ವರದಿ: ಗುಲಾಬಚಂದ ಜಾಧವ
ಆಲಮಟ್ಟಿ : ಇಲ್ಲಿನ ಕೃಷ್ಣಾ ಭಾಗ್ಯಜಲ ನಿಗಮದ ಯೋಜನಾ ಶಾಖೆಯಲ್ಲಿ ಸುದೀರ್ಘ ವರ್ಷಗಳಕಾಲ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸುಭಾಷಚಂದ್ರ ಕೋಳೇಕರ(72) ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ , ಮೂರು ಜನ ಪುತ್ರರು, ಮೊಮ್ಮಕ್ಕಳು, ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಕೃಷ್ಣಾ ಭಾಗ್ಯ ಜಲ ನಿಗಮ ನೌಕರರ ಸಂಘದ ಪದಾಧಿಕಾರಿಯಾಗಿ, ಮಾಜಿ ಅಧ್ಯಕ್ಷರಾಗಿ ದಿವಂಗತರು ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೋಡಗಿಸಿಕೊಂಡು ಜನಾನುರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರ ಕಿರಿಯ ಪುತ್ರ ಚಂದ್ರಶೇಖರ ಕೋಳೇಕರ ಸ್ಥಳೀಯ ಡ್ಯಾಂಸೈಟ್ ನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರೆ ಹಿರಿಯ ಪುತ್ರ ಬೆಂಗಳೂರಿನಲ್ಲಿ ಹಾಗು ಎರಡನೇ ಪುತ್ರ ಪುಣೆಯಲ್ಲಿ ಎಂಜನೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂತಾಪ: ಸುಭಾಷಚಂದ್ರ ಕೋಳೇಕರ ಅವರ ಅಕಾಲಿಕ ನಿಧನಕ್ಕೆ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ,ಸ್ಥಳೀಯ ಕೆಬಿಜೆಎನ್ಎಲ್ ಯೋಜನಾ ಶಾಖೆ ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ನಿಡಗುಂದಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶಂಕರ ಜಲ್ಲಿ, ಆಲಮಟ್ಟಿ ಎಸ್.ವ್ಹಿ.ವ್ಹಿ.ಸಂಸ್ಥೆಯ ಶಾಲಾ,ಕಾಲೇಜುಗಳ ಮುಖ್ಯಸ್ಥರು,ಸಿಬ್ಬಂದಿ ವರ್ಗ,ಚಂದ್ರು ಕೋಳೇಕರ ಗೆಳೆಯರ ಬಳಗ ಸೇರಿದಂತೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ಬಾಗಲಕೋಟೆ ನವನಗರದಲ್ಲಿನ ರುದ್ರಭೂಮಿಯಲ್ಲಿ ನೆರವೇರಿತು.

Leave a Reply

Your email address will not be published. Required fields are marked *

You May Also Like

ಪ್ರಜಾ ಪ್ರಭುತ್ವ ಭದ್ರ ತಳಹದಿ ಡಾ ಬಿ ಆರ್ ಅಂಬೇಡ್ಕರವರು ರಚಿಸಿದ ಸಂವಿಧಾನ : ಸಂತೋಷ ಪಾಟೀಲ.

ಉತ್ತರ ಪ್ರಭ ಸುದ್ದಿರೋಣ : ತಾಲೂಕಾ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದವತಿಯಿಂದ 73 ನೇ ಗಣರಾಜ್ಯೋತ್ಸವದ…

ಮಕ್ಕಳಿಗೆ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಆಯುರ್ವೇದ ಔಷಧ ಬಳಸಿ

ಮುಳಗುಂದ : ಮಕ್ಕಳ ಮತ್ತು ಯುವಕರಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗ ತಡೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ…

ಕೆಜಿ “ಬಂಡಿ”ಗೆ ನಾನು ತಮಾಷೆ ಮಾಡಿದ್ದೆ: ಬಿ ಎಸ್ ವೈ ಸ್ಪಷ್ಟನೆ

ಉತ್ತರಪ್ರಭ ಸುದ್ದಿನಾನು ದಿನಾಂಕ 08-11-2022ರಂದು ಶಿರಹಟ್ಟಿಯಲ್ಲಿ ಜನಸಂಪರ್ಕ ಯಾತ್ರೆಯನ್ನು ಮುಗಿಸಿಕೊಂಡು ಬರುತ್ತಿರುವ ಸಂಧರ್ಭದಲ್ಲಿ ರೋಣ ಕ್ಷೇತ್ರದ…

ಅಪ್ರಾಪ್ತೆಗೆ ಲವ್ ಲೆಟರ್ ಬರೆದ ತಾತಾ!

ಚೆನ್ನೈ : ಅಪ್ರಾಪ್ತ ಬಾಲಕಿಗೆ 66 ವರ್ಷದ ವೃದ್ಧ ಲವ್ ಲೆಟರ್ ಬರೆದ ಘಟನೆ ತಮಿಳುನಾಡಿನಲ್ಲಿ…