ಬೆಂಗಳೂರು: ಇಲ್ಲಿಯ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನೊಂದೆಡೆ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ಪೊಲೀಸರಲ್ಲಿಯೂ ಕೊರೊನಾ ಕಂಡು ಬಂದಿದೆ.

ಈ ಹಿಂದೆ ಹೆಬ್ಬಗೋಡೆ ಪೊಲೀಸ್ ಠಾಣೆಯಲ್ಲಿನ ಆರೋಪಿಯಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಮತ್ತೊಬ್ಬ ಆರೋಪಿಯಲ್ಲಿ ಕಂಡು ಬಂದಿದೆ. ಇನ್ನೊಂದೆಡೆ ಪೊಲೀಸರನ್ನೂ ಈ ಕೊರೊನಾ ಬಿಡುತ್ತಿಲ್ಲ. ಇದರಿಂದಾಗಿ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಒಂದು ಕಡೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಕೊರೊನಾ ಭಯ ಶುರುವಾಗಿದ್ದರೆ, ಮತ್ತೊಂದೆಡೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೂ ಪಾಸಿಟಿವ್ ಬರುತ್ತಿದೆ. ಇದರಿಂದಾಗಿ ಪೊಲೀಸರಲ್ಲಿ ಭಯ ಮನೆ ಮಾಡಿದೆ.

Leave a Reply

Your email address will not be published. Required fields are marked *

You May Also Like

ರೋಣ ತಾಲೂಕಾ ಒಳಾಂಗಣ ಕ್ರೀಡಾಂಗಣದ ನೂತನ ಕಟ್ಟಡದ ಉದ್ಘಾಟನೆ

ತಾಲೂಕಿನ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸುಮಾರು 1.90 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು ಶನಿವಾರ ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಿದರು.

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.