ಉತ್ತರಪ್ರಭ

ರಾಯಬಾಗ: ತಾಲ್ಲೂಕಿನ ಹಾರೂಗೇರಿಯ ಬಿ.ಆರ್. ದರೂರ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ಕನ್ನಡ ಪ್ರಾಧ್ಯಾಪಕರು, ಸಾರಸ್ವತಲೋಕದ ಖ್ಯಾತ ರಸ ವಿಮರ್ಶಕರು, ಸಾಹಿತ್ಯ ಶ್ರೀ ಪುರಸ್ಕೃತ ವಿಖ್ಯಾತ ವಾಗ್ಮಿ ಡಾ.ವಿ.ಎಸ್.ಮಾಳಿ ಅವರ “ತಿಳಿಗೊಳ” ಅಭಿನಂದನ ಗ್ರಂಥದ ಲೋಕಾರ್ಪಣೆ, ಹಾಗೂ ಗುರುವಂದನ ಕಾರ್ಯಕ್ರಮ ರವಿವಾರ ದಿನಾಂಕ 31 ರಂದು ಬೆಳಿಗ್ಗೆ 10 ಗಂಟೆಗೆ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ. ಆರ್ ದರೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆರವೇರಲಿದೆ. ವಿಜಯಪುರ ಜ್ಞಾನ ಯೋಗಾಶ್ರಮದ “ಭೂಜನ ಜ್ಯೋತಿ”,ನಡೆದಾಡುವ ದೇವರು” ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಚೇರಮನ್ ಗಿರೀಶ್ ದರೂರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕುಡಚಿ ಕ್ಷೇತ್ರದ ಜನಪ್ರಿಯ ಶಾಸಕರು, ಚಿಂತನಶೀಲ ರಾಜಕಾರಣಿ ಪಿ.ರಾಜೀವ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸ್ಥಳೀಯ ಜನತಾ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಸಂಕೇಶ್ವರದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಹಾಗೂ ಹಿರಿಯ ಸಾಹಿತಿಗಳಾದ ಡಾ. ಗುರುಪಾದ ಮರಿಗುದ್ದಿ ಗ್ರಂಥ ಪರಿಚಯಿಸಲಿದ್ದಾರೆ. ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷರು ಶಿವಶರಣರಾದ ಬಿ.ಎಲ್. ಪಾಟೀಲ ಅಭಿನಂದನ ನುಡಿಗಳನ್ನಾಡಲಿದ್ದಾರೆ.ಡಾ.ಸಿ.ಬಿ.ಕುಲಿಗೋಡ,ಹಾಗೂ ಕಾಡಪ್ಪಣ್ಣ ಮಾಳಿ ಅವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 2.30 ಕ್ಕೆ “ಗುರುವಂದನ” ಹಾಗೂ “ವೃಷಭಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಗಣ್ಯ ನಾಗರೀಕರಾದ ಡಿ.ಸಿ. ಸದಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ ಸದಸ್ಯರು ಮಾನ್ಯ ಹನಮಂತ ನಿರಾಣಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಮುಖ್ಯ ಅತಿಥಿಗಳಾಗಿ ಅಗಮಿಸಲಿದ್ದಾರೆ. ಸ್ಥಳೀಯ ಖ್ಯಾತ ವೈದ್ಯರಾದ ಡಾ.ಎಲ್.ಎಸ್. ಜಂಬಗಿ, ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಗಸ್ತಿ, ವೃಷಭೇಂದ್ರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಆರ್ ಎಸ್ ಯಲಶೆಟ್ಟಿ, ಶರಣ ವಿಚಾರ ವಾಹಿನಿಯ ಅಧ್ಯಕ್ಷರಾದ ಶಿವಶರಣ ಅಯ್.ಆರ್. ಮಠಪತಿ ಗಣ್ಯರಾದ ,ಬಸಗೌಡ ಆಸಂಗಿ,ಹಾಗೂ ಪ್ರಾ.ಬಿ.ಎ. ಜಂಬಗಿ ಆಗಮಿಸಲಿದ್ದಾರೆ. ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷರು, ಹಾಗೂ ಜಮಖಂಡಿಯ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಭಿನವ ಅನ್ನದಾನ ಶ್ರೀ ಗಳ ದರ್ಶನ ಪಡೆದ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ,ಸಿ,ಪಾಟೀಲ

ಲಿಂಗೈಕ್ಯ ಶ್ರೀ ಗಳ ದರ್ಶನ ಪಡೆದ ಮುಖ್ಯಮಂತ್ರಿ ಮಾತನಾಡಿ ತ್ರಿವಿಧ ದಾಸೋಹಿಗಳು ಅನ್ನ ಅಕ್ಷರ ನೀಡುವ ಮೂಲಕ ಶೈಕ್ಷಣಿಕವಾಗಿ ಧಾರ್ಮಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು ಎಂದು ಹೇಳಿದರು.

ಗದಗ ಎಸ್ಪಿ ಯತೀಶ ಎನ್ ವರ್ಗಾವಣೆ

ಉತ್ತರಪ್ರಭ ಸುದ್ದಿ ಗದಗ: ಗದಗ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ನೂತನ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಲಿದ್ದು .ಎನ್ ಯತೀಶರವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಎನ್ ಯತೀಶರವರು ಕೊವಿಡ್ ಸಮಯದಲ್ಲಿ ಮಾಡಿದ ಕಾರ್ಯ ಗದುಗಿನ ಜನತೆ ಮರೆಯಲಾರರು.

ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಚುರುಕು: 14 ಕಣ್ಗಾವಲು ಆರೋಗ್ಯ ತಂಡಗಳ ರಚನೆ

ಜಿಲ್ಲಾ ಮಟ್ಟದ 14 ಕಣ್ಗಾವಲು ಸಾರ್ವಜನಿಕ ಆರೋಗ್ಯ ಸುರಕ್ಷತಾ ತಂಡಗಳ ರಚಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.