ಆಲಮಟ್ಟಿ:
ಸಮೀಪದ ಬೇನಾಳ ಆರ್ ಎಸ್ ಗ್ರಾಮದ ವಾಕ್ ಸಿದ್ಧಿ ಪುರುಷ ರಾಮಣ್ಣ ಮುತ್ಯಾರ 69 ನೇ ಸ್ಮರಣೋತ್ಸವ ಇದೇ ಆ. 15 ಸೋಮವಾರ ನಡೆಯಲಿದೆ. ಆ.14 ರಾತ್ರಿಯಿಡಿ ವಾದಿ, ಪ್ರತಿವಾದಿ ಭಜನೆಗಳು ಜರುಗಲಿವೆ. ಆ. 15 ಬೆಳಿಗ್ಗೆ 8 ಕ್ಕೆ ರಾಮಣ್ಣ ಮುತ್ಯಾ ಗದ್ದುಗೆಗೆ ಅಭಿಷೇಕ, ಭಾವಚಿತ್ರದ ಮೆರವಣಿಗೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ ಗ್ರಾಮೀಣ ಕಸರತ್ತು ಕ್ರೀಡೆಗಳಾದ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಸ್ಪರ್ಧೆ, ತೆಕ್ಕೆ ಬಡಿದು ಚೀಲ ಎತ್ತವ ಸರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಸಂಗ್ರಾಣಿ ಕಲ್ಲು ವತಗಲ್ಲು ಮಾಡುವ ಸ್ಪರ್ಧೆಗಳು ಜರುಗಲಿವೆ.
ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನವಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.