ಗದಗ: ಜಿಲ್ಲೆಯಲ್ಲಿಂದು ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಪಿ-7386(26 ವರ್ಷ), ಪಿ-7387(11ವರ್ಷ), ಪಿ-7388(3 ವರ್ಷ), ಪಿ-7389(58 ವರ್ಷ) ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೃಢಪಟ್ಟ ಸೋಂಕಿತ ಪ್ರಕರಣಗಳಲ್ಲಿ ಮೂವರಿಗೆ ಮಹರಾಷ್ಟ್ರ ರಾಜ್ಯದ ಪ್ರವಾಸ ಹಿನ್ನೆಲೆ ಇದೆ.
ಇಂದಿನ ನಾಲ್ಕು ಸೋಂಕಿತ ಪ್ರಕರಣ ಸೇರಿ ಒಟ್ಟು ಜಿಲ್ಲೆಯಲ್ಲಿ 53 ಪ್ರಕರಣ ಪತ್ತೆಯಾದಂತಾಗಿದೆ. ಇಂದು ಇಬ್ಬರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ಒಟ್ಟು 41 ಕೇಸ್ ಗಳು ಈವರೆಗೆ ಬಿಡುಗಡೆ ಹೊಂದಿವೆ. 10 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Leave a Reply

Your email address will not be published.

You May Also Like

ಪಿಯುಸಿ2: ಗದಗ ಜಿಲ್ಲಾ ಮಟ್ಟದ ರ‌್ಯಾಂಕ್ ವಿವರ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 9532 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ 6005 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ವರ್ಷ ಜಿಲ್ಲೆಯ ಪರೀಕ್ಷಾ ಫಲಿತಾಂಶ ಶೇ. 57.76 ರಷ್ಟಾಗಿ ಜಿಲ್ಲೆಯು 26 ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಶೇ. 63 ರಷ್ಟು ಫಲಿತಾಂಶ ಪಡೆಯುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.

ಶನಿವಾರವೂ ಶಿಕ್ಷಣ ಇಲಾಖೆಗೆ ರಜೆ

ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರ ಶಿಕ್ಷಣ ಇಲಾಖೆ ನೌಕರರಿಗೆ ರಜೆ ಘೋಶಿಸಲಾಗಿತ್ತು. ಆದರೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ತಿಂಗಳ ಎಲ್ಲ ಶನಿವಾರವೂ ರಜೆ ಘೋಷಣೆ ಮಾಡಿದೆ.

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.

ಆದ್ರಳ್ಳಿ ವಡ್ಡರಪಾಳ್ಯ ಸಮಸ್ಯೆ ವಾರದೊಳಗೆ ಪರಿಹರಿಸದಿದ್ರೆ ಹೋರಾಟ: ರವಿಕಾಂತ ಅಂಗಡಿ

ದಶಕದಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರುವ ಆದ್ರಳ್ಳಿಯ ವಡ್ಡರಪಾಳ್ಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಡಳಿತ ವರ್ಗ ಮುಂದಾಗಬೇಕು.