ಆಲಮಟ್ಟಿ : ರಾಷ್ಟ್ರ ಪ್ರೇಮಭಕ್ತಿ ಕಲರಮಯವಾಗಿ ಕಗ್ಗತ್ತಿನಲ್ಲಿ ರಾರಾಜಿಸುತ್ತಿದೆ. ಜಲಪರಿಸರ, ಪ್ರವಾಸಿ ತಾಣ ಖ್ಯಾತಿಯ ಆಲಮಟ್ಟಿ ಆಣೆಕಟ್ಟು ಪ್ರದೇಶ ವಾತಾವರಣ ಫೂಲ್ ಈಗ ಕಲರಮಯ ರಂಗೀಲಾ !!! ಕಾರಣ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸೆಲೆಯಿಂದ ಇಲ್ಲಿ ಜಬರ್ದಸ್ತ್ ಕಲರ್ಸ ಮೊಡದ ಕಳೆ ಬಂದಿದೆ…!



ತ್ರಿವರ್ಣ ಕೇಸರಿ, ಬಿಳಿ, ಹಸಿರು ಬಣ್ಣದ ಸುವಾಸನೆ ಆವರಿಸಿದೆ. ಬಗೆಬಗೆಯ ಬಣ್ಣದಿಂದ ಝಗಮಗಿಸುತ್ತಿದೆ. ರಾಷ್ಟ್ರ ಪ್ರೇಮಕ್ಕೆ ಇಲ್ಲಿ ಕಲರ್ ಕಿಚ್ಚು ಹತ್ತಿಕೊಂಡಂತಿದೆ. ದೇಶ ಪ್ರೇಮ ಉತ್ತೇಜನಗೊಂಡಿದೆ. ಬಣ್ಣದ ಸ್ಪರ್ಶದೊಂದಿಗೆ ರಾತ್ರಿ ಅದ್ಬುತವಾಗಿ ಮಿನುಗುತ್ತಿರುವ ಥಳುಕು, ಬಳುಕಿನ ವ್ಯಯಾರ ಕಣ್ಮನ ಸೆಳೆಯುತ್ತಿದೆ. ಬಣ್ಣದ ಲೋಕದಲ್ಲಿ ಆಲಮಟ್ಟಿ ಮಿಂದಿದ್ದು ಶನಿವಾರ ರಾತ್ರಿ ವೇಳೆ ಕಂಗೊಳಿಸಿದ ಪರಿ ನೋಡುಗರ ಕಣ್ಮನ ಸೆಳೆಯುವಂತಿತ್ತು !




ಅಮೃತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ವಿದ್ಯುತ್ ದೀಪಾಲಂಕಾರದಿಂದ ರಾತ್ರಿ ವೇಳೆ ಆಲಮಟ್ಟಿ ಆಣೆಕಟ್ಟಿನ ಪ್ರಮುಖ ಸ್ಪಾಟ್ ಗಳು ಝಗಮಗಿಸಲಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ದೇಶ ಪ್ರೇಮಭಾವದ ಮನದಿಂದ ಇಲ್ಲಿನ ಪರಿಸರ ಮೂರು ದಿನಗಳ ಕಾಲ ವರ್ಣರಂಜಿತ ತ್ರೀಡಿ ವಿಶಿಷ್ಟ ಬಣ್ಣದ ಲೋಕದಲ್ಲಿ ಮಿನುಗಲಿದೆ.