪಗೋಳ,ಶಾಂತೂ ತಡಸಿ, ಪಲ್ಲವಿ ಸಜ್ಜನ ಸೇರಿದಂತೆ ಇನ್ನೂ ಹಲವರು ವಿವಿಧ ಸಮಿತಿಯ ಕೆಲಸ ಕಾರ್ಯಗಳನ್ನು ಸಾಂಘಿಕವಾಗಿ ನಿಭಾಯಿಸಿದರು. ಪ್ರಸಾದ್ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ಕೈಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…

ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.

ಕ್ವಾರಂಟೈನ್ ನಲ್ಲಿ ಕೋಳಿಗಾಗಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ

ಕ್ವಾರಂಟೈನ್ ಕೇಂದ್ರದಲ್ಲಿ ತಮಗೆ ಚಿಕನ್ ಕೊಡಲಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸರ್ಕಾರದ ಸೌಲಭ್ಯಗಳಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದೆ

ಪಟ್ಟಣದ ಜನತೆ ವಸತಿ ಸೇರಿ ಹತ್ತು ಹಲವಾರು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಸ್ವಾರ್ಥಪರ ಚಿಂತನೆ ನಡೆಸುವ ಮೂಲಕ ಸಾರ್ವಜನಿಕರನ್ನು ಕಡೆಗಣಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆರೋಪಿಸಿದರು.