ಮೇ.18ರಿಂದ ಸಾರಿಗೆ ಸಂಚಾರ ಆರಂಭ?

ಬೆಂಗಳೂರು: ಮೇ.18ರಿಂದ ಸಾರಿಗೆ ಸಂಚಾರ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಮೇ.17ಕ್ಕೆ ಲಾಕ್ಡೌನ್ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಬಿಎಂಟಿಸಿ ಆದೇಶವೊಂದನ್ನು ಹೊರಡಿಸಿದ್ದು, ಲಾಕ್ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿದೆ.

ಮೇ 18ರಿಂದ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌ ನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್ ಗಳು ತುರ್ತು ಆರೋಗ್ಯ ಸೇವೆಗಾಗಿ ರಸ್ತೆಗೆ ಇಳಿದಿದ್ದವು. ಅದನ್ನು ಹೊರತುಪಡೆಸಿ ಸಾರ್ವಜನಿಕರ ಓಡಾಟಕ್ಕೆ ಬಿಎಂಟಿಸಿ ಲಭ್ಯವಿರಲಿಲ್ಲ.

ಈಗ ಸರ್ಕಾರವು ಕೊರೊನಾ ವೈರಸ್ ಲಾಕ್ಡೌ ನ್ ಹಿನ್ನೆಲೆ ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಿದೆ. ಸದರಿ ಇಲಾಖೆಯಲ್ಲಿ ಬಿಎಂಟಿಸಿಯು ಒಳಪಡುತ್ತದೆ. ಆದ್ದರಿಂದ ಮೇ 17ರಂದು ಲಾಕ್ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಮೇ 18ರಿಂದ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿದೆ.

Leave a Reply

Your email address will not be published. Required fields are marked *

You May Also Like

ಗೋವಾ ರಾಜ್ಯದ ಕಲಂಗೊಟ್ ಬೀಚ್ ನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ

ಗೊವಾ: ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೆಯ ಜಯಂತಿಯನ್ನು 15/2/22 ರಂದು ಬೆಳಗ್ಗೆ 10:00…

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ

ಇತ್ತಿಚಿಗಷ್ಟೆ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿದ್ದು.ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದ ಕಾರಣ, 5 ವರ್ಷ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,1993ರ ಪ್ರಕರಣ 8(1)ಬಿ(2)ರಡಿ ಕಲಂ 321ರ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು

ರಾಜ್ಯದಲ್ಲಿಂದು 317 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 317 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7530…