ಉತ್ತರಪ್ರಭ ಸುದ್ದಿ
ವಿಜಯಪುರ:
ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಹಾಗು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಸಹಕಾರಿಯಾಗಿದೆ ಅಲ್ಲದೇ ಪಠ್ಯಾಧಾರೀತ ವಿಷಯಗಳಿಗೆ ಸ್ಪೂರ್ತಿದಾಯಕ ಜೀವಾಳವಾಗಿದೆ ಎಂದು ಖ್ಯಾತ ಚಿತ್ರಕಲಾವಿದ,ಜಿಲ್ಲಾ ನೋಡೆಲ್ ಮಂಜುನಾಥ್ ಮಾನೆ ಅಭಿಪ್ರಾಯಿಸಿದರು.

ಸಮೀಪದ ಬಬಲೇಶ್ವರ ಶ್ರೀ ಶಾಂತವೀರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಜರುಗಿದ ಗ್ರಾಮೀಣ ಹಾಗು ನಗರ ವಲಯದ ಚಿತ್ರಕಲಾ ಶಿಕ್ಷಕರ ವಿಷಯ ವೇದಿಕೆ ಕಾಯಾ೯ಗಾರದಲ್ಲಿ ಅವರು ಮಾತನಾಡಿದರು.

ಸೃಜನಾತ್ಮಕ ಚಿತ್ರಾಭ್ಯಾಸ ಪಠ್ಯ ಅಧ್ಯಯನದ ವಿಷಯಗಳಿಗೆ ಪೂರಕವಾಗಿದೆ. ಚಿತ್ರಕಲಾ ಜ್ಞಾನ ಪ್ರತ್ಯಕ್ಷಾನುಭವ ನೀಡುವಂಥ ಶಕ್ತಿ ಹೊಂದಿದೆ. ಆ ಕಾರಣ ಶಾಲೆಗಳಲ್ಲಿ ಚಿತ್ರಕಲಾ ಸಂಸ್ಕೃತಿ ಉಳಿಸಿ ಬೆಳೆಸಲು ಕಲೆಯ ಜಪತಪದೊಂದಿಗೆ ಕಲಾ ಶಿಕ್ಷಕರು ಮುಂದಾಗಬೇಕು ಎಂದರು.

ಮಕ್ಕಳಲ್ಲಿ ಕಲಾಸಕ್ತಿ ಕೌಶಲ್ಯ ಮೂಡಿಸಿ. ತಾಕಿ೯ಕ ನವ್ಯ ಚಿಂತನೆಯೊಂದಿಗೆ ಕಲಾ ಲಾವಣ್ಯ ಅರಳಿಸಿ. ಪ್ರತಿ ಮಗುವಿನಲ್ಲೂ ಚಿತ್ರಕಲಾ ಜ್ಞಾನ ಸೃಜನಶೀಲತೆಯಿಂದ ಮೂಡಿಸಬೇಕು. ಅದು ಮಕ್ಕಳ ಮಸ್ತಕದಲ್ಲಿ ಉಲ್ಲಾಸದಿಂದ ಇಳಿಯುವಂತೆ ನೋಡಿಕೊಂಡರೆ ಖಂಡಿತವಾಗಿಯೂ ಮಕ್ಕಳ ಮನದಲ್ಲಿ ಕಲಿಕಾಭಿರುಚಿ ಮೂಡಿಬರಲು ಸಾಧ್ಯ.ಇದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿ ಪ್ರಗತಿ ಕಾಣಬಹುದೆಂದರು. ಈ ವೇದಿಕೆ ಚಿತ್ರಕಲಾ ಶಿಕ್ಷಕರಲ್ಲಿ ಹಾಗು ವಿದ್ಯಾರ್ಥಿ ಸಮೂಹದಲ್ಲಿ ನವ ಚೇತನದ ಉತ್ಸುಕತೆ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಝಂಡೆ ಮಾತನಾಡಿ, ಚಿತ್ರಕಲೆ ವಿಷಯ ಅಭಿವ್ಯಕ್ತ,ಅವ್ಯಕ್ತಭಾವ ಜ್ಞಾನ ಹೊರಸೂಸಬಲ್ಲದು. ಚಲನಶೀಲ ಭಾವನಾಭಿವ್ಯಕ್ತಿ ಸೃಷ್ಟಿಗೆ ಚಿತ್ರಕಲೆ ವಿಷಯಾಭ್ಯಾಸ ಪ್ರೇರಣೆವಾಗಿದೆ. ಇದರಲ್ಲಿನ ವಿಭಿನ್ನ ರೀತಿಯ ಆಲೋಚನಾ ಗುಣದಿಂದ ಮನಸ್ಸಿಗೆ ಸಂತಸ,ಖುಷಿ ದೊರೆಯುತ್ತದೆ. ಕಲಾರಸ ಸ್ವಾದಕರನ್ನಾಗಿ ಮಕ್ಕಳನ್ನು ರೂಪಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.

ಸಂಪನ್ಮೂಲ ವ್ಯಕ್ತಿ ಎಂ.ಕೆ.ಮಕಾನದಾರ, ಶಾಲಾ ಮಕ್ಕಳಿಗೆ ಭಾರತ ನಕ್ಷೆ ಸುಲಲಿತವಾಗಿ ರಚಿಸುವ ಪ್ರಾಯೋಗಿಕ ವಿಧಾನ ಕಪ್ಪು ಹಲಿಕೆಯಲ್ಲಿ ಚಿತ್ರಿಸಿ ಪ್ರಾತ್ಯಕ್ಷಿಕೆ ನೀಡುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮದ ಬಳಿಕ ನಡೆದ ವಿಷಯ ವೇದಿಕೆಯಲ್ಲಿ ಕಲಿಕಾ ಚೇತರಿಕೆ ಎಂದರೇನು ? ಹಾಗು ರೂಪಣಾತ್ಮಕ ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಪರೀಕ್ಷೆ ಅಂಕ ನಮೂದು,ಕ್ರೋಡೀಕರಿಸಿ ನೀಡುವ ಗ್ರೇಡ್‌, ವಿಷಯ ಕ್ಲಿಷ್ಟಕರ ಅಂಶ ಮತ್ತು ಪರಿಹಾರ ಕುರಿತಾದ ಚಚೆ೯ ಶಿಕ್ಷಕರು ಪರಸ್ಪರ ನಡೆಸಿ ಪರಿಹಾರ ಕಂಡುಕೊಂಡರು.

ನಗರ ವಲಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಮಲೇಶ ಭಜಂತ್ರಿ, ಗ್ರಾಮೀಣ ವಲಯದ ಅಧ್ಯಕ್ಷ ಲೋನಾರಮಠ ಸೇರಿದಂತೆ ಸಂಜು ಕುಲಕರ್ಣಿ, ಆನಂದ ಲೋನಾರಮಠ, ಆರ್.ವಿ.ಭುಜಂಗನವರ, ಜೆ.ಎಂ.ಹೊನ್ನಾಳಿ ಮೊದಲಾದವರಿದ್ದರು. ಲಾಲಾನವರ್ ಕಾರ್ಯಕ್ರಮ ನಿರ್ವಹಣೆ ವಹಿಸಿದ್ದರು. ವಿವಿಧ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಳಗ ಭಾಗಿಯಾಗಿತ್ತು.

Leave a Reply

Your email address will not be published. Required fields are marked *

You May Also Like

23 ರಂದು ಉಚಿತ ಆರೋಗ್ಯ, ರಕ್ತದಾನ ಶಿಬಿರ

ಉತ್ತರಪ್ರಭ ಸುದ್ದಿನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ…

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 264546 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 6561 ಪ್ರಕರಣಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿವೆ.