ಉತ್ತರಪ್ರಭ ಸುದ್ದಿ
ಗದಗ: ಮಾನ್ಯ ಶ್ರೀ ಪಿ ಜಿ ಆರ್ ಸಿಂದ್ಯಾ, ಮುಖ್ಯ ಆಯುಕ್ತರು ಭಾರತ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆ ಬೆಂಗಳೂರು ಇವರು ದಿನಾಂಕ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗದಲ್ಲಿ ನಡೆಯುತ್ತಿರುವಂತಹ ಸ್ಕೌಟ್ಸ್ ಅಂಡ್ ಗೈಡ್ಸ್ ಮೂಲ ತರಬೇತಿ ಶಿಬಿರಕ್ಕೆ ಭೇಟಿ ನೀಡಿ, ಪ್ರತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಿ, ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ, ಈ ಸಂಸ್ಥೆಯ ಮೌಲ್ಯಗಳನ್ನ ಮಕ್ಕಳಿಗೆ ತಲುಪಿಸಿ ಆ ಮೂಲಕ ಮಾನವೀಯ ನೆಲೆಯಲ್ಲಿ ಸಮಾಜ ಹಾಗು ಪರಿಸರವನ್ನು ರಕ್ಷಿಸುವ ಮಹತ್ಕಾರ್ಯವನ್ನು ನಾವೆಲ್ಲ ಮಾಡೋಣ ಎಂದು ಕರೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಬೇಕೆಂದು ಕರೆ ನೀಡಿದರು. ಈ ವರ್ಷ ಮೂಡಬಿದ್ರೆ ಯಲ್ಲಿ ನಡೆಯುವ ಜಾಗತಿಕ ಜಾಂಬೋರಿಯಲ್ಲಿ ಎಲ್ಲರೂ ಭಾಗವಹಿಸಲು ಹಾಗೂ ಯಶಸ್ವಿಯಾಗಿಸಲು ತಾವೆಲ್ಲರೂ ಸಂಸ್ಥೆಯೊಂದಿಗೆ ಕೈಜೋಡಿಸಿ ಎಂದರು. ಮಾನ್ಯ ಪ್ರಾಚಾರ್ಯರಾದ ಶ್ರೀ ಎಸ್ ಡಿ ಗಾಂಜಿ ಹಾಗೂ ಶ್ರೀ ಆರ್ ಎಸ್ ಬುರಡಿ, ಶ್ರೀ ಎಚ್ ಬಿ ರಡ್ಡೆರ, ಶ್ರೀ ಪೂಜಾರವರು ಹಾಗೂ ತರಬೇತಿದಾರರು, ಶಿಬಿರಾರ್ಥಿಗಳು ಹಾಜರಿದ್ದರು.